
ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ನಡುವಿನ ನಿಶ್ಚಿತಾರ್ಥದ ವದಂತಿಗಳಿಂದ ಕ್ರಿಕೆಟ್ ಜಗತ್ತು ಮತ್ತು ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೀಗ ಅವರಿಬ್ಬರ ನಿಶ್ಚಿತಾರ್ಥ ನೆರವೇರಿಲ್ಲ. ಆದರೆ ನಿಶ್ಚಿತಾರ್ಥ ದಿನಾಂಕ ಮತ್ತು ಮದುವೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಸ್ಪಷ್ಟನೆ ಸಿಕ್ಕಿದೆ. ಸದ್ದಿಲ್ಲದೆ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂದು ಕಳೆದೆರಡು ದಿನಗಳಿಂದ ಸುದ್ದಿಯಾಗಿತ್ತು.
ಈ ಬಗ್ಗೆ ಅವರ ಪ್ರಿಯಾ ಅವರ ತಂದೆ ಮತ್ತು ಜೌನ್‌ಪುರದ ಕೆರಾಕತ್ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ತೂಫಾನಿ ಸರೋಜ್ ಖಚಿತಪಡಿಸಿದ್ದಾರೆ. ಸಂಸತ್ ಅಧಿವೇಶನದ ನಂತರ ನಿಶ್ಚಿತಾರ್ಥ ಮತ್ತು ಮದುವೆ ಎರಡೂ ನಡೆಯಲಿವೆ. ನಿಶ್ಚಿತಾರ್ಥ ಲಕ್ನೋದಲ್ಲಿ ನೆರವೇರಲಿದೆ ಎಂದಿದ್ದಾರೆ. ಈ ಸುದ್ದಿ ರಿಂಕು ಅಭಿಮಾನಿಗಳು ಮತ್ತು ಪ್ರಿಯಾ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.
ಈ ಪಕ್ಷದ ಸಂಸದೆ ಜತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್! ಈಕೆ ಅತಿ ಕಿರಿಯ ಸಂಸದೆ!
ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾ ಸರೋಜ್ ಮತ್ತು ಕ್ರಿಕೆಟಿಗ ರಿಂಕು ಸಿಂಗ್ ಅವರ ನಿಶ್ಚಿತಾರ್ಥದ ಚರ್ಚೆ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ಸಂಸದರ ತಂದೆ ತೂಫಾನಿ ಸರೋಜ್, ಇಬ್ಬರ ನಿಶ್ಚಿತಾರ್ಥ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಿಯಾ ಕೆಲಸದ ನಿಮಿತ್ತ ತಿರುವನಂತಪುರಂನಲ್ಲಿದ್ದಾರೆ. ರಿಂಕು ಸಿಂಗ್ ಅವರೊಂದಿಗೆ ನಿಶ್ಚಿತಾರ್ಥದ ಸುದ್ದಿ ಸಂಪೂರ್ಣವಾಗಿ ತಪ್ಪು. ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ಮದುವೆಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ರಿಂಕುವಿನ ಕುಟುಂಬವು ಪ್ರಿಯಾಳ ಹಿರಿಯ ಸೋದರ ಮಾವ, ಅಲಿಘರ್‌ನಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ತಲುಪಿದೆ ಎಂಬ ವರದಿಗಳ ನಡುವೆ ಈ ವಿಚಾರ ಬಹಿರಂಗವಾಗಿದೆ. ಆದರೆ ರಿಂಕು ಅಥವಾ ಪ್ರಿಯಾ ಈ ವಿಷಯದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.
ಗುರುವಾರ ರಿಂಕು ಕುಟುಂಬದವರೊಂದಿಗೆ ಅಲಿಘರ್‌ನಲ್ಲಿ ಭೇಟಿಯಾಗಿ ಮದುವೆಯ ಬಗ್ಗೆ ಚರ್ಚಿಸಲಾಗಿದೆ. ಜನವರಿ 30-31 ರಿಂದ ಫೆಬ್ರವರಿ 13 ರವರೆಗೆ ಸಂಸತ್ ಅಧಿವೇಶನ ನಡೆಯಲಿದ್ದು, ನಂತರ ಮದುವೆ ಮತ್ತು ನಿಶ್ಚಿತಾರ್ಥದ ಬಗ್ಗೆ ಮುಂದಿನ ಮಾತುಕತೆ ನಡೆಯಲಿದೆ ಎಂದಿದ್ದಾರೆ.
ರಿಂಕು ಸಿಂಗ್ ಶೀಘ್ರದಲ್ಲೇ ಐಪಿಎಲ್‌ನಲ್ಲಿ ಆಡಲಿದ್ದಾರೆ. ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅವರನ್ನು 13 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಜನವರಿ 22 ರಿಂದ ಅವರು ಟಿ -20 ಪಂದ್ಯಗಳನ್ನಾಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಜನವರಿ 22 ರಿಂದ ಫೆಬ್ರವರಿ 2 ರವರೆಗೆ ಕೋಲ್ಕತ್ತಾ, ಚೆನ್ನೈ, ರಾಜ್‌ಕೋಟ್, ಪುಣೆ ಮತ್ತು ಮುಂಬೈನಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಹೀಗಾಗಿ ರಿಂಕು ಅವರ ಆಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲಾಗಿದೆಯಂತೆ.
ರಿಂಕು ಸಿಂಗ್‌ಗೆ ಒಲಿದ ನಾಯಕ ಪಟ್ಟ, ಸ್ಪೋಟಕ ಬ್ಯಾಟರ್ ಹೆಗಲೇರಿದ ಮಹತ್ವದ ಜವಾಬ್ದಾರಿ!
ಕೇವಲ 27 ನೇ ವಯಸ್ಸಿನಲ್ಲಿ, ರಿಂಕು ಸಿಂಗ್ ಭಾರತೀಯ ಕ್ರಿಕೆಟ್‌ನಲ್ಲಿ ಮನೆಮಾತಾಗಿದ್ದಾರೆ, ಅವರ ಫಿನಿಶಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಭಾರತೀಯ T20I ತಂಡದಲ್ಲಿ ನಿಯಮಿತ ಆಟಗಾರರಾಗಿರುವ ರಿಂಕು ಅವರು ಆಗಸ್ಟ್ 2023 ರಲ್ಲಿ ತಮ್ಮ ಚೊಚ್ಚಲ ಪಂದ್ಯದಿಂದ 562 ರನ್‌ಗಳನ್ನು ಒಟ್ಟುಗೂಡಿಸಿದ್ದಾರೆ.
26 ವರ್ಷದ ಪ್ರಿಯಾ ಸರೋಜ್ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜಕೀಯದಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದ ಅವರು ಆರಂಭದಲ್ಲಿ ನ್ಯಾಯಾಧೀಶರಾಗಲು ಬಯಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 35,000 ಮತಗಳಿಂದ ಸೋಲಿಸಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರ ವೃತ್ತಿಜೀವನದ ಪಥವು ತೀಕ್ಷ್ಣವಾದ ತಿರುವು ಪಡೆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.