ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿದ್ದಾರೆ
ರಾಜ್‌ಕೋಟ್(ನ.07): ಬಾಂಗ್ಲಾದೇಶ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಫುಲ್ ಫಾರ್ಮ್‌ನಲ್ಲಿದ್ದಾರೆ. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ರೋಹಿತ್ ಕೇವಲ 23 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: 2ನೇ ಟಿ20; ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾ!
ಅತೀ ಕಡಿಮೆ ಎಸೆತದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಸಾಧನೆ(ಟಿ20)
22 vs WI ಲೌಡರ್‌ಹಿಲ್, 2016
23 vs SLಇಂಧೋರ್ 2017
23 vs Ban ರಾಜ್‌ಕೋಟ್, 2019 *
28 vs Eng ಬ್ರಿಸ್ಟೊಲ್, 2018
28 vs NZ ಆಕ್ಲೆಂಡ್, 2019
The Hitman's having a great time out there in his 100th T20I.
Brings up a brilliant FIFTY off 23 deliveries 👏👏 pic.twitter.com/dRkdgOZE2U
ಇದನ್ನೂ ಓದಿ: ರೈನಾಗೆ ಭವೇಶ್ ಎಂದ ಕೊಹ್ಲಿ; ಸೀಕ್ರೆಟ್ ಬಹಿರಂಗ ಪಡಿಸಲು ಫ್ಯಾನ್ಸ್ ಆಗ್ರಹ!
ರೋಹಿತ್ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಹಾಫ್ ಸೆಂಚುರಿ ಪೂರೈಸಿದರು. ಬಾಂಗ್ಲಾದೇಶ ನೀಡಿದ 154 ರನ್ ಗುರಿ ಬೆನ್ನಟ್ಟುವ ವೇಳೆ ರೋಹಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಟೀಂ ಇಂಡಿಯಾ ಉತ್ತಮ ಆರಂಭ ಒದಗಿಸಿದರು.
ರಾಜ್‌ಕೋಟ್ ಪಂದ್ಯ ನಾಯಕ ರೋಹಿತ್ ಶರ್ಮಾ ಪಾಲಿಗೆ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ. ಈ ಮೂಲಕ ಗರಿಷ್ಠ ಟಿ20 ಪಂದ್ಯ ಆಡಿದ ವಿಶ್ವದ 2ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲ್ಲಿಕ್ 111 ಟಿ20 ಪಂದ್ಯ ಆಡೋ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.