RCBಗೆ ಆ ಪ್ಲೇಯರ್ ಬೇಕೇ ಬೇಕು ಅಂತ ಅಭಿಮಾನಿಗಳ ಪಟ್ಟು..! ಫ್ಯಾನ್ಸ್ ಬೇಡಿಕೆ ಈಡೇರಿಸುತ್ತಾ ಬೆಂಗಳೂರು ಫ್ರಾಂಚೈಸಿ..?

By Suvarna NewsFirst Published Sep 8, 2024, 2:19 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಆರ್‌ಸಿಬಿ ಫ್ಯಾನ್ಸ್ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಐಪಿಎಲ್ ಸೀಸನ್ 18ಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಈಗಾಗ್ಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಎಲ್ಲಾ ಸಿದ್ಧತೆ ನಡೆಸಿವೆ. ತಂಡದಿಂದ ಯಾರನ್ನ ರಿಲೀಸ್ ಮಾಡೋದು..ಯಾರನ್ನ ಉಳಿಸಿಕೊಳ್ಳೋದು ಅಂತ ಸಿಕ್ಕಾಪಟ್ಟೆ ತಲೆಕೆಡಸಿಕೊಂಡಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಿಂತ, ಆರ್‌ಸಿಬಿ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಬೆಂಗಳೂರಿಗೆ ಆ ಪ್ಲೇಯರ್ ಬೇಕೇ..ಬೇಕು ಅಂತ ಪಟ್ಟು ಹಿಡಿದಿದ್ದಾರೆ. 

ಐಪಿಎಲ್ ಮೆಗಾ ಆಕ್ಷನ್‌ಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಗೆ ಹೊಸ ಟೆನ್ಷನ್..!

Latest Videos

ಸದ್ಯ ಟೀಂ ಇಂಡಿಯಾದಲ್ಲಿರೋ ಏಕೈಕ ಕನ್ನಡಿಗ ಅಂದ್ರೆ, ಅದು ಕೆ ಎಲ್ ರಾಹುಲ್. ಈ ಸ್ಟಾರ್ ಪ್ಲೇಯರ್ ಆರ್‌ಸಿಬಿಯಲ್ಲಿಲ್ಲ ಅನ್ನೋದೆ ಕನ್ನಡಿಗರ ಬೇಸರ. ನಮ್ಮ ಹುಡುಗ  ದೂರದ ಲಖನೌ ಸೂಪರ್ ಜೈಂಟ್ಸ್  ತಂಡದ ಪರ ಆಡ್ತಿದ್ದಾನೆ. ರಾಹುಲ್ ಇದಾನೆ ಅನ್ನೋ ಕಾರಣಕ್ಕೆ ಕನ್ನಡಿಗರು ಲಖನೌ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೆ, ಈ ಬಾರಿ ರಾಹುಲ್ ಆರ್‌ಸಿಬಿಗೆ ಕಮ್‌ಬ್ಯಾಕ್ ಮಾಡಲೇಬೇಕು ಅಂತ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. 

Bengaluru fans want KL Rahul in RCB. 🌟 pic.twitter.com/6EjZD9MnRT

— Mufaddal Vohra (@mufaddal_vohra)

ವಿಶ್ವದ ಅತ್ಯಂತ ಆರಾಧ್ಯ ಟಾಪ್-10 ಕ್ರೀಡಾಪಟುಗಳಲ್ಲಿ ವಿರಾಟ್ ಕೊಹ್ಲಿಗೆ ಎಷ್ಟನೇ ಸ್ಥಾನ?

ಸದ್ಯ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಮ್ಯಾಚ್ ನಡೆಯುತ್ತಿದೆ. ಇಂಡಿಯಾ ಎ ಮತ್ತು ಬಿ ತಂಡಗಳ ನಡುವಿನ ಪಂದ್ಯದಲ್ಲಿ ರಾಹುಲ್ ಇಂಡಿಯಾ ಎ ಪರ ಆಡ್ತಿದ್ದಾರೆ. ಈ ಮ್ಯಾಚ್ನಲ್ಲಿ ರಾಹುಲ್ ಬ್ಯಾಟಿಂಗ್‌ನ ನೋಡೋದಕ್ಕೆ ಅಂತಾನೇ ಅಭಿಮಾನಿಗಳು ಆಗಮಿಸಿದ್ರು. ಮ್ಯಾಚ್‌ಗೂ ಮುನ್ನ  ರಾಹುಲ್ ಪ್ರಾಕ್ಟೀಸ್ಗಾಗಿ ಸ್ಟೇಡಿಯಂಗೆ ಎಂಟ್ರಿ ನೀಡಿದ್ರು. ಈ ವೇಳೆ ಫ್ಯಾನ್ಸ್ ಆರ್‌ಸಿಬಿ ಕ್ಯಾಪ್ಟನ್ ಅಂತ ಕೂಗಿದ್ರು. ಅಲ್ಲದೇ ರಾಹುಲ್‌ಗೆ  RCBಗೆ ಬರಲೇಬೇಕು ಅಂತ ಒತ್ತಾಯಿಸಿದ್ರು.  

