ಇಂಗ್ಲೆಂಡಿನ ಲಂಕಶೈರ್‌, ಸಸೆಕ್ಸ್‌ ವಿರುದ್ಧ ಆಡಲಿರುವ ಕರ್ನಾಟಕ

Published : Mar 13, 2024, 10:21 AM IST
ಇಂಗ್ಲೆಂಡಿನ ಲಂಕಶೈರ್‌, ಸಸೆಕ್ಸ್‌ ವಿರುದ್ಧ ಆಡಲಿರುವ ಕರ್ನಾಟಕ

ಸಾರಾಂಶ

ಕರ್ನಾಟಕ ಹಿರಿಯರ ತಂಡದ ವಿರುದ್ಧ ಲಂಕಶೈರ್‌ ಮಾ.19ರಿಂದ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಇಂಗ್ಲೆಂಡ್‌ನಿಂದ ಎರಡೂ ತಂಡಗಳು ಬೆಂಗಳೂರಿಗೆ ಆಗಮಿಸಿದ್ದು, ಮಾ.21ರ ವರೆಗೆ 10 ದಿನಗಳ ಕಾಲ ಅಭ್ಯಾಸ ನಡೆಸಲಿವೆ. ಲಂಕಶೈರ್‌ ಹಾಗೂ ಸಸೆಕ್ಸ್‌ ತಂಡಗಳು ಆರ್‌ಸಿಬಿ ವಿರುದ್ಧವೂ ಅಭ್ಯಾಸ ಪಂದ್ಯ ಆಡುವು ಸಾಧ್ಯತೆ ಇದೆ

ಬೆಂಗಳೂರು: ಇಂಗ್ಲೆಂಡ್‌ನ 2 ಕೌಂಟಿ ತಂಡಗಳಾದ ಲಂಕಶೈರ್‌ ಹಾಗೂ ಸಸೆಕ್ಸ್‌ ವಿರುದ್ಧ ಕರ್ನಾಟಕ ತಂಡ ಅಭ್ಯಾಸ ಪಂದ್ಯಗಳನ್ನಾಡಲಿದೆ. ಅಂಡರ್‌-19, ಅಂಡರ್‌-23 ಹಾಗೂ ಹಿರಿಯರ ತಂಡದ ಆಟಗಾರರನ್ನೊಳಗೊಂಡ ರಾಜ್ಯ ತಂಡದ ವಿರುದ್ಧ ಸಸೆಕ್ಸ್‌ ಮಾ.14, 15ಕ್ಕೆ ಆಲೂರು ಕ್ರೀಡಾಂಗಣದಲ್ಲಿ ಪಂದ್ಯವಾಡಲಿದೆ. 

ಇನ್ನು ಕರ್ನಾಟಕ ಹಿರಿಯರ ತಂಡದ ವಿರುದ್ಧ ಲಂಕಶೈರ್‌ ಮಾ.19ರಿಂದ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಇಂಗ್ಲೆಂಡ್‌ನಿಂದ ಎರಡೂ ತಂಡಗಳು ಬೆಂಗಳೂರಿಗೆ ಆಗಮಿಸಿದ್ದು, ಮಾ.21ರ ವರೆಗೆ 10 ದಿನಗಳ ಕಾಲ ಅಭ್ಯಾಸ ನಡೆಸಲಿವೆ. ಲಂಕಶೈರ್‌ ಹಾಗೂ ಸಸೆಕ್ಸ್‌ ತಂಡಗಳು ಆರ್‌ಸಿಬಿ ವಿರುದ್ಧವೂ ಅಭ್ಯಾಸ ಪಂದ್ಯ ಆಡುವು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

WPL 2024: ರಿಚಾ, ಪೆರ್ರಿ ಮಿಂಚಿನ ಆಟ, ಮೊದಲ ಬಾರಿಗೆ ಆರ್‌ಸಿಬಿ ನಾಕೌಟ್‌ಗೆ ಲಗ್ಗೆ

ಯುಪಿ ವಿರುದ್ಧ 663 ರನ್‌ ಲೀಡ್‌ ಪಡೆದ ಕರ್ನಾಟಕ

ಬೆಂಗಳೂರು: ಸಿ.ಕೆ.ನಾಯ್ಡು ಟ್ರೋಫಿ ಅಂಡರ್‌-23 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ಕರ್ನಾಟಕ ದಿಟ್ಟ ಹೆಜ್ಜೆ ಇರಿಸಿದೆ. ಉತ್ತರ ಪ್ರದೇಶ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಕರ್ನಾಟಕ 663 ರನ್‌ಗಳ ಬೃಹತ್‌ ಮುನ್ನಡೆ ಪಡೆದಿದ್ದು, ಗೆಲ್ಲುವುದು ಬಹುತೇಕ ಖಚಿತವಾಗಿದೆ. ಬುಧವಾರ ಪಂದ್ಯದ ಕೊನೆ ದಿನವಾಗಿದ್ದು, ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಕರ್ನಾಟಕ ಚಾಂಪಿಯನ್‌ ಎನಿಸಿಕೊಳ್ಳಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್‌ಗಳ ದೊಡ್ಡ ಮುನ್ನಡೆ ಪಡೆದ್ದಿದ್ದ ಕರ್ನಾಟಕ ತಂಡ ಸದ್ಯ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 444 ರನ್ ಕಲೆಹಾಕಿದೆ.

ನಿಯತ್ತು ಎಲ್ಲಕ್ಕಿಂತ ಮಿಗಿಲು: RCB ಪರ ಕೊಹ್ಲಿ ಪಾದಾರ್ಪಣೆಗೆ 16ರ ಹರೆಯ..! KGF ಟಚ್ ಕೊಟ್ಟ ಬೆಂಗಳೂರು ಫ್ರಾಂಚೈಸಿ

2ನೇ ದಿನ ವಿಕೆಟ್‌ ನಷ್ಟವಿಲ್ಲದೆ 91 ರನ್‌ ಗಳಿಸಿದ್ದ ರಾಜ್ಯ ತಂಡ ಮಂಗಳವಾರವೂ ಯುಪಿ ಬೌಲರ್‌ಗಳನ್ನು ಚೆಂಡಾಡಿತು. ಮೊದಲ ವಿಕೆಟ್‌ಗೆ 144 ರನ್‌ ಜೊತೆಯಾಟವಾಡಿ ಪ್ರಖರ್‌ ಚತುರ್ವೇದಿ 86, ಮೆಕ್‌ನೀಲ್‌ 79 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅನೀಶ್‌ ಕೆ.ವಿ. ಎದುರಾಳಿ ತಂಡದ ಮೇಲೆ ಸವಾರಿ ಮಾಡಿದರು. ಅವರು 221 ಎಸೆತಗಳಲ್ಲಿ 18 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 171 ರನ್‌ ಕಲೆ ಹಾಕಿದ್ದಾರೆ. ನಾಯಕ ಸ್ಮರಣ್‌ 40 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ಕರ್ನಾಟಕ 358/10 ಮತ್ತು 444/5(3ನೇ ದಿನದಂತ್ಯಕ್ಕೆ)

(ಅನೀಶ್‌ 171*, ಪ್ರಖರ್‌ 86, ಮೆಕ್‌ನೀಲ್‌ 79, ರಿತುರಾಜ್‌ 1-38), ಉತ್ತರ ಪ್ರದೇಶ 139/10
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!