ಸದ್ಯ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಅಮೆರಿಕಗೆ ಬಂದಿಳಿದಿದೆ. ಇದೀಗ ಅಭಿಮಾನಿಗಳು ಯುಎಸ್‌ಎನಲ್ಲಿ ಪಾಕಿಸ್ತಾನದ ಆಟಗಾರರ ಜತೆ ಖಾಸಗಿ ಡಿನ್ನರ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಭಿಮಾನಿಗಳಿಗೆ ವಿಶೇಷವಾಗಿ ಈ ಅವಕಾಶ ಮಾಡಿಕೊಟ್ಟಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನ್ಯೂಯಾರ್ಕ್‌: ಪಾಕಿಸ್ತಾನ ಕ್ರಿಕೆಟ್ ತಂಡ ಎಂದರೆ ಅಲ್ಲಿ ಒಂದಲ್ಲಾ ಒಂದು ವಿವಾದ ಇದ್ದೇ ಇರುತ್ತದೆ. ಅದು ಒಮ್ಮೊಮ್ಮೆ ಮೈದಾನದೊಳಗೆ ವಿವಾದ ಮಾಡಿಕೊಂಡರೆ, ಮತ್ತೆ ಹಲವು ಬಾರಿ ಮೈದಾನದಾಚೆ ವಿವಾದ ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದೆ. ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಅಭಿಯಾನ ಆರಂಭಿಸುವ ಮುನ್ನವೇ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಸದ್ಯ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಅಮೆರಿಕಗೆ ಬಂದಿಳಿದಿದೆ. ಇದೀಗ ಅಭಿಮಾನಿಗಳು ಯುಎಸ್‌ಎನಲ್ಲಿ ಪಾಕಿಸ್ತಾನದ ಆಟಗಾರರ ಜತೆ ಖಾಸಗಿ ಡಿನ್ನರ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಅಭಿಮಾನಿಗಳಿಗೆ ವಿಶೇಷವಾಗಿ ಈ ಅವಕಾಶ ಮಾಡಿಕೊಟ್ಟಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹಾಗಂತ ಈ ಅವಕಾಶ ಉಚಿತವೇನಲ್ಲ. ಪಾಕಿಸ್ತಾನದ ಕ್ರಿಕೆಟಿಗರ ಜತೆ ಪ್ರೈವೇಟ್ ಡಿನ್ನರ್ ಮಾಡಬೇಕಿದ್ದರೇ ಮುಂಚಿತವಾಗಿಯೇ ಸುಮಾರು 25 ಯುಎಸ್ ಡಾಲರ್(ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ₹2,083) ನೀಡಬೇಕಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಾಡಿರುವ ಈ ವಿನೂತನ ಆಲೋಚನೆಯ ಕುರಿತಂತೆ ಪಾಕ್ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ರಶೀದ್ ಲತೀಫ್ ಸೋಷಿಯಲ್ ಮೀಡಿಯ ಎಕ್ಸ್‌(ಟ್ವಿಟರ್)ನಲ್ಲಿ ಕಿಡಿ ಕಾರಿದ್ದಾರೆ.

"ಸಾಮಾನ್ಯವಾಗಿ ಔಪಚಾರಿಕ ಡಿನ್ನರ್‌ಗಳಿರುತ್ತವೆ, ಅದರೆ ಇದು ಖಾಸಗಿ ಡಿನ್ನರ್. ಇದನ್ನೆಲ್ಲಾ ಯಾರು ಮಾಡುತ್ತಾರೆ? ಇದು ದುರಂತ. ಹಾಗದರೆ ಯಾರು ಬೇಕಿದ್ದರೂ ಕೇವಲ 25 ಡಾಲರ್ ನೀಡಿ ನಮ್ಮ ಆಟಗಾರರನ್ನು ಭೇಟಿಯಾಗಬಹುದು ಅಂತ ಅರ್ಥ ಅಲ್ಲವೇ. ಹುಡುಗರು ದುಡ್ಡು ಮಾಡುವುದಕ್ಕಾಗಿ ಬಂದಿದ್ದಾರೆ ಎಂದು ಜನರು ಮಾತನಾಡುವ ಸಮಯ ದೂರವಿಲ್ಲ" ಎಂದು ಲತೀಫ್ ಕಿಡಿಕಾರಿದ್ದಾರೆ.

Scroll to load tweet…

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪಿಸಿಬಿಯ ಈ ಯೋಜನೆಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಪಾಕಿಸ್ತಾನದ ಆಟಗಾರರಿಗೆ ಎಂತಹ ಪರಿಸ್ಥಿತಿ ಬಂತು ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ. 

Scroll to load tweet…
Scroll to load tweet…

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದಲೇ ಆರಂಭವಾಗಿದ್ದರೂ, ಪಾಕಿಸ್ತಾನ ತಂಡವು ಇನ್ನು ಮೊದಲ ಪಂದ್ಯವನ್ನಾಡಿಲ್ಲ. ಜೂನ್ 06ರಂದು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಯುಎಸ್‌ಎ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೆ ಸ್ಟೇಡಿಯಂ ಆತಿಥ್ಯ ವಹಿಸಿದೆ.