ರಣಜಿ ಕ್ವಾರ್ಟರ್‌ ಫೈನಲ್‌: ಮುಂಬೈಗೆ ಹಿನ್ನಡೆ ಭೀತಿ!

Published : Feb 10, 2025, 09:53 AM IST
ರಣಜಿ ಕ್ವಾರ್ಟರ್‌ ಫೈನಲ್‌: ಮುಂಬೈಗೆ ಹಿನ್ನಡೆ ಭೀತಿ!

ಸಾರಾಂಶ

ರಣಜಿ ಕ್ವಾರ್ಟರ್‌ಗಳಲ್ಲಿ ಮುಂಬೈ ಹರ್ಯಾಣ ವಿರುದ್ಧ, ಕೇರಳ ಜಮ್ಮುವಿನ ವಿರುದ್ಧ ಹಿನ್ನಡೆಯಲ್ಲಿವೆ. ಗುಜರಾತ್ ಸೌರಾಷ್ಟ್ರ ವಿರುದ್ಧ ಮುನ್ನಡೆ ಸಾಧಿಸಿದೆ. ವಿದರ್ಭದ 353 ರನ್‌ಗಳಿಗೆ ಉತ್ತರವಾಗಿ ತಮಿಳುನಾಡು 194 ರನ್‌ಗಳ ಹಿನ್ನಡೆಯಲ್ಲಿದೆ. ಕರುಣ್ ನಾಯರ್ 122 ರನ್ ಗಳಿಸಿದರು. ಅಂಕಿತ್ ಕುಮಾರ್ 136 ರನ್ ಗಳಿಸಿದರು.

ಕೋಲ್ಕತಾ: ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ತಂಡ ಹರ್ಯಾಣ ವಿರುದ್ಧ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. ತಮಿಳುನಾಡು, ಕೇರಳ ಕೂಡಾ ಮುನ್ನಡೆ ಸಾಧಿಸಲು ಹೆಣಗಾಡುತ್ತಿವೆ.

ಕೋಲ್ಕತಾದಲ್ಲಿ ನಡೆಯುತ್ತಿರುವ ಕ್ವಾರ್ಟರ್‌ನಲ್ಲಿ ಹರ್ಯಾಣ ವಿರುದ್ಧ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 315 ರನ್‌ ಕಲೆಹಾಕಿತು. ತನುಶ್‌ ಕೋಟ್ಯನ್(97) ಶತಕದ ಅಂಚಿನಲ್ಲಿ ಎಡವಿದರು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಹರ್ಯಾಣ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 263 ರನ್‌ ಗಳಿಸಿದ್ದು, 52 ರನ್‌ ಹಿನ್ನಡೆಯಲ್ಲಿದೆ. ನಾಯಕ ಅಂಕಿತ್‌ ಕುಮಾರ್‌ 136 ರನ್‌ ಸಿಡಿಸಿದರು.

ಚಾಂಪಿಯನ್ಸ್‌ ಟ್ರೋಫಿ ಗೆಲ್ಲೋದಲ್ಲ ಭಾರತ ಸೋಲೋದನ್ನು ಎದುರು ನೋಡುತ್ತಿರುವ ಪಾಕ್! ಪ್ರಧಾನಿ ಮಾತು ವೈರಲ್

ಜಮ್ಮು ಮೇಲುಗೈ: ಪುಣೆಯಲ್ಲಿ ನಡೆಯುತ್ತಿರುವ ಕೇರಳ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಮೇಲುಗೈ ಸಾಧಿಸಿದೆ. ಜಮ್ಮು 280ಕ್ಕೆ ಆಲೌಟಾಗಿದ್ದರೆ, ಕೇರಳ 2ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 200 ರನ್‌ ಗಳಿಸಿದ್ದು, ಇನ್ನೂ 80 ರನ್‌ ಹಿನ್ನಡೆಯಲ್ಲಿದೆ.

ಗುಜರಾತ್‌ಗೆ ಲೀಡ್‌: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಗುಜರಾತ್‌ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಸೌರಾಷ್ಟ್ರ 216ಕ್ಕೆ ಆಲೌಟಾಯಿತು. ಗುಜರಾತ್‌ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 260 ರನ್‌ ಗಳಿಸಿದ್ದು, 44 ರನ್‌ ಮುನ್ನಡೆನಲ್ಲಿದೆ.

ರೋಹಿತ್ ಶರ್ಮಾ ಗರ್ಜನೆಗೆ ಇಂಗ್ಲೆಂಡ್ ಢಮಾರ್! ಏಕದಿನ ಸರಣಿ ಗೆದ್ದ ಭಾರತ

ಕರುಣ್‌ 122 ರನ್: ವಿದರ್ಭ ಪ್ರಾಬಲ್ಯ

ತಮಿಳುನಾಡು ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ ಕ್ರಿಕೆಟ್ ತಂಡ ಪ್ರಾಬಲ್ಯ ಸಾಧಿಸಿದೆ. ಕರುಣ್‌ ನಾಯರ್‌ 122 ರನ್‌ ಗಳಿಸಿ ಔಟಾದರೂ, ವಿದರ್ಭ 353 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ತಮಿಳುನಾಡು 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 159 ರನ್‌ ಗಳಿಸಿದ್ದು, ಇನ್ನೂ 194 ರನ್‌ ಹಿನ್ನಡೆಯಲ್ಲಿದೆ.

14 ವರ್ಷದ ಬಳಿಕ ಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ

ಗಾಲೆ: ಆಸ್ಟ್ರೇಲಿಯಾ ತಂಡ ಶ್ರೀಲಂಕಾದಲ್ಲಿ 14 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಭಾನುವಾರ ಮುಕ್ತಾಯಗೊಂಡ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಜಯಭೇರಿ ಬಾರಿಸಿತು. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈ ವಶಪಡಿಸಿಕೊಂಡಿತು. ಈ ಹಿಂದೆ 2011ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸೀಸ್ ತಂಡ ಲಂಕಾದಲ್ಲಿ ಸರಣಿ ಜಯಿಸಿತ್ತು. ಬಳಿಕ 2016ರಲ್ಲಿ 0-3 ಕ್ಲೀನ್‌ ಸ್ವೀಪ್ ಅನುಭವಿಸಿದ್ದರೆ, 2022ರ ಸರಣಿ 1-1 ಡ್ರಾಗೊಂಡಿತ್ತು. 

ಶ್ರೀಲಂಕಾದ 257 ರನ್‌ಗೆ ಉತ್ತರವಾಗಿ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 414ಕ್ಕೆ ಆಲೌಟಾಗಿ, 157 ರನ್ ಮುನ್ನಡೆ ಪಡೆದಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಲಂಕಾ 231ಕ್ಕೆ ಆಲೌಟಾಗಿ, ಆಸೀಸ್‌ 75 ರನ್ ಗುರಿ ನಿಗದಿಪಡಿಸಿತು. ಸುಲಭ ಮೊತ್ತವನ್ನು ಆಸೀಸ್ 17.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಅಲೆಕ್ಸ್ ಕೇರಿ ಪಂದ್ಯಶ್ರೇಷ್ಠ, ಸ್ಟೀವ್ ಸ್ಮಿತ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