Cricket World Cup: ಪಾಕಿಸ್ತಾನ ಸೇರಿದಂತೆ ಯಾವ ತಂಡದ ಆಟಗಾರರಿಗೂ 'ಬೀಫ್‌' ಖಾದ್ಯವಿಲ್ಲ!

By Santosh NaikFirst Published Sep 29, 2023, 6:22 PM IST
Highlights

ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ಹಲವು ಆಟಗಾರರು ಗೋಮಾಂಸ ತಿನ್ನುತ್ತಾರೆ. ಆದರೆ, ವಿಶ್ವಕಪ್‌ ವೇಳೆ ಪಾಕಿಸ್ತಾನ ಮಾತ್ರವಲ್ಲ ಯಾವುದೇ ತಂಡದ ಆಟಗಾರರಿಗೆ ಗೋಮಾಂಸದ ಭಕ್ಷ್ಯವನ್ನು ನೀಡಲಾಗುವುದಿಲ್ಲ ಎಂದು ವರದಿ ತಿಳಿಸಿದೆ.

ಬೆಂಗಳೂರು (ಸೆ.29): ಪಾಕಿಸ್ತಾನ ಕ್ರಿಕೆಟ್ ತಂಡ ಬುಧವಾರ ಭಾರೀ ಸಂಭ್ರಮದ ನಡುವೆ ಭಾರತಕ್ಕೆ ಆಗಮಿಸಿದೆ. ಭಾರತಕ್ಕೆ ಆಗಮಿಸಿದ ಮರುದಿನವೇ ಪಾಕಿಸ್ರಾನದ ಆಟಗಾರರು ಮೈದಾನದಲ್ಲಿ ತಮ್ಮ ನೆಟ್ಸ್‌ ಅಭ್ಯಾಸವನ್ನೂ ನಡೆಸಿದೆ. ಮೆನ್‌ ಇನ್‌ ಗ್ರೀನ್‌ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ನ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್‌ 6 ರಂದು ನೆದರ್ಲೆಂಡ್ಸ್‌ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಪಾಕಿಸ್ತಾನ ಆಡಲಿದೆ. ಹೈದರಾಬಾದ್‌ ವಿಮಾನನಿಲ್ದಾಣಕ್ಕೆ ಆಗಮಿಸಿದ ಪಾಕಿಸ್ತಾನ ತಂಡದ ಆಟಗಾರರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಅಪಾರ ಸಂಖ್ಯೆಯ ಕ್ರಿಕೆಟ್‌ ಅಭಿಮಾನಿಗಳು ವೇಳೆ ವಿಮಾನನಿಲ್ದಾಣ ಹಾಗೂ ವಿಮಾನ ನಿಲ್ದಾಣದ ಹೊರಗೆ ಕಾದಿದ್ದರು. ಬಾಬರ್‌ ಅಜಮ್‌, ಮೊಹಮದ್‌ ರಿಜ್ವಾನ್‌ ಮತ್ತು ಶಹೀನ್‌ ಷಾ ಅಫ್ರಿದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರತಕ್ಕೆ ಬಂದ ಸಂಭ್ರಮವನ್ನು ಹಂಚಿಕೊಂಡಿದ್ದರು. ಭಾರತಕ್ಕೆ ಬಂದ ಬಳಿಕ ತಮಗೆ ಆತ್ಮೀಯವಾಗಿ ಸ್ವಾಗತ ನೀಡಲಾಗಿದೆ ಎಂದು ಅವರು ಬರೆದುಕೊಂಡಿದ್ದರು.

ಇನ್ನು ವಿಮಾನನಿಲ್ದಾಣದಿಂದ ಹೋಟೆಲ್‌ಗೆ ಬಂದ ಬಳಿಕ ರಾತ್ರಿ ಊಟದಲ್ಲಿ ಸ್ವೀಕರಿಸಿದ ಆಹಾರವನ್ನೂ ಆಟಗಾರರು ಇಷ್ಟಪಟ್ಟಿದ್ದಾರೆ. ಹೋಟೆಲ್‌ನಲ್ಲಿಯೂ ಪಾಕಿಸ್ತಾನಿ ತಂಡಕ್ಕೆ ಸಿಬ್ಬಂದಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಕ್ರಿಕೆಟಿಗರೊಬ್ಬರು ಬಿರಿಯಾನಿಯ ಫೋಟೋ ಪೋಸ್ಟ್ ಮಾಡಿದ್ದು, ಹೈದರಾಬಾದಿ ಸ್ಪೆಷಲ್ ಬಿರಿಯಾನಿ ಹೈಪ್‌ಗೆ ತಕ್ಕಂತಿದೆ ಎಂದು ಹೇಳಿದ್ದಾರೆ.
ವಿಶ್ವಕಪ್ ವೇಳೆ ಪಾಕಿಸ್ತಾನ ತಂಡದ ಆಟಗಾರರು ಚಿಕನ್, ಮಟನ್ ಮತ್ತು ಮೀನುಗಳನ್ನು ತಿನ್ನುತ್ತಾರೆ. ಹೆಚ್ಚುವರಿಯಾಗಿ, ಅವರಿಗೆ ಬಟರ್ ಚಿಕನ್ ಮತ್ತು ಬಿರಿಯಾನಿಯಂತಹ ಕೆಲವು ಆಹಾರಗಳನ್ನು ನೀಡಲಾಗುತ್ತದೆ. ಪಾಕಿಸ್ತಾನ ತಂಡದಲ್ಲಿ ಹಲವು ಅಟಗಾರರು ಗೋಮಾಂಸ ತಿನ್ನುವವರಾಗಿದ್ದರೂ, ಭಾರತದಲ್ಲಿ ಇರುವಷ್ಟು ಹೊತ್ತು ಪಾಕ್‌ ತಂಡಕ್ಕಾಗಲಿ ಬೇರೆ ಯಾವುದೇ ತಂಡಕ್ಕಾಗಲಿ ಗೋಮಾಂಸದ ಖಾದ್ಯವನ್ನು ಭಾರತ ನೀಡೋದಿಲ್ಲ ಎಂದು ವರದಿಯಾಗಿದೆ.

