ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್

By Suvarna News  |  First Published Jan 11, 2020, 10:13 AM IST

ಹಳೇ ಸೋಲಿಗೆ ಸೇಡು ತೀರಿಸಿಕೊಳ್ಳಲು ಕರ್ನಾಟಕ ಅಖಾಡಕ್ಕಿಳಿದಿದೆ. ಸೌರಾಷ್ಟ್ರ ವಿರುದ್ದದ ಮಹತ್ವದ ರಣಜಿ ಪಂದ್ಯದಲ್ಲಿ ಟಾಸ್ ಸೋತಿರುವ ಕರ್ನಾಟಕ ದಿಟ್ಟ ಪ್ರದರ್ಶನದ ಮೂಲಕ ತಿರುಗುಟೇ ನೀಡೋ ವಿಶ್ವಾಸದಲ್ಲಿದೆ. 


ರಾಜ್‌ಕೋಟ್‌(ಜ.11): 2019-20ರ ರಣಜಿ ಟ್ರೋಫಿಯಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಕರ್ನಾಟಕ, ನಾಕೌಟ್‌ ಹಂತಕ್ಕೇರಲು ಹಾದಿ ಸುಗಮಗೊಳಿಸಿಕೊಳ್ಳುವ ಉತ್ಸಾಹದಲ್ಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಮೂರು ಮುಖಾಮುಖಿಗಳಲ್ಲಿ ಸೌರಾಷ್ಟ್ರ ವಿರುದ್ಧ ಸೋಲುಂಡಿರುವ ಕರ್ನಾಟಕ, ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಅದರಲ್ಲೂ ಕಳೆದ ವರ್ಷದ ಸೆಮಿಫೈನಲ್‌ ಸೋಲು, ರಾಜ್ಯ ತಂಡವನ್ನು ಕಾಡುತ್ತಿದ್ದು ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಉಡುಗೊರೆ ನೀಡಲು ಸಜ್ಜಾದ ಕನ್ನಡಿಗ ಮಯಾಂಕ್!

Tap to resize

Latest Videos

ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕರುಣ್‌ ನಾಯರ್‌ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕಾರಣ, ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರ ಬದಲು ಶ್ರೇಯಸ್‌ ಗೋಪಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಕಳೆದ ವರ್ಷದ ಗರಿಷ್ಠ ರನ್‌ ಸರದಾರ ಕೆ.ವಿ.ಸಿದ್ಧಾಥ್‌ರ್‍ ಗಾಯದಿಂದ ಚೇತರಿಸಿಕೊಂಡು ತಂಡ ಕೂಡಿಕೊಂಡಿದ್ದಾರೆ. ಆಲ್ರೌಂಡರ್‌ ಪವನ್‌ ದೇಶಪಾಂಡೆ ಸಹ ಫಿಟ್‌ ಆಗಿದ್ದು, ಮತ್ತೊಮ್ಮೆ ತಂಡಕ್ಕೆ ನೆರವಾಗುವ ಗುರಿ ಹೊಂದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆರ್‌.ಸಮಥ್‌ರ್‍ ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ದೇವದತ್‌ ಪಡಿಕ್ಕಲ್‌ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣಿದೆ. 

ಇದನ್ನೂ ಓದಿ: ರಣಜಿ ಟ್ರೋಫಿ: ಮುಂಬೈ ಎದುರು ಗೆದ್ದು ಬೀಗಿದ ಕರ್ನಾಟಕ

ಈ ವರ್ಷದ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಒಂದೂ ಶತಕ ದಾಖಲಾಗಿಲ್ಲ. ಈ ಪಂದ್ಯದಲ್ಲಿ ರಾಜ್ಯದ ಆಟಗಾರರಿಂದ ಶತಕ ನಿರೀಕ್ಷೆ ಮಾಡಲಾಗಿದೆ. ಬೌಲಿಂಗ್‌ ವಿಭಾಗದಲ್ಲೂ ಕರ್ನಾಟಕ ಬಲಿಷ್ಠವಾಗಿದೆ. ವಿ.ಕೌಶಿಕ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಪ್ರತೀಕ್‌ ಜೈನ್‌ ಉತ್ತಮ ಲಯದಲ್ಲಿದ್ದಾರೆ.

ಮತ್ತೊಂದೆಡೆ ಸೌರಾಷ್ಟ್ರ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಸೋಲುಂಡಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ತಂಡವನ್ನು ವೇಗಿ ಜಯ್‌ದೇವ್‌ ಉನಾದ್ಕತ್‌ ಮುನ್ನಡೆಸಲಿದ್ದಾರೆ. ಹಾರ್ವಿಕ್‌ ದೇಸಾಯಿ, ಸ್ನೆಲ್‌ ಪಟೇಲ್‌, ಅರ್ಪಿತ್‌ ವಾಸವಾಡ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಇನ್ನಿಂಗ್ಸ್‌ ಹಾಗೂ 72 ರನ್‌ಗಳ ಸೋಲು ಕಂಡಿತ್ತು. ತವರಿನಲ್ಲಿ ಮುಖಭಂಗಕ್ಕೊಳಗಾಗಿದ್ದ ಸೌರಾಷ್ಟ್ರ, ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದೆ.
 

click me!