ಕರ್ನಾಟಕ-ಉತ್ತರ ಪ್ರದೇಶ ನಡುವಿನ ರಣಜಿ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡವು 3 ಅಂಕ ತನ್ನದಾಗಿಸಿಕೊಂಡಿದೆ.
ಲಖನೌ: ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ನಾಕೌಟ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಶನಿವಾರ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿದ ರಾಜ್ಯ ತಂಡ ಒಟ್ಟು 12 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ. ತಂಡ ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 4 ಡ್ರಾ ಕಂಡಿದ್ದು, ಕೊನೆ 2 ಪಂದ್ಯಗಳಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಕ್ವಾರ್ಟರ್ ಫೈನಲ್‌ಗೇರಲಿದೆ.
undefined
ಮೊದಲ ಇನ್ನಿಂಗ್ಸಲ್ಲಿ 89 ರನ್‌ಗೆ ಆಲೌಟ್ ಆಗಿದ್ದ ಉ.ಪ್ರದೇಶ, 2ನೇ ಇನ್ನಿಂಗ್ಸಲ್ಲಿ 446 ರನ್ ಕಲೆಹಾಕಿತು. ಆದಿತ್ಯ ಶರ್ಮಾ 41, ಸೌರಭ್ ಕುಮಾರ್ 54 ರನ್ ಗಳಿಸಿ ರಾಜ್ಯಕ್ಕೆ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
Good News: ಎರಡನೇ ಮಗುವಿಗೆ ತಂದೆಯಾದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ!
ಗೆಲ್ಲಲು 261 ರನ್ ಗುರಿ ಬೆನ್ನತ್ತಿದ ಕರ್ನಾಟಕ 5 ವಿಕೆಟ್‌ಗೆ 178 ರನ್ ಗಳಿಸಿದ್ದಾಗ ಅಂಪೈರ್‌ಗಳು ಪಂದ್ಯ ಡ್ರಾ ಎಂದು ಘೋಷಿಸಿದರು. ನಿಕಿನ್ ಜೋಸ್ 48, ಮಯಾಂಕ್ ಅಗರ್‌ವಾಲ್ 37, ಮನೀಶ್ ಪಾಂಡೆ ಔಟಾಗದೆ 36, ಅಭಿನವ್ ಮನೋಹರ್ ಔಟಾಗದೆ 31 ರನ್ ಗಳಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 275ಕ್ಕೆ ಆಲೌಟಾಗಿ, 186 ರನ್ ಮುನ್ನಡೆ ಪಡೆದಿತ್ತು.
ರಣಜಿಗೆ ಇನ್ನು 2 ತಿಂಗಳು ಬಿಡುವು
2024-25ರ ರಣಜಿ ಟ್ರೋಫಿ ಮೊದಲ 5 ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನು 2 ತಿಂಗಳು ಟೂರ್ನಿಗೆ ಬಿಡುವು. ಮುಂದಿನ ವಾರದಿಂದ ರಾಜ್ಯ ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆಡಲಿದ್ದು, ಬಳಿಕ ಜ.23ರಿಂದ ಮತ್ತೆ ರಣಜಿ ಪಂದ್ಯಗಳು ಶುರುವಾಗಲಿವೆ.
ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಸ್ಪೋಟಕ ಸೆಂಚುರಿ: ಭಾರತದ ಮುಡಿಗೆ ಟಿ20 ಸರಣಿ
ಸಿ.ಕೆ.ನಾಯ್ಡು: ಚಂಡೀಗಢ ಮೇಲೆ ಕರ್ನಾಟಕ ಪ್ರಾಬಲ್ಯ
ಚಂಡೀಗಢ: ಸಿ.ಕೆ.ನಾಯ್ಡು ಟ್ರೋಫಿ ಅಂಡರ್-23 ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಚಂಡೀಗಢ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ಪ್ರಾಬಲ್ಯ ಸಾಧಿಸಿದೆ. ಪ್ರಖರ್ ಚತುರ್ವೇದಿ 220 ರನ್ ಕೊಡುಗೆ ನೆರವಿನಿಂದ ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 429 ರನ್ ಕಲೆಹಾಕಿತು.
ಧ್ರುವ್ ಪ್ರಭಾಕರ್ 56 ರನ್ ಗಳಿಸಿದರು. ತಂಡದ ಕೊನೆ 6 ವಿಕೆಟ್ 36 ರನ್ ಅಂತರದಲ್ಲಿ ಉರುಳಿತು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಚಂಡೀಗಢ ತಂಡ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 211 ರನ್ ಗಳಿಸಿದ್ದು, ಇನ್ನೂ 218 ರನ್ ಹಿನ್ನಡೆಯಲ್ಲಿದೆ. ಮೊದಲ ವಿಕೆಟ್‌ಗೆ ದೀಪೇಂದರ್ ಖುಷ್(83) ಹಾಗೂ ದೇವಾಂಗ್ ಕೌಶಿಕ್(58) 102 ರನ್ ಜೊತೆಯಾಟವಾಡಿದರೂ ಬಳಿಕ ತಂಡ ಕುಸಿತಕ್ಕೊಳಗಾಯಿತು. ರಾಜ್ಯದ ಪರ ಪರಾಸ್ ಆರ್ಯ, ಶಶಿಕುಮಾರ್ ತಲಾ 4 ವಿಕೆಟ್ ಪಡೆದಿದ್ದಾರೆ.