ಅಮೆರಿಕಕ್ಕೆ ಹೋಲಿಸಿದರೆ ಪಾಕ್ ಬಲಿಷ್ಠ ತಂಡ. ಆದರೆ ವಿಶ್ವಕಪ್‌ಗೂ ಮುನ್ನ ಬಾಂಗ್ಲಾ ವಿರುದ್ಧ ಸರಣಿ ಗೆದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಭರ್ಜರಿ ಜಯಗಳಿಸಿದ್ದ ಅಮೆರಿಕ ತವರಿನಲ್ಲಿ ಮತ್ತೊಂದು ಗೆಲುವಿಗಾಗಿ ಕಾಯುತ್ತಿದೆ.
ಟೆಕ್ಸಾಸ್: ಟಿ20 ವಿಶ್ವಕಪ್‌ನಲ್ಲಿ 2ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ಪಾಕಿಸ್ತಾನ ಗುರುವಾರ 2024ರ ಟಿ20 ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿಲಿವೆ. ಬಾಬರ್ ಅಜಂ ನೇತೃತ್ವದ ಪಾಕ್ ತಂಡ ಅಮೆರಿಕ ವಿರುದ್ಧ ಸೆಣಸಲಿದೆ.
ಪಾಕ್‌ಗೆ ಎದುರಾಗುತ್ತಾ ಕಠಿಣ ಸವಾಲು?
undefined
ಅಮೆರಿಕಕ್ಕೆ ಹೋಲಿಸಿದರೆ ಪಾಕ್ ಬಲಿಷ್ಠ ತಂಡ. ಆದರೆ ವಿಶ್ವಕಪ್‌ಗೂ ಮುನ್ನ ಬಾಂಗ್ಲಾ ವಿರುದ್ಧ ಸರಣಿ ಗೆದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಭರ್ಜರಿ ಜಯಗಳಿಸಿದ್ದ ಅಮೆರಿಕ ತವರಿನಲ್ಲಿ ಮತ್ತೊಂದು ಗೆಲುವಿಗಾಗಿ ಕಾಯುತ್ತಿದೆ. ಹೀಗಾಗಿ ಪಾಕ್ ತನ್ನೆಲ್ಲಾ ಸಾಮರ್ಥ್ಯ ಉಪಯೋಗಿಸಿ ಪಂದ್ಯದಲ್ಲಿ ಆಡಬೇಕಿದೆ. ಟೂರ್ನಿಗೂ ಮುನ್ನ ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೋತಿರುವ ಪಾಕ್‌ಗೆ ಆತ್ಮವಿಶ್ವಾಸದ ಕೊರತೆಯಿದ್ದು, ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಬಹುದು.
ಪಾಕಿಸ್ತಾನ-ಅಮೆರಿಕ ಪಂದ್ಯ: ರಾತ್ರಿ 9 ಗಂಟೆಗೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
ಹಾಟ್‌ಸ್ಟಾರ್, ಡಿಡಿ ಸ್ಪೋರ್ಟ್ಸ್
ಟಿ20 ವಿಶ್ವಕಪ್: ನೇಪಾಳ ವಿರುದ್ಧ ಡಚ್‌ಗೆ ಗೆಲುವು
ಟೆಕ್ಸಾಸ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನೆದರ್‌ಲೆಂಡ್ಸ್ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಡಚ್ ಪಡೆ 6 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ನೇಪಾಳ, 19.2 ಓವರಲ್ಲಿ ಕೇವಲ 106 ರನ್‌ಗೆ ಆಲೌಟ್ ಆಯಿತು.
ನಾಯಕ ರೋಹಿತ್ ಪೌಡೆಲ್ 35 ಎಸೆತದಲ್ಲಿ 37 ರನ್ ಗಳಿಸಿ ತಂಡ 100 ರನ್ ದಾಟಲು ನೆರವಾದರು. ಟಿಮ್ ಪ್ರಿಂಗಲ್ 20ಕ್ಕೆ 3, ಲೊಗನ್ ವಾನ್ ಬೀಕ್ 18ಕ್ಕೆ 3 ವಿಕೆಟ್ ಕಿತ್ತರು. ನೇಪಾಳ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ, ಕಳಪೆ ಫೀಲ್ಡಿಂಗ್‌ನಿಂದಾಗಿ ಪಂದ್ಯ ಸೋತಿತು.
ನೇಪಾಳಿ ಕ್ಷೇತ್ರರಕ್ಷಕರು ಹಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಪರಿಣಾಮ, ನೆದರ್‌ಲೆಂಡ್ಸ್ 18.4 ಓವರಲ್ಲಿ 4 ವಿಕೆಟ್‌ಗೆ 109 ರನ್ ಗಳಿಸಿ ಜಯಿಸಿತು. ಆರಂಭಿಕ ಮ್ಯಾಕ್ಸ್ ಒ’ ಡೌಡ್ 48 ಎಸೆತದಲ್ಲಿ ಔಟಾಗದೆ 54 ರನ್ ಗಳಿಸಿದರು.
ಸ್ಕೋರ್: ನೇಪಾಳ 19.2 ಓವರಲ್ಲಿ 106 (ರೋಹಿತ್ 35, ವಾನ್ ಬೀಕ್ 3-18)
ನೆದರ್‌ಲೆಂಡ್ಸ್ 18.4 ಓವರಲ್ಲಿ 109/4 (ಒ’ ಡೌಡ್ 54*, ಸೋಮ್‌ಪಾಲ್ 1-18)
ವಿಶ್ವಕಪ್ ಸ್ವಾರಸ್ಯ
ನ್ಯೂಜಿಲೆಂಡ್ ತಂಡ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ನೀಲಿ ಬಣ್ಣದಿಂದ ಕೂಡಿರುವ ಉಡುಪನ್ನು ತೊಟ್ಟು ಆಡಲಿದೆ. ತಂಡ 2000ರ ಬಳಿಕ ಇದೇ ಮೊದಲ ಬಾರಿಗೆ ಯಾವುದೇ ಮಾದರಿಯ ವಿಶ್ವಕಪ್‌ನಲಲಿ ಕಪ್ಪು ಬಣ್ಣದ ಉಡುಪನ್ನು ಧರಿಸುತ್ತಿಲ್ಲ. 1999ರ ಏಕದಿನ ವಿಶ್ವಕಪ್‌ನಲ್ಲಿ ನೀಲಿ ಬಣ್ಣದ ಉಡುಪನ್ನು ತೊಟ್ಟು ಆಡಿದ್ದ ನ್ಯೂಜಿಲೆಂಡ್, 25 ವರ್ಷಗಳ ಬಳಿಕ ಅದೇ ವಿನ್ಯಾಸದ ಉಡುಪನ್ನು ಮತ್ತೆ ಆಯ್ಕೆ ಮಾಡಿಕೊಂಡಿದೆ.