ಕರ್ನಾಟಕಕ್ಕೆ ಮರಳಿ ಬಂದ ಆಪದ್ಬಾಂಧವ! 'ಹೋಗುವುದಾದರೆ ಹೋಗಲಿ ಬಿಡಿ' ಎಂದವರೇ ಶ್ರೇಯಸ್‌ಗೆ ಮಣೆ ಹಾಕಿದ್ದಾರೆ..!

By Suvarna News  |  First Published Aug 23, 2024, 3:32 PM IST

ಕರ್ನಾಟಕದ ಅನುಭವಿ ಬೌಲಿಂಗ್ ಆಲ್ರೌಂಡರ್ ಶ್ರೇಯಸ್ ಗೋಪಾಲ್, ಕೇರಳ ತಂಡವನ್ನು ತೊರೆದು ತವರಿಗೆ ವಾಪಾಸ್ಸಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


- ಸುದರ್ಶನ್, ಸುವರ್ಣ ನ್ಯೂಸ್

ಬೆಂಗಳೂರು: ‘ಆ ಕ್ರಿಕೆಟಿಗ ಆ ರಾಜ್ಯಕ್ಕೆ ಹೋದ.. ಈ ಕ್ರಿಕೆಟಿಗ ರಾಜ್ಯವನ್ನು ತೊರೆದು ಹೋದ.. ಇವನು ಹೋದ, ಅವನು ಹೋದ’ ಎಂಬ ಸುದ್ದಿಗಳನ್ನು ಕೇಳಿ ಕೇಳಿ ಬೇಸರಗೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಗಳಿಗೆ ಇದು ಶುಭ ಸುದ್ದಿ.

Tap to resize

Latest Videos

ಕರ್ನಾಟಕ ರಣಜಿ ತಂಡದ ಆಪತ್ಬಾಂಧನ ಮರಳಿ ರಾಜ್ಯಕ್ಕೆ ಬಂದಿದ್ದಾನೆ. ಕರ್ನಾಟಕ ಪರ 11 ವರ್ಷ ಆಡಿ, ಕಳೆದ ಬಾರಿ ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಈ ವರ್ಷದಿಂದ ಮತ್ತೆ ಕರ್ನಾಟಕ ಪರ ಆಡಲು ಸಜ್ಜಾಗಿದ್ದಾನೆ.

ಕಳೆದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದಿರುವ ಪ್ರಮುಖ ಆಟಗಾರರ ಸಂಖ್ಯೆ 10. ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ರೋಹನ್ ಕದಂ, ಆರ್.ಸಮರ್ಥ್.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ವರ್ಷ ಕೃಷ್ಣಪ್ಪ ಗೌತಮ್ ಕೂಡ ಕರ್ನಾಟಕ ತಂಡವನ್ನು ತೊರೆಯುವ ಯೋಚನೆಯಲ್ಲಿದ್ದಾರೆ. ಮಾಹಿತಿಯ ಪ್ರಕಾರ ಯಾವುದಾದರೂ ರಾಜ್ಯದಿಂದ confirmation ಸಿಕ್ಕಿದ ಕೂಡಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಗೌತಮ್ NOC ಪಡೆಯಲಿದ್ದಾನೆ.

ರೋಹಿತ್ ಶರ್ಮಾ ಮೆಚ್ಚಿದ ಹುಡುಗ, ಮಿಥುನ್ ಪ್ರಿಯ ಶಿಷ್ಯ, ಇವನು ಕರ್ನಾಟಕದ 'ಟ್ರೆಂಟ್ ಬೌಲ್ಟ್'!

ಕಳೆದ ವರ್ಷ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡ ಸೇರಿಕೊಂಡಿದ್ದ ಶ್ರೇಯಸ್ ಗೋಪಾಲ್ ಕರ್ನಾಟಕದ ರಣಜಿ ಹೀರೋಗಳಲ್ಲಿ ಒಬ್ಬ. ರಾಜ್ಯ ತಂಡ 2013ರಿಂದ 2015ರವರೆಗೆ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದು “ಅವಳಿ ತ್ರಿವಳಿ” ಸಾಧನೆ ಮಾಡಿದಾಗ, ಆ ಐತಿಹಾಸಿಕ ತಂಡದ ಭಾಗವಾಗಿದ್ದವನು ಶ್ರೇಯಸ್ ಗೋಪಾಲ್.

