ಸಚಿನ್, ಕೊಹ್ಲಿ ಕ್ಲಬ್‌ಗೆ ಸೇರಲು ರೋಹಿತ್ ಶರ್ಮಾ ರೆಡಿ; ಬಾಂಗ್ಲಾ ಎದುರು ಅಬ್ಬರಿಸ್ತಾರಾ ಹಿಟ್‌ಮ್ಯಾನ್..?

By Naveen Kodase  |  First Published Sep 8, 2024, 3:11 PM IST

ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅಪರೂಪದ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಸೆಪ್ಟೆಂಬರ್ 19ರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಹಲವು ದಾಖಲೆಗಳನ್ನ ಬರೆಯಲು ರೆಡಿಯಾಗಿದ್ದಾರೆ. ಅದರಲ್ಲೂ ರೋಹಿತ್, ಅದೊಂದು ದಾಖಲೆ ಬರೆದ್ರೆ ವಿಶೇಷ ಕ್ಲಬ್ ಸೇರಲಿದ್ದಾರೆ. ಅಷ್ಟಕ್ಕೂ ಯಾವುದು  ಆ ದಾಖಲೆ ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಬಾಂಗ್ಲಾದೇಶ ವಿರುದ್ಧವೂ ಮುಂದುವರಿಯುತ್ತಾ ರೋಹಿತ್ ಆರ್ಭಟ..? 

Latest Videos

undefined

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ ಟೀಂ ಇಂಡಿಯಾ, ಯಾವುದೇ ಸರಣಿ ಆಡಿಲ್ಲ. ಆದ್ರೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಪಡೆ ರೆಡಿಯಾಗ್ತಿದೆ. ಇನ್ನು ಈ ಸರಣಿಯಲ್ಲಿ ಹಲವು ದಾಖಲೆ ಬರೆಯಲು ಕ್ಯಾಪ್ಟನ್ ರೋಹಿತ್ ಕಾಯ್ತಿದ್ದಾರೆ. ರೆಡ್ಬಾಲ್ ಕ್ರಿಕೆಟ್ನಲ್ಲೂ ಹಿಟ್‌ಮ್ಯಾನ್ ಅದ್ಭುತ ಫಾರ್ಮ್ ಮುಂದುವರಿಸೋ ವಿಶ್ವಾಸದಲ್ಲಿದ್ದಾರೆ. 

RCBಗೆ ಆ ಪ್ಲೇಯರ್ ಬೇಕೇ ಬೇಕು ಅಂತ ಅಭಿಮಾನಿಗಳ ಪಟ್ಟು..! ಫ್ಯಾನ್ಸ್ ಬೇಡಿಕೆ ಈಡೇರಿಸುತ್ತಾ ಬೆಂಗಳೂರು ಫ್ರಾಂಚೈಸಿ..?

ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ರೋಹಿತ್ ಇನ್ನೆರೆಡು ಶತಕ ಬಾರಿಸಿದ್ರೆ, 50 ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಸೇರಲಿದ್ದಾರೆ. ಈ ಸಾಧನೆ ಮಾಡಿದ  ಭಾರತದ 3ನೇ ಮತ್ತು ವಿಶ್ವದ 9ನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆಗೆ ಪಾತ್ರರಾಗಲಿದ್ದಾರೆ. ರೋಹಿತ್ ಈವರೆಗೂ ಏಕದಿನ ಕ್ರಿಕೆಟ್ನಲ್ಲಿ 31, ಟೆಸ್ಟ್‌ನಲ್ಲಿ 12 ಮತ್ತು ಟಿ20 ಕ್ರಿಕೆಟ್ನಲ್ಲಿ 5 ಶತಕ ಸಿಡಿಸಿದ್ದಾರೆ. 

ಭಾರತದ ಪರ ಈವರೆಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ &  ರನ್‌ ಮಷಿನ್ ವಿರಾಟ್ ಕೊಹ್ಲಿ ಮಾತ್ರ, 50ಕ್ಕೂ ಹೆಚ್ಚು ಶತಕ ದಾಖಲಿಸಿದ್ದಾರೆ. ಸಚಿನ್ ಟೆಸ್ಟ್ ಮತ್ತು ಏಕದಿನ ಸೇರಿ 100 ಶತಕ ಬಾರಿಸಿದ್ರೆ, ವಿರಾಟ್ ಕೊಹ್ಲಿ ಮೂರು ಫಾರ್ಮೆಟ್ ಸೇರಿ 81 ಶತಕ ಬಾರಿಸಿದ್ದಾರೆ.  

9 ಸಾವಿರ ಮೈಲಿಗಲ್ಲು ಸನಿಹದಲ್ಲಿ ರನ್‌ ಮಷಿನ್ ಕೊಹ್ಲಿ..!

ರೋಹಿತ್ ಶರ್ಮಾ ಮಾತ್ರ ಅಲ್ಲ, ವಿರಾಟ್ ಕೊಹ್ಲಿಯೂ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.  ಕೊಹ್ಲಿ 152 ರನ್‌ಗಳಿಸಿದ್ರೆ, ಟೆಸ್ಟ್  ಕ್ರಿಕೆಟ್ನಲ್ಲಿ 9 ಸಾವಿರ ರನ್ ಮೈಲಿಗಲ್ಲನ್ನ ತಲುಪಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆಗೆ ಪಾತ್ರರಾಗಲಿದ್ದಾರೆ. ಭಾರತದ ಪರ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಮಾತ್ರ, ಟೆಸ್ಟ್‌ನಲ್ಲಿ 9 ಸಾವಿರ ರನ್ ಗಡಿ ದಾಟಿದ್ದಾರೆ. 

ಅದೇನೆ ಇರಲಿ, ಈ ಇಬ್ಬರು ಬ್ಯಾಟಿಂಗ್ ಲೆಜೆಂಡ್ಸ್ ಬಾಂಗ್ಲಾ ವಿರುದ್ಧ ಆರ್ಭಟಿಸಲಿ, ಭಾರತದ ಗೆಲುವಿನಲ್ಲಿ ಮಿಂಚಲಿ ಅನ್ನೋದೆ ಅಭಿಮಾನಿಗಳ ಆಶಯ

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!