'ನಾನಂತೂ ಒಪ್ಪಲ್ಲ'; ಟಿ20 ಸರಣಿ ಸೋಲಿನ ಬೆನ್ನಲ್ಲೇ ಭಾರತದ ಎದುರು ತಿರುಗಿ ಬಿದ್ದ ಬಟ್ಲರ್!

Published : Feb 01, 2025, 01:52 PM IST
'ನಾನಂತೂ ಒಪ್ಪಲ್ಲ'; ಟಿ20 ಸರಣಿ ಸೋಲಿನ ಬೆನ್ನಲ್ಲೇ ಭಾರತದ ಎದುರು ತಿರುಗಿ ಬಿದ್ದ ಬಟ್ಲರ್!

ಸಾರಾಂಶ

ಪುಣೆಯಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ನ್ನು 15 ರನ್‌ಗಳಿಂದ ಸೋಲಿಸಿ 3-1 ಅಂತರದಲ್ಲಿ ಸರಣಿ ಜಯಿಸಿತು. ಶಿವಂ ದುಬೆಗೆ ಪೆಟ್ಟಾದ ಬಳಿಕ ಕನ್‌ಕಷನ್ ಆಟಗಾರನಾಗಿ ಹರ್ಷಿತ್ ರಾಣಾ ಕಣಕ್ಕಿಳಿದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಬೌಲರ್ ದುಬೆ ಬದಲು ಬೌಲರ್ ರಾಣಾ ಆಡಿದ್ದನ್ನು ಇಂಗ್ಲೆಂಡ್ ನಾಯಕ ಬಟ್ಲರ್ ತಪ್ಪೆಂದಿದ್ದಾರೆ.

ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 15 ರನ್ ಅಂತರದ ರೋಚಕ ಜಯ ಸಾಧಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು  ಭಾರತ ಎದುರು ಟಿ20 ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ತೆಗೆದುಕೊಂಡ ಒಂದು ತೀರ್ಮಾನದ ಬಗ್ಗೆ ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  

ಹೌದು, ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಶಿವಂ ದುಬೆ ಬದಲಿಗೆ ಕನ್‌ಕಷನ್ ಆಟಗಾರನಾಗಿ ಕಣಕ್ಕಿಳಿದ ವೇಗಿ ಹರ್ಷಿತ್ ರಾಣಾ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಶಿವಂ ದುಬೆ ಬದಲಿಗೆ ಕನ್‌ಕಷನ್ ಆಟಗಾರನಾಗಿ ಹರ್ಷಿತ್ ರಾಣಾ ಅವರಿಗೆ ಬೌಲಿಂಗ್‌ನಲ್ಲಿ ಸ್ಥಾನ ನೀಡಿದ್ದರ ಬಗ್ಗೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಸಮಾಧಾನ ಹೊರ ಹಾಕಿದ್ದಾರೆ.

ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!

ಅಷ್ಟಕ್ಕೂ ಶಿವಂ ದುಬೆ ಬದಲಿಗೆ ಹರ್ಷಿತ್‌ ರಾಣಾ ತಂಡ ಕೂಡಿಕೊಂಡಿದ್ದೇಕೆ? 

ಟೀಂ ಇಂಡಿಯಾ ಆಲ್ರೌಂಡರ್ ಶಿವಂ ದುಬೆ, ನಾಲ್ಕನೇ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಕೇವಲ 30 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ರನೌಟ್ ಆದರು. ಇನ್ನು ಸ್ಫೋಟಕ ಆಟವಾಡಿ ಭಾರತಕ್ಕೆ ನೆರವಾದ ಶಿವಂ ದುಬೆ ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಸುಪ್ತಾವಸ್ಥೆ ಬದಲಿ ಆಟಗಾರ(ಕನ್‌ಕಷನ್)ನಾಗಿ ವೇಗಿ ಹರ್ಷಿತ್‌ ರಾಣಾರನ್ನು ಆಡಿಸಲಾಯಿತು. ತಾವೆಸೆದ ಮೊದಲ ಓವರಲ್ಲೇ ವಿಕೆಟ್‌ ಕಬಳಿಸಿದ ಹರ್ಷಿತ್‌, ಆ ಬಳಿಕ ಜೇಕೊಬ್ ಬೆಥೆಲ್ ಹಾಗೂ ನಿರ್ಣಾಯಕ ಹಂತದಲ್ಲಿ ಜೇಮಿ ಓವರ್‌ಟನ್‌ರನ್ನು ಔಟ್‌ ಮಾಡಿ ಭಾರತದ ಗೆಲುವಿಗೆ ಕೊಡುಗೆ ನೀಡಿದರು.

