2024ರ ಸರ್ ಗ್ಯಾರಿ ಸೋಬರ್ಸ್ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾರತೀಯ ವೇಗಿ ಜಸ್‌ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ. ಟೆಸ್ಟ್ ಮತ್ತು ಟಿ20 ಮಾದರಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ದುಬೈ: 2024ರ ಸರ್ ಗ್ಯಾರಿ ಸೋಬರ್ಸ್ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾರತೀಯ ವೇಗಿ ಜಸ್‌ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಟೆಸ್ಟ್ ಟಿ20 ಮಾದರಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಬುಮ್ರಾ ತಮ್ಮ ಜೊತೆ ರೇಸ್‌ನಲ್ಲಿದ್ದ ಮೂವರು ಕ್ರಿಕೆಟಿಗರನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದಾರೆ.
2024ರಲ್ಲಿ 13 ಟೆಸ್ಟ್ ಆಡಿದ ಬುಮ್ರಾ ಬರೋಬ್ಬರಿ 71 ವಿಕೆಟ್ ಕಬಳಿಸಿದ್ದರು. ಜೊತೆಗೆ 8 ಟಿ20 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದರು. ಈ ಎಂಟೂ ಪಂದ್ಯಗಳು ಟಿ20 ವಿಶ್ವಕಪ್ ಪಂದ್ಯಗಳು, ಭಾರತ ಚಾಂಪಿಯನ್ ಆಗುವಲ್ಲಿ ಬುಮ್ರಾ ನಿರ್ಣಾಯಕ ಪಾತ್ರ ವಹಿಸಿದ್ದರು. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿ ದಾಖಲೆ ಸಹ ಬರೆದಿದ್ದರು.
ಐಪಿಎಲ್ ಆರಂಭದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಅರುಣ್ ಧುಮಾಲ್
ಕಳೆದ ವರ್ಷ ಭಾರತ ತಂಡ ಕೇವಲ 3 ಏಕದಿನ ಪಂದ್ಯ ಗಳನ್ನು ಆಡಿತು. ಶ್ರೀಲಂಕಾ ಪ್ರವಾಸ ಕೈಗೊಂಡು ಅಲ್ಲಿ ಸರಣಿ ಸೋತಿತ್ತು. ಆ ಸರಣಿಯಲ್ಲಿ ಬೂಮ್ರಾ ಆಡಿರಲಿಲ್ಲ. ಭಾರತ ಒಂದಷ್ಟು ಏಕದಿನ ಸರಣಿಗಳನ್ನು ಆಡಿ, ಅದರಲ್ಲಿ ಬುಮ್ರಾ ಸಹ ಪಾಲ್ಗೊಂಡಿದ್ದರೆ ಒಂದು ವರ್ಷದಲ್ಲಿ 100 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸುವ ಅವಕಾಶ ಸಿಗುತ್ತಿತ್ತು.
An unforgettable year for the irrepressible Jasprit Bumrah, who claims the Sir Garfield Sobers Trophy for 2024 ICC Men's Cricketer of the Year 🙌 pic.twitter.com/zxfRwuJeRy
— ICC (@ICC)ಭಾರತದ ಮೊದಲ ವೇಗಿ: ಐಸಿಸಿ ವರ್ಷದ ಕ್ರಿಕೆಟರ್ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ವೇಗಿ ಹಾಗೂ ಒಟ್ಟಾರೆ 5ನೇ ಆಟಗಾರ, ಬುಮ್ರಾಗೂ ಮೊದಲು 2004ರಲ್ಲಿ ರಾಹುಲ್ ದ್ರಾವಿಡ್, 2010ರಲ್ಲಿ ಸಚಿನ್ ತೆಂಡುಲ್ಕರ್, 2016ರಲ್ಲಿ ಆರ್.ಅಶ್ವಿನ್, 2017 ಹಾಗೂ 2018ರಲ್ಲಿ ವಿರಾಟ್ ಕೊಹ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು, ವರ್ಷದ ಶ್ರೇಷ್ಠ ಕ್ರಿಕೆಟಿಗ ಗೌರವ ಪಡೆದ ವಿಶ್ವದ 4ನೇ ವೇಗಿ ಎನ್ನುವ ಹಿರಿಮೆಗೂ ಬುಮ್ರಾ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್, ಪ್ಯಾಟ್ ಕಮಿನ್ಸ್, ಪಾಕಿಸ್ತಾನದ ಶಾಹೀನ್ ಅಫ್ರಿದಿಗೆ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ದೊರೆತಿತ್ತು.
ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧರಿಸುವ ಪವರ್‌ಫುಲ್ ವ್ಯಕ್ತಿ ಇವರೇ ನೋಡಿ!
ಇದೇ ವೇಳೆ, ಜಸ್‌ಪ್ರೀತ್ ಬುಮ್ರಾ 2024 ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ. ಅಲ್ಲದೇ, ವರ್ಷದ ಟೆಸ್ಟ್, ಟಿ20 ತಂಡಗಳಲ್ಲೂ ಸ್ಥಾನ ಪಡೆದಿದ್ದಾರೆ. ಬುಮ್ರಾ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ. ಆದರೆ ಬೆನ್ನು ನೋವಿನಿಂದ ಬಳಲುತ್ತಿರುವ ಅವರು, ಟೂರ್ನಿ ಯಿಂದ ಹೊರಬೀಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಬುಮ್ರಾ ತಜ್ಞವೈದ್ಯರ ಬಳಿ ಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳಬಹುದು ಎನ್ನಲಾಗುತ್ತಿದೆ.
ಕೆರ್ರ್‌ಗೆ ಪ್ರಶಸ್ತಿ: ವರ್ಷದ ಶ್ರೇಷ್ಠ ಮಹಿಳಾ ಕ್ರಿಕೆಟರ್ ಗೌರವ ನ್ಯೂಜಿಲೆಂಡ್‌ನ ತಾರಾ ಆಲ್ರೌಂಡರ್ ಅಮೆಲಿಯಾ ಕೆರ್‌ಗೆ ದೊರೆತಿದೆ.