
ಮುಂಬೈ(ಮೇ.03): ರೋಹಿತ್ ಶರ್ಮಾ ಕ್ರೀಸ್‌ಗಿಳಿದರೆ ಬೌಲರ್‌ಗಳು ತಬ್ಬಿಬ್ಬಾಗುತ್ತಾರೆ. ಕಾರಣ ರೋಹಿತ್ ಮೊದಲ ಆರಂಭ ನಿಧಾನವಾಗಿದ್ದರೂ ಕೆಲ ನಿಮಿಷಗಳಲ್ಲೇ ಬೌಲರ್ ಮೇಲೆ ಸವಾರಿ ಮಾಡುತ್ತಾರೆ. ಆದರೆ ಕೆಲ ಬೌಲರ್ ವಿರುದ್ಧ ಆಡುವಾಗ ರೋಹಿತ್ ಶರ್ಮಾ ಸಂಕಷ್ಟ ಅನುಭವಿಸಿದ್ದಾರೆ. ಈ ರೀತಿ ರೋಹಿತ್‌ಗೆ ಪ್ರತಿ ಬಾರಿ ಸಂಕಷ್ಟ ನೀಡಿದ ಬೌಲರ್‌ಗಳ ಪಟ್ಟಿಯನ್ನು ಸ್ವತಃ ರೋಹಿತ್ ಶರ್ಮಾ ನೀಡಿದ್ದಾರೆ.
ಧೋನಿಯಿಂದ ಕೊಹ್ಲಿ: ಮೊದಲ ಸಂಬಳವೆಷ್ಟು? ಈಗಿನ ಸಂಬಳವೆಷ್ಟು?
ರೋಹಿತ್ ಶರ್ಮಾ ಕರಿಯರ್ ಆರಂಭಿಕ ದಿನದಲ್ಲಿ ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ಹಾಗೂ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಅತ್ಯಂತ ಕಠಿಣ ಬೌಲರ್ ಆಗಿದ್ದರು ಎಂದಿದ್ದಾರೆ. ಬ್ರೆಟ್ ಲೀ ವಿಶ್ವದ ಅತ್ಯಂತ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಲೈನ್ ಅಂಡ್ ಲೆಂಥ್, ಬ್ರೆಟ್ ಲೀ ಪೇಸ್‌ಗೆ ಆಡುವುದೇ ಕಷ್ಟವಾಗಿತ್ತು ಎಂದಿದ್ದಾರೆ. ಇನ್ನು ಪದಾರ್ಪಣಾ ಪಂದ್ಯದಲ್ಲಿ ರೋಹಿತ್ ಶರ್ಮಾ ಡೇಲ್ ಸ್ಟೇನ್ ಎದುರಿಸಿದ್ದರು. ಬಳಿಕ ಸ್ಟೇನ್ ಮುಖಾಮುಖಿಯಲ್ಲಿ ರೋಹಿತ್ ಶರ್ಮಾಗೆ ನೈಜ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ರೋಹಿತ್ ಪುತ್ರಿ ಸಮೈರಾ!..
ಹಾಲಿ ವೇಗಿಗಳ ಪೈಕಿ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಹಾಗೂ ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಬೌಲಿಂಗ್ ಎದುರಿಸುವುದು ಕಠಿಣವಾಗಿದೆ ಎಂದಿದ್ದಾರೆ. ಈ ಇಬ್ಬರು ಬೌಲರ್ ಶಿಸ್ತು ಹಾಗೂ ಲೈನ್ ಬ್ಯಾಟ್ಸ್‌ಮನ್‌ಗಳಿಗೆ ಸಂಕಷ್ಟ ತರುತ್ತದೆ. ಇದಕ್ಕೆ ನಾನೂ ಹೊರತಲ್ಲ. ಇವರಿಬ್ಬರನ್ನು ಎದುರಿಸುವುದು ಸವಾಲು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.