
ಜೈಪುರ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ ಮೊದಲ ಸೋಲು ಕಂಡಿದೆ. ಸತತ 4 ಗೆಲುವು ಸಾಧಿಸಿದ್ದ ಸಂಜು ಸ್ಯಾಮನ್ ಪಡೆಗೆ ಗುಜರಾತ್ ಟೈಟಾನ್ಸ್ ವಿರುದ್ದ ಬುಧವಾರ 3 ವಿಕೆಟ್ ಸೋಲು ಎದುರಾಯಿತು. ಪಂದ್ಯದ ಎರಡೂ ಇನ್ನಿಂಗ್ಸ್‌ಗಳು ಆಕರ್ಷಕ ಜೊತೆಯಾಟಗಳಿಗೆ ಸಾಕ್ಷಿಯಾದವು. ಮೊದಲು 42ಕ್ಕೆ 2ರಿಂದ ಚೇತರಿಸಿಕೊಂಡ ರಾಜಸ್ಥಾನ, ಸ್ಯಾಮನ್ ಹಾಗೂ ರಿಯಾನ್ ಪರಾಗ್ ಶತಕದ ಜೊತೆಯಾಟದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 196 ರನ್ ಕಲೆಹಾಕಿತು.
11 ಎಸೆತದಲ್ಲಿ 24 ರನ್ ಸಿಡಿಸಿದ ರಶೀದ್ ಖಾನ್: ದೊಡ್ಡ ಮೊತ್ತ ಬೆನ್ನತ್ತಿದ ಗುಜರಾತ್, 18ನೇ ಓವರಲ್ಲಿ 157ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಗೆಲ್ಲಲು 15 ಎಸೆತದಲ್ಲಿ 30 ರನ್‌ಗಳ ಅವಶ್ಯಕತೆ ಇದ್ದಾಗ, ರಾಹುಲ್ ತೆವಾಟಿಯಾ (11 ಎಸೆತದಲ್ಲಿ 22 ರನ್) ಹಾಗೂ ರಶೀದ್ ಖಾನ್ 7ನೇ ವಿಕೆಟ್‌ಗೆ 2.2 ಓವರಲ್ಲಿ 28 ರನ್ ಸೇರಿಸಿ ತಂಡವನ್ನು ಜಯದ ಹೊಸ್ತಿಲಿಗೆ ತಂದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಬೌಂಡರಿ ಬಾರಿಸಿದ ರಶೀದ್ ( (11 ಎಸೆತದಲ್ಲಿ 24 ರನ್), ಟೈಟಾನ್ಸ್ ಪಡೆಯನ್ನು ಹ್ಯಾಟ್ರಿಕ್ ಸೋಲಿನಿಂದ ಪಾರು ಮಾಡಿದರು. ನಾಯಕ ಶುಭಮನ್ ಗಿಲ್ 44 ಎಸೆತದಲ್ಲಿ 72 ರನ್ ಸಿಡಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
IPL 2024: ಸಂಜು-ರಿಯಾನ್ ಸಖತ್ ಬ್ಯಾಟಿಂಗ್, ಟೈಟಾನ್ಸ್‌ಗೆ 197 ರನ್ ಟಾರ್ಗೆಟ್
ಇದಕ್ಕೂ ಮುನ್ನ ಸಂಜು ಸ್ಯಾಮನ್ 38 ಎಸೆತದಲ್ಲಿ 68 ರನ್ ಚಚ್ಚಿ ಔಟಾಗದೆ ಉಳಿದರೆ, ರಿಯಾನ್ ಪರಾಗ್ 48 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 76 ರನ್ ಸಿಡಿಸಿ, ಟೂರ್ನಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು.
ಸ್ಕೋರ್: ರಾಜಸ್ಥಾನ 20 ಓವರಲ್ಲಿ 196/3 (ರಿಯಾನ್ 76, ಸ್ಯಾಟ್ಸನ್ 68, ರಶೀದ್ 1-18), ಗುಜರಾತ್ 20 ಓವರಲ್ಲಿ 199/7 (ಗಿಲ್ 72, ಸುದರ್ಶನ್ 35, ರಶೀದ್ 24*, ಕುಲೀಪ್ ಸೇನ್ 3-41) ಪಂದ್ಯಶ್ರೇಷ್ಠ: ರಶೀದ್ ಖಾನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.