IPL ಹರಾಜು: 73 ಸ್ಥಾನಕ್ಕೆ 971 ಕ್ರಿಕೆ​ಟಿಗರ ಸ್ಪರ್ಧೆ!

By Suvarna News  |  First Published Dec 3, 2019, 10:28 AM IST

ಈ ಬಾರಿಯ ಹರಾಜಿನಲ್ಲಿ 8 ಫ್ರಾಂಚೈಸಿಗಳಿಗೆ ಬೇಕಾಗಿರುವುದು ಒಟ್ಟು 73 ಆಟಗಾರರು. ಆದರೆ 971 ಕ್ರಿಕೆಟಿಗರು ಕಣದಲ್ಲಿದ್ದಾರೆ. ವರ್ಷದಿಂದ ವರ್ಷಕ್ಕೆ ಆಟಗಾರರ ಸಂಖ್ಯೆ ದುಪ್ಪಟ್ಟಾಗುತ್ತಿದೆ. 


ಕೋಲ್ಕತಾ(ಡಿ.03) : 2020ನೇ ಸಾಲಿನ ಐಪಿ​ಎಲ್‌ ಹರಾಜು ಪ್ರಕ್ರಿಯೆ ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದೆ. ಬಿಸಿಸಿಐ ಹರಾಜಿಗಾಗಿ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಫ್ರಾಂಚೈಸಿಗಳು ಆಟಗಾರರ ವಿವರ, ಯಾರನ್ನು ಖರೀದಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ತೊಡಗಿದೆ. ವಿಶೇಷ ಅಂದರೆ ಈ ಬಾರಿಯ ಹರಾಜಿನಲ್ಲಿ ಒಟ್ಟು 73 ಆಟಗಾರರನ್ನು ಬಿಕರಿಯಾಗಲಿದ್ದಾರೆ. ಇದಕ್ಕಾಗಿ 971 ಕ್ರಿಕೆಟಿಗರು ಕಣದಲ್ಲಿದ್ದಾರೆ. 

ಇದನ್ನೂ ಓದಿ: IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

Latest Videos

971 ಕ್ರಿಕೆ​ಟಿ​ಗರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 713 ಭಾರ​ತೀಯ ಹಾಗೂ 258 ವಿದೇಶಿ ಆಟ​ಗಾ​ರರು ಒಳ​ಗೊಂಡಿ​ದ್ದಾ​ರೆ. 8 ಐಪಿ​ಎಲ್‌ ಫ್ರಾಂಚೈ​ಸಿ​ಗ​ಳಲ್ಲಿ ಲಭ್ಯ​ವಿ​ರುವ 73 ಸ್ಥಾನ​ಕ್ಕಾಗಿ 971 ಆಟ​ಗಾ​ರರ ಮಧ್ಯೆ ಸ್ಪರ್ಧೆ ಏರ್ಪ​ಡ​ಲಿ​ದೆ. ಹೆಸ​ರು ನೋಂದ​ಣಿಗೆ ನ.30 ಕೊನೆಯ ದಿನ​ವಾ​ಗಿತ್ತು. 

ಇದನ್ನೂ ಓದಿ: RCB ವೀಕ್ನೆಸ್ ಬಹಿರಂಗ ಪಡಿಸಿದ ಆಲ್ರೌಂಡರ್ ಮೊಯಿನ್ ಆಲಿ!

215 ಅಂತಾ​ರಾ​ಷ್ಟ್ರೀಯ ಆಟ​ಗಾ​ರ​ರು, ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾ​ರ್ಪಣೆ ಮಾಡ​ದಿ​ರುವ 754 ಕ್ರಿಕೆ​ಟಿ​ಗರು, ಐಸಿಸಿ ಅಸೋ​ಸಿ​ಯೇಟ್‌ ರಾಷ್ಟ್ರ​ಗಳ ಇಬ್ಬರು ಕ್ರಿಕೆ​ಟಿ​ಗರು ಹರಾ​ಜಿಗೆ ಹೆಸರು ನೋಂದಾ​ಯಿ​ಸಿ​ದ್ದಾ​ರೆ.

ಇದನ್ನೂ ಓದಿ: IPL 2020 ಹರಾಜಿಗೂ ಮುನ್ನ RCB ತಂಡ ಹೀಗಿದೆ.

click me!