ರೋಹಿತ್ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು!

By Web Desk  |  First Published Nov 7, 2019, 10:21 PM IST

ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಬಾಂಗ್ಲಾದೇಶ ಹೇಳ ಹೆಸರಿಲ್ಲದಂತಾಗಿದೆ. 2ನೇ ಟಿ20 ಪಂದ್ಯದಲ್ಲಿ ರೋಹಿತ್ ನೈಜ ಆಟ ಪ್ರದರ್ಶಿಸಿದ್ದು ಭಾರತ ಸುಲಭ ಗೆಲುವು ದಾಖಲಿಸಿದೆ. 


"

ರಾಜ್‌ಕೋಟ್(ನ.07): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ ಭರ್ಜರಿ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿ ಜೀವಂತವಾಗಿರಿಸಿದೆ.

Latest Videos

ಇದನ್ನೂ ಓದಿ: 23 ಎಸೆತದಲ್ಲಿ ಅರ್ಧಶತಕ; 100ನೇ ಪಂದ್ಯದಲ್ಲಿ ರೋಹಿತ್ ದಾಖಲೆ!

ಗೆಲುವಿಗೆ 154 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ, ದಿಟ್ಟ ತಿರುಗೇಟು ನೀಡಲು ಕಣಕ್ಕಿಳಿಯಿತು. 100ನೇ ಟಿ20 ಪಂದ್ಯವಾಡಿದ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಕೇವಲ 23 ಎಸೆತದಲ್ಲಿ ರೋಹಿತ್ ಅರ್ಧಶತಕ ಪೂರೈಸಿದರು. 

ರೋಹಿತ್ ಶರ್ಮಾಗೆ ಮತ್ತೋರ್ವ ಆರಂಭಿಕ ಶಿಖರ್ ಧವನ್ ಉತ್ತಮ ಸಾಥ್ ನೀಡಿದರು. ಧವನ್ 27 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ 43 ಎಸೆತದಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 85 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಜೊತೆಯಾಟದಿಂದ ಭಾರತ ಸುಲಭವಾಗಿ ಗುರಿ ತಲುಪಿತು. ಭಾರತ  15.4 ಓವರ್‌ಗಳಲ್ಲಿ  2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶ್ರೇಯಸ್ ಅಯ್ಯರ್ ಅಜೇಯ 24 ರನ್ ಹಾಗೂ ರಾಹುಲ್ ಅಜೇಯ 8 ರನ್ ಸಿಡಿಸಿದರು. 

3 ಪಂದ್ಯಗಳ ಟಿ20 ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ನವೆಂಬರ್ 10 ರಂದು ನಾಗ್ಪುರದಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.

click me!