ವಾರ್ನರ್‌ ಅಭಿ​ನಂದಿ​ಸಲು ಹೊರ​ಟು ನಿಂತಿದ್ದೆ: ಲಾರಾ!

Published : Dec 03, 2019, 10:43 AM IST
ವಾರ್ನರ್‌ ಅಭಿ​ನಂದಿ​ಸಲು ಹೊರ​ಟು ನಿಂತಿದ್ದೆ: ಲಾರಾ!

ಸಾರಾಂಶ

ಡೇವಿಡ್ ವಾರ್ನರ್ ಟೆಸ್ಟ್ ತ್ರಿಶತಕಕ್ಕೆ ಎಲ್ಲೆಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಸೀಸ್ ನಾಯಕ ಡಿಕ್ಲೇರ್ ಮಾಡದಿದ್ದರೆ, ವಾರ್ನರ್ 400 ರನ್ ಸಿಡಿಸಿ, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಮುರಿಯುತ್ತಿದ್ದರು ಅನ್ನೋ ಮಾತುಗಳು ಇವೆ. ಇದೀಗ ಸ್ವತಃ ಬ್ರಿಯಾನ್ ಲಾರಾ ಕೂಡ ವಾರ್ನರ್ 400 ರನ್ ಐತಿಹಾಸಿಕ ದಾಖಲೆಗೆ ಕಾಯುತ್ತಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಅಡಿ​ಲೇ​ಡ್‌(ಡಿ.03): ಆಸ್ಪ್ರೇ​ಲಿಯಾದ ಡೇವಿಡ್‌ ವಾರ್ನರ್‌ 400 ರನ್‌ ದಾಖ​ಲೆ​ ಮುರಿ​ಯು​ವ ನಿರೀ​ಕ್ಷೆ​ಯಲ್ಲಿದ್ದೆ ಎಂದು ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ತಿಳಿ​ಸಿ​ದರು. ‘ಅಡಿ​ಲೇ​ಡ್‌​ನ​ಲ್ಲಿದ್ದ ನಾನು, ಸೋ​ಬ​ರ್ಸ್ ಅವ​ರಂತೆ​ಯೇ ವಾರ್ನರ್‌ ಅಭಿ​ನಂದಿ​ಸಲು ಹೊರ​ಟು ನಿಂತಿದ್ದೆ. ದಾಖ​ಲೆ​ಗಳಿರು​ವುದೇ ಮುರಿ​ಯ​ಲು, ವಾರ್ನ​ರ್‌ಗೆ ಇನ್ನೊಂದು ಅವ​ಕಾಶ ಸಿಗ​ಬ​ಹು​ದು’ ಎಂದು ಲಾರಾ ಹೇಳಿ​ದ​ರು. 

ಇದನ್ನೂ ಓದಿ: ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

ಟೆಸ್ಟ್‌ನಲ್ಲಿ ಗರಿಷ್ಟವೈಯ​ಕ್ತಿಕ ಮೊತ್ತದ ದಾಖ​ಲೆ​ಯನ್ನು ಲಾರಾ 2 ಬಾರಿ ಮುರಿ​ದಿ​ದ್ದರು. 1994ರಲ್ಲಿ ಇಂಗ್ಲೆಂಡ್‌ ವಿರುದ್ಧ 375 ರನ್‌ ದಾಖ​ಲಿ​ಸಿ ಗ್ಯಾರಿ ಸೋಬ​ರ್ಸ್ ಅವರ 36 ವರ್ಷ ಹಿಂದಿನ 365 ರನ್‌ ದಾಖಲೆ ಮುರಿ​ದಿ​ದ್ದರು. 2004ರಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ದಾಖ​ಲೆ​ ಸುಧಾ​ರಿ​ಸಿದ್ದರು. ಅಜೇಯ 400 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದರು. 

ಇದನ್ನೂ ಓದಿ: ಟೆಸ್ಟ್ ತ್ರಿಶತಕಕ್ಕೆ ವಿರೇಂದ್ರ ಸೆಹ್ವಾಗ್ ಕಾರಣ; ವಾರ್ನರ್ ಬಿಚ್ಚಿಟ್ರು ಸೀಕ್ರೆಟ್!.

ಪಾಕ್‌ ವಿರುದ್ಧ ವಾರ್ನರ್‌ 335 ರನ್‌ ಗಳಿ​ಸಿ​ದ್ದಾಗ ನಾಯಕ ಟಿಮ್‌ ಪೈನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ದ್ದರು. ಇದು ಚರ್ಚೆಗೂ ಕಾರಣವಾಗಿತ್ತು. ವಾರ್ನರ್‌ಗೆ ಬ್ರಿಯಾನ್ ಲಾರಾ ದಾಖಲೆ ಮುರಿಯುವ ಎಲ್ಲಾ ಅವಕಾಶವಿತ್ತು. ಅಷ್ಟರಲ್ಲೇ ಟಿಮ್ ಪೈನ್ ಡಿಕ್ಲೇರ್ ಮಾಡಿದ್ದರು. ಬಳಿಕ ಮಾತನಾಡಿದ್ದ ವಾರ್ನರ್, ಲಾರಾ ದಾಖಲೆ ಮುರಿಯುವ ಸಾಮರ್ಥ್ಯ ಟೀಂ ಇಂಡಿಯಾದ ರೋಹಿತ್ ಶರ್ಮಾಗಿದೆ ಎಂದಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!