'ಈಗ ಅಂಟಿರೋ ಪೀಡೆ ಬಿಡ್ತದೆ.. ಹಾಗಾಗಿ ಈ ಸಲ ಅಂತೂ ಕಪ್ ನಮ್ದೇ..': RCB Unbox ಟ್ರೇಲರ್‌ಗೆ ಸಿಂಪಲ್ ಸುನಿ ಸೇರಿ ನೆಟ್ಟಿಗರು ಫುಲ್

Published : Mar 13, 2024, 11:59 AM IST
'ಈಗ ಅಂಟಿರೋ ಪೀಡೆ ಬಿಡ್ತದೆ.. ಹಾಗಾಗಿ ಈ ಸಲ ಅಂತೂ ಕಪ್ ನಮ್ದೇ..': RCB Unbox ಟ್ರೇಲರ್‌ಗೆ ಸಿಂಪಲ್ ಸುನಿ ಸೇರಿ ನೆಟ್ಟಿಗರು ಫುಲ್

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ವರ್ಷಗಳಲ್ಲಿ ಕಪ್ ಗೆಲ್ಲದೇ ಇದ್ದರೂ, ಆರ್‌ಸಿಬಿ ಮೇಲಿನ ಅಭಿಮಾನ ಫ್ಯಾನ್ಸ್‌ಗಳಲ್ಲಿ ಒಂದಿಂಚೂ ಕಡಿಮೆಯಾಗಿಲ್ಲ. ಇನ್ನು ಹೊರತಾಗಿಯೂ ಆರ್‌ಸಿಬಿ ತಂಡದಲ್ಲಿ ಕನ್ನಡವನ್ನು ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಲೇ ಇದೆ. ಆದರೆ ಇದೀಗ ಆರ್‌ಸಿಬಿ ಫ್ರಾಂಚೈಸಿಯು ಅನ್‌ಬಾಕ್ಸ್‌ ಕಾರ್ಯಕ್ರಮದ ಟ್ರೇಲರ್ ರಿಲೀಸ್ ಮಾಡಿದೆ.

ಬೆಂಗಳೂರು(ಮಾ.13): ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುಲಿರುವ ಹೈವೋಲ್ಟೇಜ್ ಕದನದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಉದ್ಘಾಟನಾ ಪಂದ್ಯಕ್ಕೂ ಮೊದಲು ಮಾರ್ಚ್ 19ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡಿಗರ ಬಹುಕಾಲದ ಬೇಡಿಕೆಯೊಂದು ಈಡೇರುವ ಸುಳಿವನ್ನು ಆರ್‌ಸಿಬಿ ಫ್ರಾಂಚೈಸಿ ಬಿಟ್ಟುಕೊಟ್ಟಿದೆ.

ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ವರ್ಷಗಳಲ್ಲಿ ಕಪ್ ಗೆಲ್ಲದೇ ಇದ್ದರೂ, ಆರ್‌ಸಿಬಿ ಮೇಲಿನ ಅಭಿಮಾನ ಫ್ಯಾನ್ಸ್‌ಗಳಲ್ಲಿ ಒಂದಿಂಚೂ ಕಡಿಮೆಯಾಗಿಲ್ಲ. ಇನ್ನು ಹೊರತಾಗಿಯೂ ಆರ್‌ಸಿಬಿ ತಂಡದಲ್ಲಿ ಕನ್ನಡವನ್ನು ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಲೇ ಇದೆ. ಆದರೆ ಇದೀಗ ಆರ್‌ಸಿಬಿ ಫ್ರಾಂಚೈಸಿಯು ಅನ್‌ಬಾಕ್ಸ್‌ ಕಾರ್ಯಕ್ರಮದ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ರಿಷಭ್ ಶೆಟ್ಟಿ ಕಾಣಿಸಿಕೊಂಡಿದ್ದು,  ಅವರ ಮುಂದೆ ಮೂರು ಕೋಣಗಳನ್ನು ನಿಲ್ಲಿಸಲಾಗಿದೆ. ಒಂದು ಕೋಣದ ಮೇಲೆ ರಾಯಲ್, ಇನ್ನೊಂದು ಕೋಣದ ಮೇಲೆ ಚಾಲೆಂಜರ್ಸ್ ಹಾಗೂ ಕೊನೆಯ ಕೋಣದ ಮೇಲೆ ಬ್ಯಾಂಗಳೂರು ಎಂದು ಬರೆಯಲಾಗಿದೆ. ರಿಷಭ್ ಶೆಟ್ಟಿ ಎರಡು ಕೋಣಗಳನ್ನು ದಾಟಿ ಮೂರನೇ ಕೋಣದ ಬಳಿ ಬಂದು, ಇದು ಬೇಡ, ಭಟ್ರೆ ತಗೊಂಡು ಹೋಗಿ ಇದನ್ನು ಎಂದಿದ್ದಾರೆ. ಕೊನೆಯ ಅರ್ಥ ಆಯ್ತಾ ಎಂದಿದ್ದಾರೆ.

IPL ಟೂರ್ನಿಗೆ ಕಿಚ್ಚು ಹಚ್ಚಿದ ರಿಷಭ್‌ ಶೆಟ್ಟಿ..! ಕಾಂತಾರ ಹೀರೋ RCB ಬಗ್ಗೆ ಏನ್‌ ಹೇಳ್ತಿದ್ದಾರೆ ಅರ್ಥ ಆಯ್ತಾ..?

ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು ಎನ್ನುವ ಹೆಸರಿನ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಬದಲಿಸಿ ಎಂದು ಕನ್ನಡಿಗರು ಆರಂಭದಿಂದಲೂ ಆರ್‌ಸಿಬಿ ಫ್ರಾಂಚೈಸಿ ಬಳಿ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಆರ್‌ಸಿಬಿ ಅನ್‌ಬಾಕ್ಸ್ ಟ್ರೇಲರ್ ಗಮನಿಸಿದರೆ, ಕೊನೆಗೂ ಕನ್ನಡಿಗರ ಮಾತಿಗೆ ಆರ್‌ಸಿಬಿ ಪುರಸ್ಕಾರ ನೀಡಿದಂತೆ ಕಂಡುಬರುತ್ತಿದೆ.

ನಿಯತ್ತು ಎಲ್ಲಕ್ಕಿಂತ ಮಿಗಿಲು: RCB ಪರ ಕೊಹ್ಲಿ ಪಾದಾರ್ಪಣೆಗೆ 16ರ ಹರೆಯ..! KGF ಟಚ್ ಕೊಟ್ಟ ಬೆಂಗಳೂರು ಫ್ರಾಂಚೈಸಿ

ಈ ಟ್ರೇಲರ್ ನೋಡಿದ ನೆಟ್ಟಿಗರು ಫುಲ್ ಥ್ರಿಲ್ ಆಗಿದ್ದಾರೆ. ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ, ಈಗ ಅಂಟಿರೋ ಪೀಡೆ ಬಿಡ್ತದೆ.. ಹಾಗಾಗಿ ಈ ಸಲ ಅಂತೂ ಕಪ್ ನಮ್ದೇ.. ಎಂದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಬೆಂಗಳೂರು ಬುಲ್ಸ್ ಕಬಡ್ಡಿ ಫ್ರಾಂಚೈಸಿ ಕೂಡಾ ಈ ಆರ್‌ಸಿಬಿ ಟ್ರೇಲರ್ ಮೆಚ್ಚಿಕೊಂಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?