
ಬೆಂಗಳೂರು: ರಣಜಿ ಟ್ರೋಫಿಯ ಗುಂಪು ಹಂತದಲ್ಲೇ ಹೊರಬಿದ್ದಿರುವ ಕರ್ನಾಟಕ, ಹರ್ಯಾಣ ವಿರುದ್ಧ ಗೆಲುವು ಸಾಧಿಸಿ ಋತುವನ್ನು ಧನಾತ್ಮಕವಾಗಿ ಮುಕ್ತಾಯಗೊಳಿಸುವ ಅವಕಾಶವನ್ನೂ ಕೈಚೆಲ್ಲುವಂತೆ ಕಾಣುತ್ತಿದೆ. ಮೊದಲ ಇನ್ನಿಂಗ್ಸಲ್ಲಿ 304 ರನ್‌ಗೆ ಆಲೌಟ್ ಆಗಿದ್ದ ಕರ್ನಾಟಕ, ಹರ್ಯಾಣಕ್ಕೆ 450 ರನ್‌ಗಳ ಬೃಹತ್ ಮೊತ್ತ ಬಿಟ್ಟುಕೊಟ್ಟಿತು. ನಿಶಾಂತ್ ಸಿಂಧು ಆಕರ್ಷಕ 165 ರನ್ ಸಿಡಿಸಿ ತಂಡಕಕೆ 146 ರನ್‌ಗಳ ಮುನ್ನಡೆ ಒದಗಿಸಿದರು.
2ನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ, 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 108 ರನ್ ಗಳಿಸಿದ್ದು, ಇನ್ನೂ 38 ರನ್ ಹಿನ್ನಡೆಯಲ್ಲಿದೆ. ಕೆ.ಎಲ್.ರಾಹುಲ್ 43 ರನ್ ಗಳಿಸಿ ಔಟಾದರೆ, ದೇವ್‌ದತ್ ಪಡಿಕ್ಕಲ್ 41 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಭಾನುವಾರ ಕೊನೆಯ ದಿನವಾಗಿದ್ದು, ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚು.
ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದೇ ಇದ್ರೂ ಪಂದ್ಯ ಗೆಲ್ಲಿಸಿದ ರಾಣಾ!
ಕ್ರಿಕೆಟ್‌ಗೆ ವೃದ್ದಿಮಾನ್ ಸಾಹ ಗುಡ್‌ಬೈ
ಕೋಲ್ಕತಾ: ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಶನಿವಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಳ ಪರ ಕೊನೆ ಬಾರಿಗೆ ಆಡಿದರು.
'ನಾನಂತೂ ಒಪ್ಪಲ್ಲ'; ಟಿ20 ಸರಣಿ ಸೋಲಿನ ಬೆನ್ನಲ್ಲೇ ಭಾರತದ ಎದುರು ತಿರುಗಿ ಬಿದ್ದ ಬಟ್ಲರ್!
40 ವರ್ಷದ ಸಾಹ 2010ರಲ್ಲಿ ಅಂ.ರಾ.ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ಭಾರತ ಪರ 40 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಬಂಗಾಳ ಹಾಗೂ ತ್ರಿಪುರಾ ತಂಡಗಳನ್ನು ಪ್ರತಿನಿಧಿಸಿದ ಸಾಹ, ಒಟ್ಟು 142 ಪ್ರಥಮ ದರ್ಜೆ ಹಾಗೂ 116 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ.
ಭದ್ರತಾ ಲೋಪ: ಕೊಹ್ಲಿ ಬಳಿ ನುಗ್ಗಿದ 3 ಅಭಿಮಾನಿಗಳು!
ನವದೆಹಲಿ: ಶನಿವಾರ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ಲೋಪ ಕಂಡುಬಂತು. 3 ಹುಚ್ಚು ಅಭಿಮಾನಿಗಳು 20ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಬಳಿ ಓಡಿದರು. ಇದರಿಂದ ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತಾದರೂ, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಸಿಬ್ಬಂದಿ ತಡೆದರು.
ಮೊದಲೆರಡು ದಿನ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಶನಿವಾರವೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಆದರೆ ದೆಹಲಿ ತಂಡ ರೈಲ್ವೆಸನ್ನು 2ನೇ ಇನ್ನಿಂಗ್ನಲ್ಲಿ 114 ರನ್‌ಗೆ ಕಟ್ಟಿಹಾಕಿ, ಇನ್ನಿಂಗ್ಸ್ ಹಾಗೂ 19 ರನ್‌ಗಳಿಂದ ಜಯಿಸಿತು. ಹೀಗಾಗಿ, ಕೊಹ್ಲಿಗೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸಿಗಲಿಲ್ಲ. ಇದರಿಂದಾಗಿ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.
ಸೆಲ್ಸಿಗೆ ಬೇಡಿಕೆ: ಪಂದ್ಯ ಮುಗಿಯುತ್ತಿದ್ದಂತೆ ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ದೆಹಲಿ, ರೈಲ್ವೇಸ್ ತಂಡಗಳ ಆಟಗಾರರು, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು, ಮೈದಾನ ಸಿಬ್ಬಂದಿ ಎಲ್ಲರೂ ಮುಗಿಬಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.