ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ

By Naveen Kodase  |  First Published Sep 4, 2024, 12:27 PM IST

ಪಾಕಿಸ್ತಾನ ತಂಡವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲೇ ಅವರದ್ದೇ ನೆಲದಲ್ಲಿ ಬಗ್ಗುಬಡಿಯುವಲ್ಲಿ ಬಾಂಗ್ಲಾದೇಶ ತಂಡವು ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ, ಪಾಕಿಸ್ತಾನವನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಆತಿಥೇಯ ತಂಡದದ 2ನೇ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಈ ಮೂಲಕ ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು. ವಿದೇಶಿ ನೆಲದಲ್ಲಿ ತಂಡಕ್ಕಿದು 2ನೇ ಟೆಸ್ಟ್ ಸರಣಿ ಗೆಲುವು. 2009ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಗೆದ್ದಿತ್ತು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ನೆರೆಯ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದೆ.

ಗೆಲುವಿಗೆ 185 ರನ್ ಗುರಿ ಪಡೆದಿದ್ದ ಬಾಂಗ್ಲಾ, 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 42 ರನ್ ಕಲೆಹಾಕಿತ್ತು. ಕೊನೆ ದಿನವಾದ ಮಂಗಳವಾರ ಇನ್ನೂ 143 ರನ್ ಅಗತ್ಯವಿತ್ತು. ಜಾಕಿರ್ ಹಸನ್ (40), ನಜ್ರುಲ್ ಹೊಸೈನ್ (38), ಮೋಮಿ ನುಲ್ ಹಕ್ (34), ಮುಷ್ಟಿಕುರ್ ರಹೀಂ ಔಟಾಗದೆ 22, ಶಕೀಬ ಅಲ್ ಹಸನ್ ಔಟಾಗದೆ 21 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 274 ರನ್ ಗಳಿಸಿದ್ದರೆ, ಬಾಂಗ್ಲಾದೇಶ 262 ರನ್ ಗಳಿಸಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವನ್ನು ಬಾಂಗ್ಲಾ ತಂಡ  ಕೇವಲ 172 ರನ್‌ಗೆ ನಿಯಂತ್ರಿಸಿತ್ತು.

Latest Videos

undefined

ಐಪಿಎಲ್ ಆರ್‌ಸಿಬಿ ಆಫರ್‌ ರಿಜೆಕ್ಟ್‌ ಮಾಡಿದ ಸ್ಟಾರ್ ಆಟಗಾರನೀಗ ಹೊಟ್ಟೆಪಾಡಿಗಾಗಿ ಅಕೌಂಟ್ಸ್‌ ಮ್ಯಾನೇಜರ್ ಆಗಿ ಕೆಲಸ..!

ಪಾಕ್‌ಗೆ ತವರಿನ ಕೊನೆ 10 ಟೆಸ್ಟ್‌ ನಲ್ಲಿ ಗೆಲುವಿಲ್ಲ 

ಯಾವುದೇ ತಂಡ ತನ್ನ ತವರಿನಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುವುದು ಸಹಜ. ಆದರೆ ಪಾಕ್ ಪಾಲಿಗೆ ತವರಲ್ಲೂ ಗೆಲುವಿನ ಅದೃಷ್ಟವಿಲ್ಲ. ತಂಡ ತವರಿನಲ್ಲಿ ನಡೆದ ಕೊನೆ 10 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. 2021ರ ಡಿಸೆಂಬರ್‌ನಲ್ಲಿ ಕೊನೆ ಬಾರಿ ದ.ಆಫ್ರಿಕಾ ವಿರುದ್ಧ ಗೆದ್ದಿತ್ತು.

ಇನ್ನು ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಪಾಕಿಸ್ತಾನವನ್ನು ಭರ್ಜರಿಯಾಗಿಯೇ ಟ್ರೋಲ್ ಮಾಡಿದೆ.
ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮಾಚರಣೆಯ ಫೋಟೋ ಹಂಚಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿಯು, "ಈ ತಂಡದ ರೀತಿಯಲ್ಲಿ ತವರಿನಲ್ಲಿ ಗೆಲ್ಲೋದು, ಸುಲಭವೇನಲ್ಲ. ಅವರು ಈ ತಿಂಗಳಿನಲ್ಲೂ ಹಿಂದುಳಿದಿದ್ದಾರೆ" ಎಂದು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ರೋಲ್ ಮಾಡಿದೆ.

Winning at home isn't as easy as this team makes it look like 😌

And they are back this month 😉 pic.twitter.com/Ij7jl8KHCh

— Royal Challengers Bengaluru (@RCBTweets)

ಭಾರತ ಟೆಸ್ಟ್‌ ಕ್ರಿಕೆಟ್ ತಂಡವನ್ನು ತವರಿನಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಇಂಗ್ಲೆಂಡ್‌, ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡಗಳು ಕೂಡಾ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ದಶಕಗಳಿಂದ ಪರದಾಡುತ್ತಿವೆ. ಆದರೆ ಪಾಕಿಸ್ತಾನ ತಂಡವು ತವರಿನಲ್ಲೇ ಬಾಂಗ್ಲಾದೇಶ ಎದುರು ಟೆಸ್ಟ್‌ ಸರಣಿ ವೈಟ್‌ವಾಷ್‌ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

click me!