18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬರುವ ಮಾರ್ಚ್ 21ರಿಂದ ಆರಂಭವಾಗಲಿದೆ.
cricket-sports Jan 27 2025
Author: Naveen Kodase Image Credits:google
Kannada
ಡೆಲ್ಲಿ ಪ್ರತಿನಿಧಿಸಲಿರುವ ಕುಲ್ದೀಪ್
ಮುಂಬರುವ ಐಪಿಎಲ್‌ನಲ್ಲಿ ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕುಲ್ದೀಪ್‌ರನ್ನು ಡೆಲ್ಲಿ ರೀಟೈನ್ ಮಾಡಿಕೊಂಡಿತ್ತು.
Image credits: INSTA/kuldeep_18
Kannada
ಚಾಂಪಿಯನ್ಸ್ ಟ್ರೋಫಿಗೆ ರೆಡಿ
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಕುಲ್ದೀಪ್ ಯಾದವ್, ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಸಜ್ಜಾಗಿದ್ದಾರೆ.
Image credits: Getty
Kannada
ಕುಲ್ದೀಪ್ ವೈರಲ್ ಹೇಳಿಕೆ
ಇದೆಲ್ಲದರ ನಡುವೆ ವಿಡಿಯೋ ಕ್ಲಿಪ್‌ನಲ್ಲಿ ಕುಲ್ದೀಪ್ ಯಾದವ್ ಆಡಿರುವ ಒಂದು ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕುಲ್ದೀಪ್ ಆರ್‌ಸಿಬಿಯನ್ನು ಟ್ರೋಲ್ ಮಾಡಿದ್ದಾರೆ.
Image credits: INSTA/kuldeep_18
Kannada
ಆರ್‌ಸಿಬಿ ಫ್ಯಾನ್
ಟಾಕ್ ಫುಟ್‌ಬಾಲ್ ಎಚ್‌ಡಿ ಪಾಡ್‌ಕಾಸ್ಟ್‌ನ ಚಾಟ್ ಸೆಕ್ಷನ್‌ನಲ್ಲಿ ಒಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ ಅಚ್ಚರಿಯ ಪ್ರಶ್ನೆ ಕೇಳಿದ್ದಾನೆ.
Image credits: google
Kannada
ಆರ್‌ಸಿಬಿಗೆ ಆಹ್ವಾನ
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹೆಸರಿನ ಈ ಫ್ಯಾನ್, ಕುಲ್ದೀಪ್ ನೀವು ಆರ್‌ಸಿಬಿಗೆ ಬಂದುಬಿಡಿ. ಯಾಕೆಂದರೆ ನಮ್ಮ ತಂಡಕ್ಕೆ ಗೋಲ್ ಕೀಪರ್ ಅಗತ್ಯವಿದೆ ಎಂದು ಕೇಳಿದ್ದಾರೆ.
Image credits: Getty
Kannada
ಟ್ರೋಲ್ ಮಾಡಿದ ಕುಲ್ದೀಪ್
ಇದಕ್ಕೆ ಪ್ರತಿಕ್ರಿಯಿಸಿದ ಕುಲ್ದೀಪ್, 'ನಿಮಗೆ ಗೋಲ್ ಕೀಪರ್ ಅಲ್ಲ ಟ್ರೋಫಿ ಅಗತ್ಯವಿದೆ' ಎಂದು ವಿರಾಟ್ ಕೊಹ್ಲಿಯ ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದಾರೆ.
Image credits: Getty
Kannada
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಕುಲ್ದೀಪ್ ಯಾದವ್ ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
Image credits: Getty
Kannada
ಮೂರು ಬಾರಿ ಫೈನಲ್
ಆರ್‌ಸಿಬಿ ತಂಡವು ಕಳೆದ 18 ಆವೃತ್ತಿಗಳಲ್ಲಿ ಕೇವಲ ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಇಲ್ಲಿಯವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.