ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!

By Suvarna News  |  First Published Jan 11, 2020, 6:09 PM IST

2020ರ ಟಿ20 ವಿಶ್ವಕಪ್ ಟೂರ್ನಿಗೆ ಎಂ.ಎಸ್.ಧೋನಿ ತಂಡದಲ್ಲಿರಬೇಕಾ? ಈ ಪ್ರಶ್ನೆಗೆ ಈಗಾಗಲೇ ಅಭಿಮಾನಿಗಳಲ್ಲಿ ಉತ್ತರವಿದೆ. ಆದರೆ ಆಯ್ಕೆ ಸಮಿತಿಗೆ ಇನ್ನೂ ಗೊಂದಲವಿದೆ. ಧೋನಿ ಟಿ20 ವಿಶ್ವಕಪ್ ತಂಡದಲ್ಲಿರಲೇಬೇಕು ಅನ್ನೋದಕ್ಕೆ ಹಲವು ಕಾರಣಗಳಿವೆ. 


ಬೆಂಗಳೂರು(ಜ.11): ಶ್ರೀಲಂಕಾ ವಿರುದ್ದದ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 2020ರ ಟಿ20 ವಿಶ್ವಕಪ್ ಗೆಲುವಿನ ಉತ್ಸಾಹಲ್ಲಿದೆ. ಆದರೆ ಟಿ20 ವಿಶ್ವಕಪ್ ಅಂದಕೊಂಡಷ್ಟು ಸುಲಭವಲ್ಲ. ಭಾರತ ವಿಶ್ವಕಪ್ ಟ್ರೋಫಿ ಗೆಲುವಿಗೆ ತಂಡದಲ್ಲಿ ಎಂ.ಎಸ್.ಧೋನಿ ಇರಲೇಬೇಕು ಅನ್ನೋ ಪರಿಸ್ಥಿತಿ ಸದ್ಯದಲ್ಲಿದೆ.

ಇದನ್ನೂ ಓದಿ: ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!.

Latest Videos

undefined

ಧೋನಿ ಬದಲು ತಂಡ ಸೇರಿಕೊಂಡಿರುವ ರಿಷಬ್ ಪಂತ್ ನಿರೀಕ್ಷೆ ಉಳಿಸಿಕೊಂಡಿಲ್ಲ. ಸಂಜು ಸಾಮ್ಸನ್‌ಗೆ ಅವಕಾಶಗಳೇ ಕೊಟ್ಟಿಲ್ಲ. ಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಸಾಮ್ಸನ್‌ಗೆ ಸ್ಥಾನ ಸಿಕ್ಕರೂ ಅಬ್ಬರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಗೆಲುವಿಗೆ ಧೋನಿ ಉಪಸ್ಥಿತಿ ತಂಡಕ್ಕೆ ಅವಶ್ಯಕತೆ ಇದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಇದಕ್ಕೆ ಪ್ರಮುಖ 3 ಕಾರಣಗಳಿವೆ.

ಇದನ್ನೂ ಓದಿ: ಕ್ರಿಕೆಟ್‌ನಿಂದ ದೂರ, ದೂರ; ಅಜಯ್ ದೇವಗನ್ ಜೊತೆ ಧೋನಿ ಪ್ರತ್ಯಕ್ಷ!

ಮಾಸ್ಟರ್ ಮೈಂಡ್:
ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಐಸಿಸಿಯ 3 ಟ್ರೋಫಿ ಗೆದ್ದ ಏಕೈಕ ನಾಯಕ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ರ್ಯಾಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿತ್ತು. ಪಂದ್ಯವನ್ನು ಅರ್ಥಮಾಡಿಕೊಂಡು ಗೇಮ್ ಪ್ಲಾನ್ ರೂಪಿಸುವುದರಲ್ಲಿ ಧೋನಿಗೆ ಸರಿಸಾಟಿ ಯಾರೂ ಇಲ್ಲ. ಧೋನಿ ಪಂದ್ಯ ಸಾಗುತ್ತಿದ್ದ ವೇಳೆ ಎದುರಾಳಿಗಳ ಗೇಮ್ ಪ್ಲಾನ್‌ಗೆ ಅನುಗುಣವಾಗಿ ರಣತಂತ್ರ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ವಿಶೇಷ ಕಲೆ ಟೀಂ ಇಂಡಿಯಾದಲ್ಲಿ ಇತರ ಯಾರಿಗೂ ಇಲ್ಲ.

ಮ್ಯಾಜಿಕ್ ವಿಕೆಟ್ ಕೀಪಿಂಗ್:
ಧೋನಿ ಮೀರಿಸೋ ವಿಕೆಟ್ ಕೀಪರ್ ಯಾರೂ ಇಲ್ಲ. ಮಿಂಚಿನ ರೂಪದಲ್ಲಿ ಸ್ಟಂಪೌಟ್ ಮಾಡುವ ಚಾಕಚಕತ್ಯೆ ಧೋನಿಗಿದೆ. ಕ್ರಿಸ್‌ನಿಂದ ಕಾಲು ತೆಗೆದರೆ ಸ್ಟಂಪ್ ಔಟ್ ಖಚಿತ. ಬ್ಯಾಟ್ಸ್‌ಮನ್ ಫೂಟ್‌ವರ್ಕ್, ಪ್ಲಾನ್ ಅನುಸರಿಸಿ ಬೌಲರ್‌ಗಳಿಗೆ ಸೂಚನೆ ನೀಡುತ್ತಾರೆ. 

ಬೆಸ್ಟ್ ಫಿನೀಶರ್:
ಧೋನಿ ಇತ್ತೀಚೆಗೆ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಆದರೆ ಧೋನಿ ಅತ್ಯುತ್ತಮ ಫಿನೀಶರ್ ಅನ್ನೋದನ್ನು ಅಲ್ಲೆಗೆಳೆಯುವಂತಿಲ್ಲ. ಪಂದ್ಯ ಫಿನೀಶ್ ಮಾಡಲು ಸಮರ್ಥ ಬ್ಯಾಟ್ಸ್‌ಮನ್ ಟೀಂ ಇಂಡಿಯಾದಲ್ಲಿ ಧೋನಿ ಬಿಟ್ಟರೆ ಇನ್ಯಾರು ಇಲ್ಲ. 

ಹಲವು ಕಾರಣಗಳಿಂದ ಎಂ.ಎಸ್.ಧೋನಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇರಲೇಬೇಕು. ಆದರೆ ಧೋನಿ ಆಯ್ಕೆ ಕುರಿತು ಸಾಕಷ್ಟು ಗೊಂದಲಗಳಿವೆ. 


 

click me!