
ಕಾಠ್ಮಂಡು (ನೇಪಾಳ): ಟಿ20 ಕ್ರಿಕೆಟ್ ಟೂರ್ನಿಯೊಂದರಲ್ಲಿ ನೇಪಾಳ ತಂಡದ ಆಟಗಾರ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಪುರುಷ/ಮಹಿಳಾ ಟಿ20 ಕ್ರಿಕೆಟ್‌ನಲ್ಲೇ ನೂತನ ದಾಖಲೆಯಾಗಿದೆ. ಇಲ್ಲಿನ ಪೊಕಹರಾದಲ್ಲಿ ಸೋಮವಾರ ನಡೆದ 13ನೇ ದಕ್ಷಿಣ ಏಷ್ಯನ್ ಗೇಮ್ಸ್‌ನ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ನೇಪಾಳ ತಂಡದ ಆಟಗಾರ್ತಿ ಅಂಜಲಿ ಚಾಂದ್, ಯಾವುದೇ ರನ್ ನೀಡದೆ 6 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಸಂತಸದ ಅಲೆಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್; ಆಸೀಸ್ ಆಟಗಾರ್ತಿಗೆ 1 ನಿಷೇಧ!
ಮಾಲ್ಡೀವ್ಸ್ ವಿರುದ್ಧದ ಮಹಿಳಾ ಟಿ20ಕ್ರಿಕೆಟ್ ಪಂದ್ಯದಲ್ಲಿ ಅಂಜಲಿ, ಹ್ಯಾಟ್ರಿಕ್ ಸಹಿತ ಸೊನ್ನೆಗೆ 6 ವಿಕೆಟ್ ಕಿತ್ತರು. ಮಹಿಳಾ ಟಿ20 ಕ್ರಿಕೆಟ್‌ನ ಉದ್ಘಾಟನಾ ಪಂದ್ಯದಲ್ಲೇ ಅಂಜಲಿ ವಿಶ್ವದಾಖಲೆಗೆ ಸಾಕ್ಷಿಯಾಗಿದೆ. ಪಂದ್ಯದಲ್ಲಿ 13 ಎಸೆತಗಳಲ್ಲಿ 6 ವಿಕೆಟ್ ಕಿತ್ತ ಅಂಜಲಿ, ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು. ಅವರ 2.1 ಓವರ್ಗಳಲ್ಲಿ 2 ಮೇಡನ್ ಒಳಗೊಂಡಿದ್ದವು. ಪುರುಷರ ಅಥವಾ ಮಹಿಳಾ ಟಿ20ಯಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಿದು. 2019ರ ಜನವರಿಯಲ್ಲಿ ಚೀನಾ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಮಲೇಷ್ಯಾ ಬೌಲರ್ ಮಸ್ ಎಲೈಸಾ 6 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: 15 ವರ್ಷದ ಶಫಾಲಿ ವರ್ಮಾ ಅಬ್ಬರ; ಭಾರತಕ್ಕೆ ಸುಲಭ ಜಯ
ಮಾಲ್ಡೀವ್‌್ಸ 10.1 ಓವರ್ಗಳಲ್ಲಿ 16 ರನ್‌ಗಳಿಸಿ ಆಲೌಟಾಯಿತು. ನೇಪಾಳ ತಂಡ, ಮಾಲ್ಡೀವ್‌್ಸ ನೀಡಿದ ಈ ಅಲ್ಪ ಗುರಿಯನ್ನು ಕೇವಲ 5 ಎಸೆತಗಳಲ್ಲಿ 17 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು. ಇತ್ತೀಚೆಗೆ ಬಾಂಗ್ಲಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ವೇಗದ ಬೌಲರ್ ದೀಪಕ್ ಚಹರ್ 7 ರನ್ ನೀಡಿ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.