ಇಂಡಿಯಾ ಕ್ರಿಕೆಟ್ ಟೀಂ ಆಟಗಾರ ವಿರಾಟ್ ಕೊಹ್ಲಿ ರಣಜಿ ಪಂದ್ಯಕ್ಕೆ ತಯಾರಿ ನಡೆಸಿದ್ದಾರೆ. ನಾಳೆಯಿಂದ ದೆಹಲಿ ಪರ ಕೊಹ್ಲಿ ರಣಜಿ ಆಡಲಿದ್ದಾರೆ. ಈ ಮಧ್ಯೆ ಮೈದಾನದಲ್ಲಿ ಬಾಲಕನೊಬ್ಬನ ಜೊತೆ ಕೊಹ್ಲಿ ನಡೆಸಿದ ಮಾತುಕತೆ ವಿಡಿಯೋ ವೈರಲ್ ಆಗಿದೆ.
ಟೀಂ ಇಂಡಿಯಾ (Team India )ದ ದಂತ ಕಥೆ ವಿರಾಟ್ ಕೊಹ್ಲಿ (Virat Kohli) 13 ವರ್ಷಗಳ ನಂತ್ರ ರಣಜಿ ಟ್ರೋಫಿಗೆ ವಾಪಸ್ ಆಗ್ತಿದ್ದಾರೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ರಣಜಿ ಪಂದ್ಯ (Ranji match)ದಲ್ಲಿ ಕೊಹ್ಲಿ ನೋಡುವ ಉತ್ಸಾಹ ಇಮ್ಮಡಿಗೊಂಡಿದೆ. ವಿರಾಟ್ ಕೊಹ್ಲಿ ದೆಹಲಿ ಪರ ರಣಜಿ ಪಂದ್ಯವನ್ನು ಆಡಲಿದ್ದಾರೆ. ಜನವರಿ 30 ರಿಂದ ನಡೆಯಲಿರುವ ದೆಹಲಿ ಮತ್ತು ರೈಲ್ವೇಸ್ (Railways) ನಡುವಿನ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ತಯಾರಿ ಶುರು ಮಾಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಮಂಗಳವಾರ ಅಭ್ಯಾಸ ನಡೆಸಿದ್ದಾರೆ. ವಿರಾಟ್ ಕೊಹ್ಲಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಚಿಕ್ಕ ಹುಡುಗನ ಜೊತೆ ಮಾತನಾಡ್ತಿರೋದನ್ನು ನೀವು ಕಾಣ್ಬಹುದು.
ಮಂಗಳವಾರ, ಅರುಣ್ ಜೇಟ್ಲಿ ಕ್ರೀಡಾಂಗಣ (Arun Jaitley Stadium)ದಲ್ಲಿ ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಗೆಳೆಯ ಶಹವೇಜ್ ಅವರನ್ನು ಭೇಟಿಯಾದರು. ಶಹವೇಜ್ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಜೂನಿಯರ್ ಕ್ರಿಕೆಟ್ ಆಡಿದ್ದಾರೆ. ಈ ಸಂದರ್ಭದಲ್ಲಿ, ಶಹವೇಜ್ ಮಗ ಕಬೀರ್ ಜೊತೆ ಕೊಹ್ಲಿ ಮಾತನಾಡಿದ್ದಾರೆ. ಕಬೀರ್ ಗೆ ಕೊಹ್ಲಿ ನೀಡಿದ ಸಲಹೆ ವಿಡಿಯೋ ಇದಾಗಿದೆ. ಕಬೀರ್ ಪ್ರಶ್ನೆಗೆ ಕೊಹ್ಲಿ ಉತ್ತರ ನೀಡ್ತಿದ್ದಾರೆ.
