ಗಣೇಶೋತ್ಸವದಲ್ಲಿ ವಿಶ್ವಕಪ್ ಗೆಲುವಿನ ಸಂಭ್ರಮ ರಿಪೀಟ್; ಸ್ಪೆಷಲ್ ಗೆಸ್ಟ್ ಆಗಿ ರೋಹಿತ್ ಭಾಗಿ

Published : Sep 07, 2024, 01:07 PM IST
ಗಣೇಶೋತ್ಸವದಲ್ಲಿ ವಿಶ್ವಕಪ್ ಗೆಲುವಿನ ಸಂಭ್ರಮ ರಿಪೀಟ್; ಸ್ಪೆಷಲ್ ಗೆಸ್ಟ್ ಆಗಿ ರೋಹಿತ್ ಭಾಗಿ

ಸಾರಾಂಶ

ಭಾರತ ಟಿ20 ವಿಶ್ವಕಪ್ ಗೆದ್ದು ತಿಂಗಳೂಗಳೇ ಕಳೆದರೂ ಅದರ ಕ್ರೇಜ್‌ ಇನ್ನೂ ಕಡಿಮೆಯಾದಂತೆ ಇಲ್ಲ. ಇದೀಗ ಮುಂಬೈನಲ್ಲಿ ಮತ್ತೊಮ್ಮೆ  ವಿಶ್ವಕಪ್ ವೀರರ ವಿಜಯೋತ್ಸವ ನಡೆಸಲಾಗಿದೆ.

ಮುಂಬೈ: ಭಾರತ ಟಿ20 ವಿಶ್ವಕಪ್ ಗೆದ್ದು, ಎರಡು ತಿಂಗಳಾಗಿದೆ. ಆದ್ರೆ, ಇನ್ನು ವಿಶ್ವಕಪ್ ಗೆಲುವಿನ ಸಂಭ್ರಮ ನಿಂತಿಲ್ಲ. ಮುಂಬೈನಲ್ಲಿ ಮತ್ತೊಮ್ಮೆ  ವಿಶ್ವಕಪ್ ವೀರರ ವಿಜಯೋತ್ಸವ ನಡೆಸಲಾಗಿದೆ. ಈ ಬಾರಿ ರೋಹಿತ್ ಶರ್ಮಾ ಪಡೆಯ ವಿಕ್ಟರಿ ಪರೇಡ್‌ನಲ್ಲಿ ಸ್ಪೆಷಲ್ ಗೆಸ್ಟ್ ಭಾಗಿಯಾಗಿದ್ದಾರೆ.  

ಇನ್ನು ನಿಂತಿಲ್ಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ..!
 
ಈ ವರ್ಷ ಜೂನ್‌ನಲ್ಲಿ ನಡೆದ  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನ ಮಣಿಸಿ, ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. 17 ವರ್ಷಗಳ ನಂತರ ಭಾರತ ಟಿ20 ವಿಶ್ವಕಪ್ ಎತ್ತಿಹಿಡಿಯಿತು. ದೇಶಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನು ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್ ಗೆದ್ದು ಭಾರತಕ್ಕೆ ಆಗಮಿಸಿದ, ರೋಹಿತ್ ಪಡೆಗೆ ಭಾರತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. 

ದೇಶದಲ್ಲೇ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಆಟಗಾರ ವಿರಾಟ್ ಕೊಹ್ಲಿ; ಧೋನಿ, ಸಚಿನ್ ಕಟ್ಟುವ ತೆರಿಗೆ ಎಷ್ಟು?

ಮುಂಬೈನಲ್ಲಿ ವಿಶ್ವಕಪ್ ವೀರರು ವಿಕ್ಟರಿ ಪರೇಡ್  ನಡೆಸಿದ್ರು. ಲಕ್ಷಾಂತರ ಅಭಿಮಾನಿಗಳ ಅಭಿಮಾನ ಸಾಗರದಲ್ಲಿ ಮುಳುಗೆದ್ರು.  2 ಕಿ.ಮೀವರೆಗೂ ನಡೆದ ವಿಕ್ಟರಿ ಪರೇಡ್ ನಂತರ, ವಾಂಖೇಡೆ ಸ್ಟೇಡಿಯಂನಲ್ಲಿ ವಿಶ್ವ ವಿಜೇತರಿಗೆ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಈ ಐತಿಹಾಸಿಕ ಕಾರ್ಯಕ್ರಮ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಭಾರತೀಯ ಕ್ರಿಕೆಟ್ ಜಗತ್ತಿಗೆ ಮರೆಯಲಾರದ ನೆನಪುಗಳನ್ನ ನೀಡಿತು. 

