ರೈಲ್ವೇ ಟಿಕೆಟ್ ಕಲೆಕ್ಟರ್‌ಗೆ ವಿಕೆಟ್ ಒಪ್ಪಿಸಿ ವಿರಾಟ್ ಕೊಹ್ಲಿ ನಿರಾಸೆ!

Published : Feb 01, 2025, 10:22 AM IST
ರೈಲ್ವೇ ಟಿಕೆಟ್ ಕಲೆಕ್ಟರ್‌ಗೆ ವಿಕೆಟ್ ಒಪ್ಪಿಸಿ ವಿರಾಟ್ ಕೊಹ್ಲಿ ನಿರಾಸೆ!

ಸಾರಾಂಶ

ದೆಹಲಿಯಲ್ಲಿ ರೈಲ್ವೆ ವಿರುದ್ಧ ಕೇವಲ 6 ರನ್ ಗಳಿಸಿ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಟಿಕೆಟ್ ಕಲೆಕ್ಟರ್ ಹಿಮಾನ್ಸು ಸಾಂಗ್ವಾನ್ ಬೌಲಿಂಗ್‌ನಲ್ಲಿ ಔಟಾದರು. ದೆಹಲಿ ತಂಡ 93 ರನ್ ಮುನ್ನಡೆ ಸಾಧಿಸಿದೆ. ಬುಮ್ರಾ ಮತ್ತು ಸ್ಮೃತಿ ಮಂಧನಾ ಬಿಸಿಸಿಐ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಚಿನ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಲಿದೆ.

ನವದೆಹಲಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಸೊಬಗನ್ನು ಕಣ್ಣುಂಬಿಕೊಳ್ಳಲು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಯಿತು. ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ 4ನೇ ಕ್ರಮಾಂಕದಲ್ಲಿ ಕೊಹ್ಲಿ ಕ್ರೀಸ್ ಗಿಳಿಯುತ್ತಿದ್ದಂತೆ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಆದರೆ ಕೊಹ್ಲಿಯ ಇನ್ನಿಂಗ್ಸ್ 15 ಎಸೆತದಲ್ಲಿ ಕೊನೆಗೊಂಡಿತು. ಕೇವಲ 6 ರನ್ ಗಳಿಸಿ, ವೇಗಿ ಹಿಮಾನ್ಯು ಸಾಂಗ್ವಾನ್‌ ಬೌಲಿಂಗ್‌ನಲ್ಲಿ ಕೊಹ್ಲಿ ಬೌಲ್ಡ್ ಆದರು. ಹಿಮಾನ್ನು ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಡೆಲ್ಲಿ ಹಾಗೂ ರೈಲ್ವೇಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಗಳಿಸಿ ಸರ್ವಪತನ ಕಂಡಿದೆ. ಇನ್ನು ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಡೆಲ್ಲಿ ತಂಡವು 
ನಾಯಕ ಆಯುಷ್ ಬದೋನಿ (99) ರ ಆಕರ್ಷಕ ಆಟದ ನೆರವಿನಿಂದ ದೆಹಲಿ 2ನೇ ದಿನಕ್ಕೆ 7 ವಿಕೆಟ್‌ಗೆ 334 ರನ್ ಗಳಿಸಿ 93 ರನ್ ಮುನ್ನಡೆ ಪಡೆದಿದೆ.

ದೂರದೂರುಗಳಿಂದ ಬಂದ ಅಭಿಮಾನಿಗಳು!

ವಿರಾಟ್ ಕೊಹ್ಲಿ ಆಟ ನೋಡಲು ದಿಲ್ಲಿ ಮಾತ್ರ ವಲ್ಲ, ಹರ್ಯಾಣ, ಉ.ಪ್ರದೇಶ, ರಾಜ ಸ್ಥಾನ, ಪಂಜಾಬ್ ರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆ 5 ರ ರಿಂದಲೇ ಕ್ರೀಡಾಂಗಣದ ಮುಂದೆ ಅಭಿಮಾನಿಗಳು ನೆರೆದಿದ್ದರು. ಅನೇಕರು ರಜೆ ಹಾಕಿ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

ಬುಮ್ರಾ, ಸ್ಮೃತಿಗೆ ಬಿಸಿಸಿಐ ಪ್ರಶಸ್ತಿ

ಮುಂಬೈ: ಭಾರತದ ತಾರಾ ವೇಗಿ ಜಸ್ ಪ್ರೀತ್‌ ಬುಮ್ರಾ ಹಾಗೂ ತಾರಾ ಬ್ಯಾಟ‌ರ್ ಸ್ಮೃತಿ ಮಂಧನಾ ಬಿಸಿಸಿಐ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2023-24ರ ಪಾಲಿ ಉಮ್ರಿಗ‌ರ್ ವರ್ಷದ ಶ್ರೇಷ್ಠ ಪುರುಷ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾದರೆ, ಸ್ಮೃತಿ ಮಂಧನಾ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆಯಲಿದ್ದಾರೆ. ಶನಿವಾರ ಇಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ನಡೆಯಲಿದೆ. 

ಇದೇ ವೇಳೆ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಸಿ.ಕೆ.ನಾಯ್ಡು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡುವುದಾಗಿ ಬಿಸಿಸಿಐ ಘೋಷಿಸಿದೆ. ಇನ್ನು, ಇತ್ತೀಚೆಗೆ ನಿವೃತ್ತಿಯಾದ ಆರ್.ಅಶ್ವಿನ್‌ಗೆ ವಿಶೇಷ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ರವಿಚಂದ್ರನ್ ಅಶ್ವಿನ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!