ದಿಲ್ಲಿ ಟೀಂನಲ್ಲೀಗ ಕೊಹ್ಲಿಯದ್ದೇ ಹವಾ! 12 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವಾಡಲಿರುವ ವಿರಾಟ್
ಮುಫದ್ದಲ್ ವೊಹ್ರಾ (Mufaddal Vohra) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಬೀರ್, ಇಂಡಿಯನ್ ಟೀಂಗೆ ಆಯ್ಕೆ ಆಗ್ಬೇಕು ಅಂದ್ರೆ ಏನು ಮಾಡ್ಬೇಕು ಎಂದು ಕಬೀರ್ ಕೇಳಿದ್ದಾನೆ. ಇದಕ್ಕೆ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡ್ಬೇಕು. ಕಠಿಣ ಅಭ್ಯಾಸ ಮಾಡ್ಬೇಕು. ಎಲ್ಲರೂ ಒಂದು ಗಂಟೆ ಅಭ್ಯಾಸ ಮಾಡಿದ್ರೆ ನೀವು ಎರಡು ಗಂಟೆ ಅಭ್ಯಾಸ ಮಾಡಬೇಕು. ಜನರು 50 ರನ್ ಗಳಿಸಿದ್ರೆ ನೀವು 100 ರನ್ ಗಳಿಸಬೇಕು. ಬೇರೆಯವರು 100 ರನ್ ಗಳಿಸಿದ್ರೆ ನೀವು 200 ರನ್ ಗಳಿಸಲು ಪ್ರಯತ್ನಿಸಬೇಕು. ಬೆಂಚ್ ಮಾರ್ಕ್ ಡಬಲ್ ಮಾಡ್ಬೇಕು. ಹಾರ್ಡ್ ವರ್ಕ್ ಜೊತೆಗೆ ಆಟವನ್ನು ಎಂಜಾಯ್ ಮಾಡ್ಬೇಕು ಎಂದು ಕೊಹ್ಲಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರು ಕೊಹ್ಲಿ ಈ ಮೋಟಿವೇಷನಲ್ ಸ್ಪೀಚ್ ಇಷ್ಟಪಟ್ಟಿದ್ದಾರೆ. ಕೊಹ್ಲಿ ಹಾಗೂ ಅವರ ಪವರ್ ಫುಲ್ ಮಾತಿಗೆ 100 ಅಂಕ ನೀಡೋದಾಗಿ ಬಳಕೆದಾರರು ಹೇಳಿದ್ದಾರೆ. ನೀವು ಪೋಷಕರನ್ನು ಅಭ್ಯಾಸಕ್ಕೆ ಕರೆದುಕೊಂಡು ಹೋಗ್ವಂತೆ ಹೇಳ್ಬೇಕೆ ಹೊರತು ಅವರು ನಿಮ್ಮನ್ನು ಒತ್ತಾಯ ಮಾಡುವಂತೆ ಮಾಡ್ಬಾರದು ಎಂಬ ಕೊಹ್ಲಿ ಮಾತನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಆಟದ ಜೊತೆ ಮಾತಿನ ಮೂಲಕವೂ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಮಗುವಿನ ಜೊತೆ ಕೊಹ್ಲಿ ನೋಡಲು ಖುಷಿಯಾಗ್ತಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಕೊಹ್ಲಿಯ ಆರ್‌ಸಿಬಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ಕುಲ್ದೀಪ್ ಯಾದವ್!
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಯುವ ಆಟಗಾರ ಆಯುಷ್ ಬದೋನಿ ದೆಹಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಡಿಡಿಸಿಎ ಕೊಹ್ಲಿಗೆ ದೆಹಲಿ ನಾಯಕತ್ವವನ್ನು ನೀಡಿದ್ದರೂ ವಿರಾಟ್ ಅದನ್ನು ನಿರಾಕರಿಸಿದರು. ಕೊಹ್ಲಿ ಈಗ ಆಯುಷ್ ಬಡೋನಿ ನಾಯಕತ್ವದಲ್ಲಿ ಆಡಲಿದ್ದಾರೆ. ವಿರಾಟ್ ಕೊನೆಯ ಬಾರಿ 2012 ರಲ್ಲಿ ದೆಹಲಿ ಪರ ರಣಜಿ ಪಂದ್ಯ ಆಡಿದ್ದರು. ಈಗ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನದ ನಂತರ, ವಿರಾಟ್ ಮತ್ತೊಮ್ಮೆ ರಣಜಿಯತ್ತ ಮುಖ ಮಾಡಿದ್ದಾರೆ. ರಣಜಿ ಪಂದ್ಯವನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
A beautiful little chat between Virat Kohli and a young kid. ❤️ pic.twitter.com/raeR7gUyiy
— Mufaddal Vohra (@mufaddal_vohra)