ರಣಜಿ ಟ್ರೋಫಿ: ಬೃಹತ್ ಮುನ್ನಡೆಯತ್ತ ಕರ್ನಾಟಕ

By Kannadaprabha NewsFirst Published Feb 13, 2020, 9:50 AM IST
Highlights

ರಣಜಿ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಲಗ್ಗೆ ಇಡುವ ಕರ್ನಾಟಕ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ. ಬರೋಡಾ ವಿರುದಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುತ್ತಲೇ ಕರ್ನಾಟಕದ ಕನಸು ಈಡೇರುವತ್ತ ಸಾಗಿದೆ.

ಬೆಂಗಳೂರು(ಫೆ.13): 2019-20ರ ರಣಜಿ ಟ್ರೋಫಿಯ ಕ್ವಾರ್ಟರ್‌ ಫೈನಲ್‌ಗೇರುವ ಕರ್ನಾಟಕದ ಗುರಿ ಮೊದಲ ದಿನವೇ ಬಹುತೇಕ ಯಶಸ್ವಿಯಾಗಿದೆ. ಬುಧವಾರ ಇಲ್ಲಿ ಆರಂಭಗೊಂಡ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ, ಮೊದಲ ದಿನವೇ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೋನಸ್‌ ಗೆಲುವು!

ಕರ್ನಾಟಕ ಬೌಲರ್‌ಗಳ ದಾಳಿಗೆ ಸಿಲುಕಿದ ಬರೋಡಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 85 ರನ್‌ಗೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ, ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿ, 80 ರನ್‌ ಮುನ್ನಡೆ ಪಡೆಯಿತು. ದಿನದಾಟದಲ್ಲಿ 17 ವಿಕೆಟ್‌ಗಳು ಪತನಗೊಂಡವು.

ಬರೋಡಾವನ್ನು ದಿನದಾಟದ ಮೊದಲ ಅವಧಿಯಲ್ಲೇ ಕಳಪೆ ಮೊತ್ತಕ್ಕೆ ಆಲೌಟ್‌ ಮಾಡಿ, ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ಸಹ ಆರಂಭಿಕ ಆಘಾತ ಅನುಭವಿಸಿತು. 27 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಾದ ದೇವದತ್‌ ಪಡಿಕ್ಕಲ್‌ (06) ಹಾಗೂ ಆರ್‌.ಸಮಥ್‌ರ್‍ (11) ಬೇಗನೆ ಔಟಾದರು.

ಇದನ್ನೂ ಓದಿ: 

ಕೆ.ವಿ.ಸಿದ್ಧಾಥ್‌ರ್‍ (29) ಹಾಗೂ ನಾಯಕ ಕರುಣ್‌ ನಾಯರ್‌ (47) ತಂಡಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಿದರು. ಪವನ್‌ ದೇಶಪಾಂಡೆ (15) ದೊಡ್ಡ ಇನ್ನಿಂಗ್ಸ್‌ ಆಡುವಲ್ಲಿ ವಿಫಲರಾದರು. ಶ್ರೇಯಸ್‌ ಗೋಪಾಲ್‌ (0) ಖಾತೆ ತೆರೆಯಲಿಲ್ಲ. 16 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 27 ರನ್‌ ಸಿಡಿಸಿ ಕೆ.ಗೌತಮ್‌ ಔಟಾದರು.

ಇದನ್ನೂ ಓದಿ: RCB ತಂಡದಿಂದ ಹೊರಬಿದ್ದ ಬಳಿಕ ಅಬ್ಬರಿಸುತ್ತಿದ್ದಾರೆ ಸರ್ಫರಾಜ್..!.

19 ರನ್‌ ಗಳಿಸಿರುವ ವಿಕೆಟ್‌ ಕೀಪರ್‌ ಶರತ್‌ ಶ್ರೀನಿವಾಸ್‌ ಹಾಗೂ 9 ರನ್‌ ಗಳಿಸಿರುವ ಅಭಿಮನ್ಯು ಮಿಥುನ್‌ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮಾರಕ ದಾಳಿ: ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕರ್ನಾಟಕ ಆರಂಭಿಕ ಯಶಸ್ಸು ಸಾಧಿಸಿತು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ವೇಗಿ ಪ್ರಸಿದ್‌್ಧ ಕೃಷ್ಣ, ಕೇದಾರ್‌ ದೇವಧರ್‌ (03) ಹಾಗೂ ವಿಷ್ಣು ಸೋಲಂಕಿ (0)ಯನ್ನು ಪೆವಿಲಿಯನ್‌ಗಟ್ಟಿದರು. ಹಿರಿಯ ವೇಗಿ ಅಭಿಮನ್ಯು ಮಿಥುನ್‌ ಒಂದೇ ಓವರಲ್ಲಿ 3 ವಿಕೆಟ್‌ ಕಬಳಿಸಿದರು. ದೀಪಕ್‌ ಹೂಡಾ (20), ನಾಯಕ ಕೃನಾಲ್‌ ಪಾಂಡ್ಯ (0), ಅಭಿಮನ್ಯು ಸಿಂಗ್‌ (0) 4 ಎಸೆತಗಳ ಅಂತರದಲ್ಲಿ ವಿಕೆಟ್‌ ಕಳೆದುಕೊಂಡರು. ಅಹ್ಮದ್‌ನೂರ್‌ ಪಠಾಣ್‌ 45 ರನ್‌ ಗಳಿಸಿ ತಂಡದ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಉಳಿದ್ಯಾರೂ ಸಹ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಐವರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು. ಸ್ಪಿನ್ನರ್‌ಗಳಾದ ಕೆ.ಗೌತಮ್‌ 3, ಶ್ರೇಯಸ್‌ ಗೋಪಾಲ್‌ 1 ವಿಕೆಟ್‌ ಕಿತ್ತರು. 33.5 ಓವರಲ್ಲಿ ಬರೋಡಾ ಮೊದಲ ಇನ್ನಿಂಗ್ಸ್‌ಗೆ ತೆರೆ ಬಿತ್ತು.

ಸ್ಕೋರ್‌: ಬರೋಡಾ 85/10 (ಅಹ್ಮದ್‌ನೂರ್‌ 45, ದೀಪಕ್‌ 20, ಮಿಥುನ್‌ 3-26, ಗೌತಮ್‌ 3-25, ಪ್ರಸಿದ್‌್ಧ 2-7), ಕರ್ನಾಟಕ 165/7 (ಕರುಣ್‌ 47, ಸಿದ್ಧಾಥ್‌ರ್‍ 29, ಗೌತಮ್‌ 27, ಸೊಯೆಬ್‌ 3-40)

click me!