ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಮೊದಲ ಬಾರಿಗೆ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಗೌತಮ್ ಗಂಭೀರ್ ಕೋಚ್ ಆದ್ಮೇಲೆ, ಟೀಂ ಇಂಡಿಯಾ ಬ್ಯಾಟರ್ಸ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಪ್ರಾಕ್ಟೀಸ್ ಮಾಡ್ತಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ರೋಹಿತ್ ಶರ್ಮಾರಿಂದ ಹಿಡಿದು ಹಲವು ಆಟಗಾರರು ಬೌಲಿಂಗ್ ಮಾಡಿದ್ರು. ಈಗ ಮತ್ತೊಬ್ಬ ಆಟಗಾರ ವಿಕೆಟ್ ಕೀಪಿಂಗ್ ಬಿಟ್ಟು, ಬೌಲಿಂಗ್ ಶುರು ಮಾಡಿದ್ದಾರೆ. ಯಾರು ಅಂತೀರಾ..? ಈ ಸ್ಟೋರಿ ನೋಡಿ!
ಹೊಸ ರೋಲ್ನಲ್ಲಿ ಕಾಣಿಸಿಕೊಂಡ ವಿಕೆಟ್ ಕೀಪರ್ ಬ್ಯಾಟರ್..!
ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ, ಟೀಂ ಇಂಡಿಯಾ ಆಟಗಾರರಿಗೆ ಒಂದು ತಿಂಗಳು ರೆಸ್ಟ್ ಸಿಕ್ಕಿದೆ. ಇದ್ರಿಂದ ಆಟಗಾರರೆಲ್ಲಾ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಲಂಡನ್ನಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಎಂಜಾಯ್ ಮಾಡ್ತಿದ್ರೆ, ರೋಹಿತ್ ಮುಂಬೈನಲ್ಲಿ ಕಾರಿನಲ್ಲಿ ಸುತ್ತುತ್ತಿದ್ದಾರೆ. ಆದ್ರೆ, ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾತ್ರ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.
RISHABH PANT BOWLING IN DELHI PREMIER LEAGUE...!!!
He scored 35 in 32 balls while batting.pic.twitter.com/hqUEoE6fmv
ಯೆಸ್, ನಿನ್ನೆಯಿಂದ ಚೊಚ್ಚಲ ದೆಹಲಿ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ರಿಷಭ್ ಪಂತ್, ಓಲ್ಡ್ ಡೆಲ್ಲಿ ತಂಡವನ್ನ ಮುನ್ನಡೆಸಿದ್ರು. ನಿನ್ನೆ ನಡೆದ ಪಂದ್ಯದಲ್ಲಿ ಓಲ್ಡ್ ಡೆಲ್ಲಿ ಮತ್ತು ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಹೈಲೈಟ್ ಅಂದ್ರೆ, ಅದು ರಿಷಭ್ ಪಂತ್ ಬೌಲಿಂಗ್..!
ಲೆಗ್ ಸ್ಪಿನ್ನರ್ ಅವತಾರ ತಾಳಿದ ರಿಷಭ್ ಪಂತ್..!
ಇಷ್ಟು ವಿಕೆಟ್ ಕೀಪಿಂಗ್ ಮಾಡ್ತಿದ್ದ ಪಂತ್, ನಿನ್ನೆ ಬೌಲರ್ ಅವತಾರ ತಾಳಿದ್ರು. ಆಗಿ ಅದರಲ್ಲೂ ಲೆಗ್ ಸ್ಪಿನರ್ ಆಗಿ ಕಾಣಿಸಿಕೊಂಡರು. ಪಂದ್ಯದಲ್ಲಿ ಪಂತ್ ಪಡೆಗೆ ಸೋಲು ಖಚಿತವಾಗಿತ್ತು. ಎದುರಾಳಿ ತಂಡಕ್ಕೆ ಗೆಲುವಿಗೆ ಕೇವಲ ಒಂದು ರನ್ ಬೇಕಾಗಿತ್ತು. ಹೀಗಾಗಿ ಪಂತ್ ತಾವೇ ಬೌಲಿಂಗ್ ಮಾಡಲು ಅಖಾಡಕ್ಕಿಳಿದ್ರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್ ಕೊಹ್ಲಿ: ವಿರಾಟ್ ಎಲ್ಲದ್ರಲ್ಲೂ ನಂ.1
ಬ್ಯಾಟಿಂಗ್‌ನಲ್ಲಿ ಮುಂದುವರಿದ ಪಂತ್ ಫ್ಲಾಪ್ ಶೋ..!
ಇನ್ನು ಈ ಪಂದ್ಯದಲ್ಲಿ ಪಂತ್ ಆಟ ಡಲ್ ಆಗಿತ್ತು. 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಡೆಲ್ಲಿ ಡ್ಯಾಶರ್ ಒನ್ಡೇ ಮ್ಯಾಚ್ನಂತೆ ಬ್ಯಾಟ್ ಬೀಸಿದ್ರು. 32 ಎಸೆತಗಳಲ್ಲಿ ಕೇವಲ 35 ರನ್ ಸಿಡಿಸಿದ್ರು. ಇದ್ರೊಂದಿಗೆ ವೈಟ್‌ಬಾಲ್ ಕ್ರಿಕೆಟ್ನಲ್ಲಿ ಫ್ಲಾಪ್ ಶೋ ಮುಂದುವರಿಸಿದ್ರು. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಫ್ಲಾಪ್ ಶೋ ನೀಡಿದ್ದ ಪಂತ್, ಟಿ20 ವಿಶ್ವಕಪ್ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಈ ಎಡಗೈ ಬ್ಯಾಟರ್ ವೈಫಲ್ಯ ಕಂಡಿದ್ರು. ಅದೇನೆ ಇರಲಿ, ಡೆಲ್ಲಿ ಪ್ರೀಮಿಯರ್ ಲೀಗ್‌ನ ಮುಂದಿನ ಪಂದ್ಯಗಳಲ್ಲಿ ಪಂತ್ ಅಬ್ಬರಿಸಲಿ, ಬಾಂಗ್ಲಾದೇಶ ಟೆಸ್ಟ್ ಸರಣಿಗು ಮುನ್ನ ಹಳೆಯ ಖದರ್ಗೆ ಮರಳಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್