ಆರ್‌ಸಿಬಿ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್, ಸಿಎಸ್‌ಕ್‌ಗೆ 251 ರನ್ ಟಾರ್ಗೆಟ್ ನೀಡಿ ದಾಖಲೆ

Published : Apr 05, 2026, 09:25 PM ISTUpdated : Apr 05, 2026, 09:31 PM IST
CSK vs RCB Match free live streaming

ಸಾರಾಂಶ

ಆರ್‌ಸಿಬಿ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್, ಸಿಎಸ್‌ಕ್‌ಗೆ 251 ರನ್ ಟಾರ್ಗೆಟ್ ನೀಡಿ ದಾಖಲೆ, ದೇವದತ್ ಪಡಿಕ್ಕಲ್, ಸಾಲ್ಟ್ ಸೇರಿದಂತೆ ಇಡೀ ಆರ್‌ಸಿಬಿ ಬ್ಯಾಟರ್ ಅಬ್ಬರಿಸಿದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಕಷ್ಟ ಹೆಚ್ಚಾಗಿದೆ. 

ಬೆಂಗಳೂರು (ಏ.05) ಹಾಲಿ ಚಾಂಪಿಯನ್ ಆರ್‌ಸಿಬಿ ಐಪಿಎಲ್ 2026ರಲ್ಲಿ ಅಬ್ಬರ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಸಿಎಸ್‌‌ಕೆ ವಿರುದ್ಧ ಅಬ್ಬರಿಸಿದ ಆರ್‌ಸಿಬಿ 250 ರನ್ ಸಿಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್ ಟಾರ್ಗೆಟ್ ನೀಡಿದೆ. ಇದು ಚಿನ್ನಸ್ವಾಮಿ ಕ್ರೀಡಾಂಗದಲ್ಲಿ ಗರಿಷ್ಠ ರನ್ ದಾಖಲೆಯಾಗಿದೆ.

ಟಾಸ್ ಸೋತರೂ ಅಬ್ಬರಿಸಿದ ಆರ್‌ಸಿಬಿ

ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಇಳಿದಿತ್ತು. ಚೇಸಿಂಗ್ ಫ್ಲೆಂಡ್ಲಿ ಚಿನ್ನಸ್ವಾಮಿಯಲ್ಲಿ ಈ ನಡೆ ಅಭಿಮಾನಿಗಳಿಗೆ ಆತಂಕ ಸೃಷ್ಟಿಸಿತ್ತು. ಇಧರ ಬೆನ್ನಲ್ಲೇ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಆರಂಭಿಕ 2 ಓವರ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ವಿರಾಟ್ ಕೊಹ್ಲಿ 28 ರನ್ ಸಿಡಿಸಿ ಔಟಾದರು. ಇದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಆದರೆ ದೇವದತ್ ಪಡಿಕ್ಕಲ್ ಫಿಲಿಪ್ ಸಾಲ್ಟ್ ಅಬ್ಬರಕ್ಕೆ ಆರ್‌ಸಿಬಿ ಅಭಿಮಾನಿಗಳ ಆತಂಕ ದೂರು ಮಾಡಿತು.

ಪಡಿಕ್ಕಲ್ 28 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಇತ್ತ ಫಿಲ್ ಸಾಲ್ಟ್ 30 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ನಾಯಕ ರಜತ್ ಪಾಟಿದಾರ್ 19 ಎಸೆತದಲ್ಲಿ ಅಜೇಯ 49 ರನ್ ಸಿಡಿಸಿದರು. ಇತ್ತ ಟಿಮ್ ಡೇವಿಡ್ ಅಬ್ಬರಕ್ಕೆ ಚೆನ್ನೈ ಸುಸ್ತಾಗಿತ್ತು. ಕೇವಲ 25 ಎಸೆತದಲ್ಲಿ ಅಜೇಯ 70 ರನ್ ಸಿಡಿಸಿತು. 3 ವಿಕೆಟ್ ನಷ್ಟಕ್ಕೆ 250 ರನ್ ಸಿಡಿಸಿತು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಸ್‌ಕೆ ಎದುರು ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಬೇಕಿದೆ ಜಸ್ಟ್ 14 ರನ್!
ಇಂದಿನ ಆರ್‌ಸಿಬಿ-ಸಿಎಸ್‌ಕೆ ನಡುವಿನ ಮ್ಯಾಚ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್