ಅಪ್‌ಡೇಟ್‌ ಏನೆಂದರೆ, ಭಾರತದಲ್ಲಿ ಇರುವಷ್ಟು ದಿನ ಯಾವುದೇ ತಂಡಕ್ಕೆ ಗೋಮಾಂಸದ ಖಾದ್ಯವನ್ನು ಸರ್ವ್‌ ಮಾಡಲಾಗೋದಿಲ್ಲ. ಪಾಕಿಸ್ತಾನ ತಂಡದ ಹೋಟೆಲ್‌ ಫುಡ್‌ ಮೆನ್ಯುವಿನಲ್ಲಿ ಲ್ಯಾಂಬ್‌ ಚಾಪ್ಸ್, ಮಟನ್‌ ಕರಿ, ಹೈದರಾಬಾದಿ ಬಿರಿಯಾನಿ, ಗ್ರಿಲ್ಡ್‌ ಫಿಶ್‌, ಬಟರ್‌ ಚಿಕನ್‌ ಮತ್ತು ವೆಜಿಟೇಬಲ್‌ ಪುಲಾವ್‌ ಇರುತ್ತದೆ' ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ವಿಶ್ವಕಪ್‌ ವೇಳೆ ಟೀಮ್‌ನ ಫುಡ್‌ ಮೆನ್ಯು ಬಗ್ಗೆ ಸುದ್ದಿ ಬರೆದಿದ್ದಾರೆ.

2011ರ ವಿಶ್ವಕಪ್ ಗೆಲುವಿಗೆ ಧೋನಿ ಪಠಿಸಿದ್ದ ಮಂತ್ರ ಬಹಿರಂಗ ಪಡಿಸಿದ ಸೆಹ್ವಾಗ್!

ಯಾವುದೇ ದೊಡ್ಡ ಪಂದ್ಯಾವಳಿಯಲ್ಲಿ ಆಹಾರವು ತಂಡದ ಅತ್ಯಗತ್ಯ ಭಾಗವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕೆಲವು ಕ್ರಿಕೆಟಿಗರು ಅವರಿಗೆ ಸರಿಯಾದ ಆಹಾರ ಪದಾರ್ಥಗಳನ್ನು ತಯಾರಿಸಲು ತಮ್ಮದೇ ಬಾಣಸಿಗರನ್ನು ಸಹ ಕರೆದುಕೊಂಡು ಹೋಗುತ್ತಾರೆ. ಉದಾಹರಣೆಗೆ, ಹಾರ್ದಿಕ್ ಪಾಂಡ್ಯ ತಮ್ಮದೇ ಆದ ವೈಯಕ್ತಿಕ ಬಾಣಸಿಗರನ್ನು ಹೊಂದಿದ್ದಾರೆ. ಅವನು ತನ್ನ ಸ್ವಂತ ಹೋಟೆಲ್‌ನ ಸಮೀಪದಲ್ಲಿ ತನ್ನ ಬಾಣಸಿಗನಿಗೆ ಹೋಟೆಲ್ ಅಥವಾ ಅಪಾರ್ಟ್ಮೆಂಟ್ ಅನ್ನು ಬುಕ್ ಮಾಡುತ್ತಾರೆ. ಕ್ರಿಕೆಟಿಗನ ಆಹಾರದ ಅವಶ್ಯಕತೆಗಳನ್ನು ತಿಳಿದುಕೊಂಡು ಬಾಣಸಿಗ ಒಳ್ಳೆಯ ಆಹಾರವನ್ನು ತಯಾರಿಸುತ್ತಾರೆ. ಹಾರ್ದಿಕ್ ಅವರ ಮುಖ್ಯ ಆಹಾರವೆಂದರೆ ಸರಿಯಾದ ಪ್ರಮಾಣದ ತುಪ್ಪ ಬೆರೆಸಿದ ದಾಲ್‌ ಖಿಚಡಿಯಾಗಿದೆ.

'ರಿಷಬ್‌ ಪಂತ್‌ ಹೆಗಲ ಮೇಲಿದ್ದ ಕೈ ಯಾರದ್ದು?' 4 ವರ್ಷಗಳ ಬಳಿಕ ಬಹಿರಂಗವಾಯ್ತು ಚಿತ್ರದ ರಹಸ್ಯ!

ವಿಶ್ವಕಪ್‌ ವೇಳೆ ಆಟಗಾರರಿಗೆ ಯಾವೆಲ್ಲಾ ಆಹಾರಗಳನ್ನು ನೀಡಬೇಕು, ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅವರಿಗೆ ಯಾವ ಆಹಾರ ನೀಡಬೇಕು ಎನ್ನುವುದರ ಬಗ್ಗೆ ಈಗಾಗಲೇ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.  ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ವೇಳೆ ಆಟಗಾರರಿಗೆ ಮೈದಾನದಲ್ಲಿಯೇ ಊಟದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

click me!