ಬುಮ್ರಾ, ಕೊಹ್ಲಿ, ಪಾಂಡ್ಯ ಅಲ್ಲವೇ ಅಲ್ಲ: ಟಿ20 ವಿಶ್ವಕಪ್ ಗೆದ್ದಿದ್ದೇ ಈ ಮೂವರಿಂದ: ಅಚ್ಚರಿ ಹೇಳಿಕೆ ಕೊಟ್ಟ ರೋಹಿತ್ ಶರ್ಮಾ..!

By Naveen KodaseFirst Published Aug 23, 2024, 7:15 PM IST
Highlights

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ನಿಜವಾದ ಶಿಲ್ಪಿಗಳು ಯಾರೆಂದು ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ. ಗೆಲುವಿನ ಹಿಂದಿನ ಮೂರು ಪ್ರಮುಖ ಆಧಾರ ಸ್ತಂಭಗಳನ್ನು ರೋಹಿತ್ ನೆನೆದಿದ್ದಾರೆ. ವಿಶ್ವಕಪ್ ಗೆಲುವಿನ ಕ್ಷಣವನ್ನು ರೋಹಿತ್ ಮೆಲುಕು ಹಾಕಿದ್ದಾರೆ.

ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಗೆದ್ದು ಎರಡು ತಿಂಗಳು ಕಳೆದರೂ ಈ ಕುರಿತಾದ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇದೆ. ಟೀಂ ಇಂಡಿಯಾ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಿರ್ಣಾಯಕ ಘಟ್ಟದಲ್ಲಿ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಅರ್ಧಶತಕವನ್ನು ಯಾರೂ ಮರೆಯುವಂತಿಲ್ಲ. ಹೀಗಿರುವಾಗ ಭಾರತಕ್ಕೆ ಚುಟುಕು ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ನಿಜವಾದ ಆಧಾರಸ್ತಂಬ ಯಾರು ಎನ್ನುವುದರ ಬಗ್ಗೆ ತುಟಿಬಿಚ್ಚಿದ್ದಾರೆ.

ಕಳೆದ ಜೂನ್‌ನಲ್ಲಿ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ರೋಚಕವಾಗಿ ಮಣಿಸಿ ಎರಡನೇ ಬಾರಿಗೆ ಭಾರತ ಚುಟುಕು ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ 2007ರ ಬಳಿಕ ಭಾರತ ತಂಡವು ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸವಲ್ಲಿ ಯಶಸ್ವಿಯಾಗಿತ್ತು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಇದೀಗ ಭಾರತ ಟಿ20 ವಿಶ್ವಕಪ್ ಗೆಲ್ಲಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ಹೆಡ್‌ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕಾರಣ ಎಂದು ಹೇಳಿದ್ದಾರೆ.

Latest Videos

ರೋಹಿತ್ ಶರ್ಮಾ ಮೆಚ್ಚಿದ ಹುಡುಗ, ಮಿಥುನ್ ಪ್ರಿಯ ಶಿಷ್ಯ, ಇವನು ಕರ್ನಾಟಕದ 'ಟ್ರೆಂಟ್ ಬೌಲ್ಟ್'!

"ನಾನು ನಂಬರ್ ಹಾಗೂ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆಟಗಾರರು ಅವರ ಸಾಮರ್ಥ್ಯಕ್ಕೆ ತಕ್ಕಂತ ವಾತಾವರಣವನ್ನು ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಆಗಷ್ಟೇ ಆಟಗಾರರು ಮುಕ್ತವಾಗಿ ಆಡಲು ಸಾಧ್ಯವಾಗುತ್ತದೆ ಎಂದು ಗೊತ್ತಿತ್ತು" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

CEAT ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರೋಹಿತ್ ಶರ್ಮಾ, "ಅದಕ್ಕೆ ಬೇಕಾದ ಎಲ್ಲಾ ನೆರವುಗಳು ನನಗೆ ಮೂರು ಪಿಲ್ಲರ್‌ಗಳಿಂದ ಸಿಕ್ಕಿತು. ಆ ಮೂರು ಪಿಲ್ಲರ್‌ಗಳು ಮತ್ಯಾರು ಅಲ್ಲ, ಅವರೇ  ಜಯ್ ಶಾ, ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್" ಎಂದು ಹೇಳಿದ್ದಾರೆ.

IPL 2025 ಕೆ ಎಲ್ ರಾಹುಲ್ ಜತೆ ಈ ಮೂವರು ಕನ್ನಡಿಗರನ್ನು ಕರೆತರಲು ಆರ್‌ಸಿಬಿ ಮಾಸ್ಟರ್ ಪ್ಲಾನ್..!

ಇನ್ನು ಇವರ ಸಹಕಾರ ಹಾಗೂ ಅಗತ್ಯ ಸಂದರ್ಭದಲ್ಲಿ ಆಟಗಾರರು ವಿವಿಧ ಸಂದರ್ಭದಲ್ಲಿ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡ ಈ ಸಾಧನೆ ಮಾಡಲು ಕಾರಣೀಕರ್ತರಾದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಆ ಟಿ20 ವಿಶ್ವಕಪ್ ಗೆಲುವಿನ ಕ್ಷಣವನ್ನು ಸ್ಮರಿಸಿಕೊಳ್ಳುವುದಾದರೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, "ಆ ಕ್ಷಣ ಜೀವನದಲ್ಲಿ ಪ್ರತಿದಿನ ಬರುವುದಿಲ್ಲ. ನಾವು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು. ನಾವು ಯಾವಾಗ ವಿಶ್ವಕಪ್ ಗೆದ್ದೆವೋ, ಆ ಕ್ಷಣವನ್ನು ಎಂಜಾಯ್ ಮಾಡುವುದಷ್ಟೇ ಗುರಿಯಾಗಿತ್ತು. ಇನ್ನು ನಮ್ಮ ಜತೆಗೆ ಇಡೀ ದೇಶವೇ ಸಂಭ್ರಮಿಸಿತು ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.

click me!