ಜೋಸ್ ಬಟ್ಲರ್ ಏನಂದ್ರು?

ಪುಣೆ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜೋಸ್ ಬಟ್ಲರ್, 'ಇದು ಸರಿಯಾದ ಬದಲಿ ಕನ್‌ಕಷನ್ ಆಟಗಾರ ಅಲ್ಲವೇ ಅಲ್ಲ. ಇದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಒಂದೋ ಶಿವಂ ದುಬೆ 25 mph ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ, ಇಲ್ಲವೇ ಹರ್ಷಿತ್ ರಾಣಾ ಅವರ ಬ್ಯಾಟಿಂಗ್ ಅಷ್ಟೊಂದು ಸುಧಾರಿಸಿರಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇನ್ನು ಮುಂದುವರೆದು, ಇದೆಲ್ಲವೂ ಆಟದ ಒಂದು ಭಾಗ. ನಾವು ನಿಜಕ್ಕೂ ಈ ಪಂದ್ಯವನ್ನು ಗೆಲ್ಲಲು ಹೋರಾಟ ನಡೆಸಿದೆವು, ಆದರೆ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ' ಎಂದು ಬಟ್ಲರ್ ಹೇಳಿದ್ದಾರೆ.

ಕನ್‌ಕಷನ್ ರೂಲ್ಸ್ ಏನು ಹೇಳುತ್ತೆ?

ರೂಲ್‌ 1.2.7 ನಲ್ಲಿ ಕನ್‌ಕಷನ್‌ ಸಬ್‌ಸ್ಟಿಟ್ಯೂಟ್‌ಗೆ ಅವಕಾಶ ನೀಡಲಾಗಿದೆ. ಇದರ ಪ್ರಕಾರ, ಒಂದು ವೇಳೆ ಬ್ಯಾಟಿಂಗ್ ಮಾಡುವ ಆಟಗಾರನೊಬ್ಬನಿಗೆ ಚೆಂಡು ತಲೆಗೆ ಅಪ್ಪಳಿಸಿದರೆ, ಆ ಬಳಿಕ ಆ ತಂಡ ಕನ್‌ಕಷನ್‌ ರೂಪದಲ್ಲಿ ಬದಲಿ ಆಟಗಾರರನ್ನು ಬಳಸಿಕೊಳ್ಳಲು ಅವಕಾಶ ಒದಗಿಸಿಕೊಡಲಾಗಿದೆ. ಇಂತಹ ಸಂದರ್ಭದಲ್ಲಿ ಐಸಿಸಿ ಮ್ಯಾಚ್ ರೆಫ್ರಿ ಬ್ಯಾಟಿಂಗ್ ಮಾಡುವ ತಂಡವು ರೆಫ್ರಿ ಬಳಿ ಕನ್‌ಕಷನ್‌ ಆಟಗಾರನನ್ನು ಹೊಂದಲು ಮನವಿ ಸಲ್ಲಿಸಬೇಕು. ಹೀಗಾಗಬೇಕೆಂದರೆ ಆ ಬದಲಿ ಆಟಗಾರ ಕನ್‌ಕಷನ್‌ ಮೂಲಕ ಹೊರಗುಳಿಯವ ಆಟಗಾರನಷ್ಟೇ ಸಮನಾಂತರ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿಸಲಾಗಿದೆ.

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದೇ ಇದ್ರೂ ಪಂದ್ಯ ಗೆಲ್ಲಿಸಿದ ರಾಣಾ!

ರಾಣಾ ವಿಚಾರದಲ್ಲಿ ಏನು ವ್ಯತ್ಯಾಸ?

ಶಿವಂ ದುಬೆ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್‌ಕಷನ್ ಮೂಲಕ ಹೊರಗುಳಿದಾಗ ಪ್ರಮುಖ ವೇಗದ ಬೌಲರ್‌ ಹರ್ಷಿತ್ ರಾಣಾ ಅವರನ್ನು ಕನ್‌ಕಷನ್ ಆಟಗಾರನ ರೂಪದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಸಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?