ರಣಜಿ ಟ್ರೋಫಿ ಸೆಮಿಫೈನಲ್‌: ಮುಂಬೈ, ಮಧ್ಯಪ್ರದೇಶ ಮೇಲುಗೈ

By Naveen Kodase  |  First Published Mar 3, 2024, 9:48 AM IST

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಇಳಿದ ತಮಿಳುನಾಡು, ಮುಂಬೈನ ಮೊನಚಾದ ಬೌಲಿಂಗ್‌ ದಾಳಿ ಎದುರು ತತ್ತರಿಸಿತು. ಸಾಯಿ ಸುದರ್ಶನ್‌ (0), ಎನ್‌.ಜಗದೀಶನ್‌ (4), ಸಾಯಿ ಕಿಶೋರ್‌ (1), ಬಾಬಾ ಇಂದ್ರಜಿತ್‌ (11) ವೈಫಲ್ಯದಿಂದಾಗಿ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು.


ಮುಂಬೈ/ನಾಗ್ಪುರ(ಮಾ.03): ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಮುಂಬೈ, ವಿದರ್ಭ ವಿರುದ್ಧ ಮಧ್ಯಪ್ರದೇಶ ತಂಡಗಳು ಮೇಲುಗೈ ಸಾಧಿಸಿವೆ. ಮೊದಲ ದಿನವೇ ಎದುರಾಳಿ ಪಡೆಯನ್ನು ಆಲೌಟ್‌ ಮಾಡಿದ ಮುಂಬೈ ಹಾಗೂ ಮಧ್ಯಪ್ರದೇಶ, ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದು ದೊಡ್ಡ ಮುನ್ನಡೆ ಪಡೆಯುವ ನಿರೀಕ್ಷೆ ಹೊಂದಿವೆ.

ತ.ನಾಡು ತತ್ತರ: 

Latest Videos

undefined

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಇಳಿದ ತಮಿಳುನಾಡು, ಮುಂಬೈನ ಮೊನಚಾದ ಬೌಲಿಂಗ್‌ ದಾಳಿ ಎದುರು ತತ್ತರಿಸಿತು. ಸಾಯಿ ಸುದರ್ಶನ್‌ (0), ಎನ್‌.ಜಗದೀಶನ್‌ (4), ಸಾಯಿ ಕಿಶೋರ್‌ (1), ಬಾಬಾ ಇಂದ್ರಜಿತ್‌ (11) ವೈಫಲ್ಯದಿಂದಾಗಿ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು.

WPL 2024: ಆರ್‌ಸಿಬಿಗೆ ಸತತ 2ನೇ ಸೋಲಿನ ಕಹಿ!

ವಿಜಯ್‌ ಶಂಕರ್‌ (44), ವಾಷಿಂಗ್ಟನ್‌ ಸುಂದರ್‌ (43)ರ ಹೋರಾಟ ತಂಡ 100 ರನ್‌ ದಾಟಲು ಕಾರಣವಾಯಿತು. 64.1 ಓವರಲ್ಲಿ ತಮಿಳುನಾಡು 146 ರನ್‌ಗೆ ಆಲೌಟ್‌ ಆಯಿತು. ತುಷಾರ್‌ 3, ತನುಷ್‌, ಮುಶೀರ್‌ ಹಾಗೂ ಶಾರ್ದೂಲ್‌ ತಲಾ 2 ವಿಕೆಟ್‌ ಕಿತ್ತರು.ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಮುಂಬೈ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 45 ರನ್‌ ಗಳಿಸಿದ್ದು, ಇನ್ನೂ 101 ರನ್‌ ಹಿಂದಿದೆ.

ಆವೇಶ್‌ ಮಾರಕ ದಾಳಿ:

ವೇಗಿ ಆವೇಶ್‌ ಖಾನ್‌ರ ಮಾರಕ ದಾಳಿಗೆ ಸಿಲುಕಿದ ವಿದರ್ಭ 170 ರನ್‌ಗೆ ಆಲೌಟ್‌ ಆಯಿತು. ಕರುಣ್‌ ನಾಯರ್‌ 63, ಅಥರ್ವ ತೈಡೆ 39 ರನ್‌ ಗಳಿಸಿದರು. ಆವೇಶ್‌ 49 ರನ್‌ಗೆ 4 ವಿಕೆಟ್‌ ಕಬಳಿಸಿದರೆ, ವೆಂಕಟೇಶ್‌ ಅಯ್ಯರ್‌ ಹಾಗೂ ಕುಲ್ವಂತ್‌ ಕೇಜ್ರೋಲಿಯಾ ತಲಾ 2 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಮಧ್ಯಪ್ರದೇಶ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 47 ರನ್‌ ಗಳಿಸಿದೆ.

ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಹಿಡಿಶಾಪ ಹಾಕಿದ ಫ್ಯಾನ್ಸ್

ಐಪಿಎಲ್‌ನಲ್ಲಿ ರಿಷಭ್ ಪಂತ್ ಆಡುವುದು ಖಚಿತ..!

ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಿಷಭ್ ಪಂತ್ ಮಾರ್ಚ್ 05ರಂದು ಡೆಲ್ಲಿ ಕ್ಯಾಪಿಟಲ್ಸ್ ಶಿಬಿರಕ್ಕೆ ಹಾಜರಾಗಲಿದ್ದಾರೆ ಎಂದು ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಐಪಿಎಲ್‌ನಲ್ಲಿ ಪಂತ್ ಆಡುವುದನ್ನು ಖಚಿತಪಡಿಸಿದ್ದಾರೆ.

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಕಾಯುತ್ತಿರುವ ರಿಷಭ್ ಪಂತ್ ಮಾರ್ಚ್ 05ರಂದು ಮಹತ್ವದ ಮೈಲಿಗಲ್ಲನ್ನು ದಾಟಲಿದ್ದು, ಆಟವಾಡಲು ಸಂಪೂರ್ಣ ಫಿಟ್ ಆಗಿದ್ದಾರೆಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಘೋಷಿಸಲಿದೆ. ಎನ್‌ಸಿಎ ಒಪ್ಪಿಗೆ ನೀಡಿದ ತಕ್ಷಣ ರಿಷಭ್ ಪಂತ್ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ.
 

click me!