ಇದೆಲ್ಲಾ ನಡೆದು ಎರಡು ತಿಂಗಳಾಗಿದೆ.  ಇದೆಲ್ಲ ನಮಗೆ ಗೊತ್ತೇ ಇದೆ. ಈಗ ಮತ್ಯಾಕೆ ಹೇಳ್ತಿದ್ದಾರೆ ಅನ್ಕೊಂಡ್ರಾ..? ವ್ಹೇಟ್.. ವ್ಹೇಟ್.. ಅಲ್ಲಿಗೆ ಬರ್ತಿದ್ದೀವಿ. ಭಾರತದಲ್ಲಿ ಕ್ರಿಕೆಟ್ ಬರೀ ಆಟವಲ್ಲ, ಧರ್ಮ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಭಾರತ ವಿಶ್ವಕಪ್ ಗೆಲ್ಬೇಕು ಅಂತ ಅಭಿಮಾನಿಗಳು ಪೂಜೆ ಸಲ್ಲಿಸ್ತಾರೆ. ಗೆದ್ಮೇಲೆ ದೇವರಿಗೆ ಹರಕೆ ತೀರಿಸ್ತಾರೆ. ಈಗ ಅಂತದ್ದೇ ಘಟನೆ ರಿಪೀಟ್ ಆಗಿದೆ. 

ಕೇವಲ 6 ರನ್‌ಗೆ ಇಡೀ ಟೀಮ್‌ ಆಲೌಟ್..! ಸೊನ್ನೆ ಸುತ್ತಿದ 7 ಬ್ಯಾಟರ್‌, ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಯ್ತು ಕೆಟ್ಟ ದಾಖಲೆ..!

ಟಿ20 ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಅಭಿಮಾನಿಗಳು ಗಣೆಶೋತ್ಸವದಲ್ಲಿ ಮುಂದುವರಿಸಿದ್ದಾರೆ. ಮುಂಬೈನಲ್ಲಿ ನಡೆದ  ವಿಶ್ವಕಪ್ ವಿಜಯೋತ್ಸವ ರ್ಯಾಲಿಯನ್ನ ರಿಕ್ರಿಯೇಟ್ ಮಾಡಿದ್ದಾರೆ. ಆದ್ರೆ, ಕ್ರಿಕೆಟರ್ಸ್ ಜೊತೆಗೆ ಗಾಡ್‌ ಗಣೇಶ ಕೂಡ ಇದ್ರಲ್ಲಿ ಭಾಗಿಯಾಗಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗೆ, ಗಣೇಶ್ ಮಹಾರಾಜ್,  ಟಿ20 ವರ್ಲ್ಡ್‌ಕಪ್ ಹಿಡಿದುಕೊಂಡು ಓಪೆನ್ ಬಸ್ನಲ್ಲಿ ರ್ಯಾಲಿ ಮಾಡ್ತಿದ್ದಾರೆ.

ವಿಶ್ವಕಪ್ ಗೆಲ್ಲೋದಕ್ಕೆ ವಿಘ್ನ ನಿವಾರಕನ ಆಶೀರ್ವಾದವೂ ಕಾರಣ..!

ಯೆಸ್, ಭಾರತ ಟಿ20 ವಿಶ್ವಕಪ್ ಗೆಲ್ಲೋದಕ್ಕೆ ವಿಘ್ನ ನಿವಾರಕನ ಆಶೀರ್ವಾದವೂ ಕಾರಣ. ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ರೋಹಿತ್ ಮುಂಬೈ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಕಪ್ ಗೆದ್ಮೇಲೂ ಟ್ರೋಫಿ ಸಮೇತ ರೋಹಿತ್ ದೇವಸ್ಥಾನಕ್ಕೆ ಭೇಟಿ ನೀಡಿ, ಹರಕೆ ತೀರಿಸಿದ್ರು. 

ಅದೇನೆ ಇರಲಿ, ಟೀಂ ಇಂಡಿಯಾ ಮೇಲೆ ಗಣೇಶನ ಕೃಪಾಕಟಾಕ್ಷ ಹೀಗೆ ಇರಲಿ, ಭಾರತ ಮತ್ತಷ್ಟು ಕಪ್ಗಳನ್ನ ಗೆಲ್ಲಲಿ ಅನ್ನೋದೆ ನಮ್ಮ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!