ಇಂದಿನಿಂದ ಅಂಡರ್-19 ಮಹಿಳಾ ಟಿ20 ವಿಶ್ವಕಪ್; ಭಾರತ ತಂಡಕ್ಕೆ ಕನ್ನಡತಿ ನಾಯಕಿ

Published : Jan 18, 2025, 11:37 AM ISTUpdated : Jan 18, 2025, 12:55 PM IST
ಇಂದಿನಿಂದ ಅಂಡರ್-19 ಮಹಿಳಾ ಟಿ20 ವಿಶ್ವಕಪ್; ಭಾರತ ತಂಡಕ್ಕೆ ಕನ್ನಡತಿ ನಾಯಕಿ

ಸಾರಾಂಶ

ಮಲೇಷ್ಯಾದಲ್ಲಿ ಶನಿವಾರ ಆರಂಭವಾಗುವ ಎರಡನೇ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜಾಗಿದೆ. 16 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ನಾಯಕಿ ನಿಕಿ ಪ್ರಸಾದ್ ನೇತೃತ್ವದ ಭಾರತ ತಂಡ 'ಎ' ಗುಂಪಿನಲ್ಲಿದೆ. ಜನವರಿ 19 ರಂದು ವಿಂಡೀಸ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯ ಆಡಲಿದೆ.

ಕೌಲಾಲಂಪುರ: 2ನೇ ಆವೃತ್ತಿ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದೆ. 2023ರ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ಭಾರತ ಸತತ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಟೂರ್ನಿಗೆ ಮಲೇಷ್ಯಾದ ಕೌಲಾಲಂಪುರ ಆತಿಥ್ಯ ವಹಿಸಲಿದೆ.

ತಂಡಗಳು: ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ಹಾಗೂ ಸ್ಕಾಟ್ಲೆಂಡ್ ಸೆಣಸಾಡಲಿವೆ. ಭಾರತದ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಭಾರತ 'ಎ' ಗುಂಪಿನಲ್ಲಿ ಮಲೇಷ್ಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಜೊತೆ ಸ್ಥಾನ ಗಿಟ್ಟಿಸಿಕೊಂಡಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜ.19ರಂದು ವಿಂಡೀಸ್ ವಿರುದ್ಧ ಆಡಲಿದೆ.

ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿಂದು ಕರ್ನಾಟಕ-ವಿದರ್ಭ ಹೈವೋಲ್ಟೇಜ್ ಫೈಟ್

ಟೂರ್ನಿ ಮಾದರಿ: ಈ ಬಾರಿ ಟೂರ್ನಿಯ 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡಗಳು ಗುಂಪಿನ ಇತರ ತಂಡಗಳ ಜೊತೆ ಒಮ್ಮೆ ಸೆಣಸಾಡಲಿವೆ. ಗುಂಪಿನಲ್ಲಿ ಅಗ್ರ-3 ಸ್ಥಾನ ಪಡೆದ ತಂಡಗಳು ಸೂಪರ್-6 ಪ್ರವೇಶಿಸಲಿವೆ. ಸೂಪರ್ -6 ಹಂತದ 12 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ಅಗ್ರ -2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

435 ರನ್ ಸ್ಕೋರ್ ಮಾಡಿ 304 ರನ್‌ನಲ್ಲಿ ಗೆದ್ದ ಭಾರತ! ಮಂಧನಾ, ಪ್ರತಿಕಾ ಆರ್ಭಟಕ್ಕೆ ಐರ್ಲೆಂಡ್ ಕಂಗಾಲು

ಕನ್ನಡತಿ ನಿಕಿ ನಾಯಕಿ: ಈ ಬಾರಿ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕರ್ನಾಟಕದ ನಿಕಿ ಪ್ರಸಾದ್ ನಾಯಕತ್ವ ವಹಿಸಲಿದ್ದಾರೆ. ಇತ್ತೀಚೆಗಷ್ಟೇ ನಿಕಿ ಅವರ ನಾಯಕತ್ವದಲ್ಲಿ ಭಾರತ ತಂಡ ಅ೦ಡ‌ರ್‌-19 ಏಷ್ಯಾಕಪ್ ಟಿ20 ಟೂರ್ನಿಯನ್ನು ಗೆದ್ದಿತ್ತು. ಆ ತಂಡದಲ್ಲಿದ್ದ ಕರ್ನಾಟಕದ ಮತ್ತೊಬ್ಬ ಆಟಗಾರ್ತಿ ಮಿಥಿಲಾ ವಿನೋದ್ ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