ಪರಿಣಾಮಕಾರಿ ಲೆಗ್’ಸ್ಪಿನ್ನರ್, ಕೆಳ ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್’ಮನ್. ಕೇರಳಕ್ಕೆ ವಲಸೆ ಹೋಗುವ ಮುನ್ನ ಕರ್ನಾಟಕ ರಣಜಿ ತಂಡದ ಆಪದ್ಬಾಂಧವನಾಗಿದ್ದವನು ಶ್ರೇಯಸ್ ಗೋಪಾಲ್. ಅದರಲ್ಲೂ ಆರ್.ವಿನಯ್ ಕುಮಾರ್ ಕರ್ನಾಟಕ ತಂಡವನ್ನು ತೊರೆದ ನಂತರ, ಕೆಳ ಕ್ರಮಾಂಕದಲ್ಲಿ ವಿನಯ್ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಆಟಗಾರ ಯಾರಾದರೂ ಇದ್ದರೆ ಅದು ಶ್ರೇಯಸ್ ಗೋಪಾಲ್.

IPL 2025 ಕೆ ಎಲ್ ರಾಹುಲ್ ಜತೆ ಈ ಮೂವರು ಕನ್ನಡಿಗರನ್ನು ಕರೆತರಲು ಆರ್‌ಸಿಬಿ ಮಾಸ್ಟರ್ ಪ್ಲಾನ್..!

ಆದರೆ ಕ್ರಿಕೆಟ್’ನ ಮೂರೂ ಫಾರ್ಮ್ಯಾಟ್’ಗಳಲ್ಲಿ ಆಡಲು ಬಯಸಿದ್ದ ಶ್ರೇಯಸ್ ಗೋಪಾಲ್’ಗೆ ಆ ಅವಕಾಶವನ್ನು ತಪ್ಪಿಸಲಾಯಿತು. ಪ್ರವೀಣ್ ದುಬೆ ಎಂಬ ಆಟಗಾರನಿಗಾಗಿ ಶ್ರೇಯಸ್ ಗೋಪಾಲ್’ನನ್ನು ಕಡೆಗಣಿಸಲಾಯಿತು. ಆತನನ್ನು ರೆಡ್ ಬಾಲ್ ಕ್ರಿಕೆಟ್’ಗೆ ಮಾತ್ರ ಬ್ರ್ಯಾಂಡ್ ಮಾಡಲಾಯಿತು. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಕೈ ತಪ್ಪಿದ ಅವಕಾಶ ಆತನ ಐಪಿಎಲ್ ವೃತ್ತಿಜೀವನಕ್ಕೂ ಪೆಟ್ಟು ಕೊಟ್ಟಿತು. 

ತನ್ನ ಪ್ರತಿಭೆಗೆ ಬೆಲೆ ಇರದ ಕಡೆ ಇರುವುದಕ್ಕಿಂತ ಹೊರ ನಡೆಯುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಶ್ರೇಯಸ್ ಗೋಪಾಲ್, ಕೇರಳ ಪರ ಆಡಲು 2 ವರ್ಷ ಒಪ್ಪಂದ ಮಾಡಿಕೊಂಡು ಬಿಟ್ಟ. ಈಗ ಶ್ರೇಯಸ್ ಗೋಪಾಲನ ಮೌಲ್ಯ ನಮ್ಮವರಿಗೆ ಅರ್ಥವಾದಂತಿದೆ. 

‘ಹೋಗುವುದಾದರೆ ಹೋಗಲಿ ಬಿಡಿ’ ಎಂದವರೇ ಶ್ರೇಯಸ್’ನನ್ನು ಮರಳಿ ಕರೆಸಿಕೊಂಡಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಡಿದುಕೊಂಡು ಕರ್ನಾಟಕ ಪರ ಆಡಲು ಶ್ರೇಯಸ್ ಗೋಪಾಲ್ ರೆಡಿಯಾಗಿದ್ದಾನೆ.

click me!