ಏನ್ಮಾಡ್ತಾರೆ  ರಾಹುಲ್? ಲಖನೌ ತಂಡ ಬಿಡ್ತಾರಾ..? ಆಕ್ಷನ್‌ಗೆ ಬರ್ತಾರಾ..? 

ಈ ವರ್ಷದ ಐಪಿಎಲ್‌ನಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಹೀನಾಯ ಸೋಲು ಕಂಡಿತ್ತು. ಈ ಸೋಲು ಲಖನೌ ಓನರ್ ಸಂಜೀವ್ ಗೋಯೆಂಕಾರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಇದ್ರಿಂದ ಪಂದ್ಯದ ನಂತರ ನಾಯಕ ಕೆ.ಎಲ್ ರಾಹುಲ್ ಮೇಲೆ ಮುಗಿಬಿದ್ದಿದ್ರು. ಕ್ರಿಕೆಟ್ ಬಗ್ಗೆ ಗಂಧ, ಗಾಳಿ ಇಲ್ಲದ ವ್ಯಕ್ತಿ ದುಡ್ಡಿನ ಮದದಲ್ಲಿ ಕೂಗಾಡ್ತಿದ್ರೆ, ರಾಹುಲ್ ಮಾತ್ರ ಸುಮ್ಮನೆ ನಿಂತಿದ್ರು.

2024ರ ಟಿ20 ವಿಶ್ವಕಪ್ ಆಡಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ..!

ಲಖನೌ ಓನರ್ ರಾಹುಲ್ರನ್ನ ನಡೆಸಿಕೊಂಡ ರೀತಿ ಅಭಿಮಾನಿಗಳಿಗೆ, ಅದರಲ್ಲೂ ಕನ್ನಡಿಗ ಆಕ್ರೋಶಕ್ಕೆ ಗುರಿಯಾಗಿತ್ತು. ಇದ್ರಿಂದ ರಾಹುಲ್ ಲಖನೌ ತಂಡದಿಂದ ಹೊರಬರ್ತಾರೆ. ಆಕ್ಷನ್ನಲ್ಲಿ ಆರ್‌ಸಿಬಿ ಸೇರ್ತಾರೆ ಅಂತ ಬೆಂಗಳೂರು ಫ್ಯಾನ್ಸ್‌ ಅಂದುಕೊಂಡಿದ್ರು. ಆದ್ರೀಗ, ಅದು ಅನುಮಾನವಾಗಿದೆ. 

ಇತ್ತೀಚೆಗೆ ರಾಹುಲ್ ಲಖನೌ ಓನರ್ ಸಂಜೀವ್ ಗೋಯೆಂಕಾ ಅವರನ್ನ ಭೇಟಿಯಾಗಿದ್ದಾರೆ. ಕೊಲ್ಕತ್ತಾದ ತಮ್ಮ ಆಫೀಸಿಗೆ ಕರೆಸಿಕೊಂಡು ರಾಹುಲ್ ಜೊತೆ ಸಂಜೀವ್  ಮಾತನಾಡಿದ್ದಾರೆ.  ಈ ಮಾತುಕತೆಯ ಬೆನ್ನಲ್ಲೇ  ರಾಹುಲ್ ಮುಂದಿನ ನಡೆಯೇನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

ರಾಹುಲ್ ಲಖನೌ ತಂಡವನ್ನು ತೊರೆಯಲು ಮುಂದಾಗಿದ್ದು, ಇದೇ ಕಾರಣದಿಂದಾಗಿ ಅವರ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಲಖನೌ ಮಾಲೀಕರು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.  ಆದ್ರೆ, ರಾಹುಲ್ ತಮ್ಮ ಅಂತಿಮ ನಿರ್ಧಾರವನ್ನ ಇನ್ನು ತಿಳಿಸಿಲ್ಲ.  ಇದ್ರಿಂದ  ಕೆ ಎಲ್ ರಾಹುಲ್  ಲಖನೌ ತಂಡದಲ್ಲೇ ಉಳಿಯಲಿದ್ದಾರಾ..? ಅಥವಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅನ್ನೋದನ್ನ ಕಾದು ನೋಡಬೇಕಿದೆ. 

ಒಂದು ವೇಳೆ ಲಖನೌ ರಾಹುಲ್‌ರನ್ನ ರಿಟೇನ್ ಮಾಡಿಕೊಂಡ್ರೆ, ಆರ್‌ಸಿಬಿ &  ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಆಸೆ ನುಚ್ಚು ನೂರಾಗೋದಂತೂ ಪಕ್ಕಾ..!  

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!