2ನೇ ಟಿ20; ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾ!

By Web Desk  |  First Published Nov 7, 2019, 8:50 PM IST

ರಾಜ್‌ಕೋಟ್‌ನಲ್ಲಿ ನಡೆಯುತ್ತಿರವು 2ನೇ ಟಿ20 ಪಂದ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಬಾಂಗ್ಲಾದೇಶ 2ನೇ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 154 ರನ್ ಟಾರ್ಗೆಟ್ ನೀಡಿದೆ. 


ರಾಜ್‌ಕೋಟ್(ನ.07): ಬಾಂಗ್ಲಾದೇಶ ವಿರುದ್ಧದ 2ನೇ ಹಾಗೂ ಗೆಲ್ಲಲೇಬೇಕಾದ ಟಿ20 ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನೀಡಿದರೂ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಿಲ್ಲಿಲ್ಲ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು 153 ರನ್‌ಗೆ  ಕಟ್ಟಿ ಹಾಕಿದೆ. ಇದೀಗ ಗೆಲುವಿಗೆ ಭಾರತ ರನ್ ಗಳಿಸಬೇಕಿದೆ

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶಕ್ಕೆ ಲಿಟ್ಟನ್ ದಾಸ್ ಹಾಗೂ ಮೊಹಮ್ಮದ್ ನೈಮ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 60 ರನ್ ಜೊತೆಯಾಟ ನೀಡಿದರು. ದಾಸ್ 29 ಹಾಗೂ ಮೊಹಮ್ಮದ್ ನೈಮ್ 36 ರನ್ ಕಾಣಿಕೆ ನೀಡಿದರು. 

Tap to resize

Latest Videos

ಸೌಮ್ಯ ಸರ್ಕಾರ್ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದರೆ, ಕಳೆದ ಪಂದ್ಯದ ಹೀರೋ ಮುಷ್ಫಿಕರ್ ರಹೀಮ್ 4 ರನ್ ಸಿಡಿಸಿ ಔಟಾದರು. ಸರ್ಕಾರ್ 30 ರನ್ ಸಿಡಿಸಿ ನಿರ್ಗಮಿಸಿದರು. ಆಸಿಫ್ ಹುಸೈನ್ 6 ಹಾಗೂ ನಾಯಕ ಮೊಹಮ್ಮದುಲ್ಲಾ 30 ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಬಾಂಗ್ಲಾದೇಶ 6 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿತು. 

click me!