ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಪುನಾರಾರಂಭವಾಗಲಿ ಎಂದ ಯುವಿ

By Suvarna NewsFirst Published Feb 12, 2020, 2:40 PM IST
Highlights

ಇಂಡೋ-ಪಾಕ್ ನಡುವಿನ ದ್ವಿಪಕ್ಷೀಯ ಸರಣಿ ಬಗ್ಗೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮೌನ ಮುರಿದಿದ್ದಾರೆ. ಯುವಿ ಮಾತಿಗೆ ಅಫ್ರಿದಿ ಸಹಾ ಧ್ವನಿಗೂಡಿಸಿದ್ದಾರೆ. ಯುವಿ-ಅಫ್ರಿದಿ ಏನಂದ್ರು ಅನ್ನೋದನ್ನು ನೀವೊಮ್ಮೆ ಕೇಳಿಬಿಡಿ..

ಅಬುದಾಬಿ(ಫೆ.12) ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭವಾಗಲಿ ಎಂದು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಆಶಿಸಿದ್ದಾರೆ. ಕ್ರೀಡೆಯ ದೃಷ್ಟಿಯಿಂದ ದ್ವಿಪಕ್ಷೀಯ ಸರಣಿ ಎರಡು ದೇಶಗಳಿಗೆ ಮಹತ್ವದ್ದಾಗಿದೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ

ಭಾರತ-ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಮಣಿಸಿದ ಭಾರತ ಕಿರಿಯರ ತಂಡ ಫೈನಲ್ ಪ್ರವೇಶಿಸಿತ್ತು.

ಇಂಡೋ-ಪಾಕ್ ಚೊಚ್ಚಲ ಪಂದ್ಯ ನಡೆದದ್ದು, ಗೆದ್ದಿದ್ದು..?

ಯುಎಇ ಮೂಲದ ಸ್ಪೋರ್ಟ್ 360 ಮ್ಯಾಗಜಿನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವಿ, ಪಾಕಿಸ್ತಾನ ವಿರುದ್ಧ 2004, 2006 ಹಾಗೂ 2008ರಲ್ಲಿ ಆಡಿದ ದ್ವಿಪಕ್ಷೀಯ ಸರಣಿಗಳು ನನಗೆ ಇನ್ನೂ ನೆನಪಿವೆ. ಕ್ರಿಕೆಟ್ ಮೇಲಿನ ಪ್ರೀತಿಯಿಂದ ನಾವು ಆಡುತ್ತೇವೆ. ಯಾವ ತಂಡದ ವಿರುದ್ಧ ಆಡಬೇಕು ಎಂದು ನಾವು ಆಯ್ಕೆ ಮಾಡುವುದಿಲ್ಲ. ಕ್ರೀಡೆಯ ಹಿತದೃಷ್ಟಿಯಿಂದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆದರೆ ಒಳ್ಳೆಯದು ಎಂದು ಹೇಳಿದ್ದಾರೆ.

ಇಂಡೋ-ಪಾಕ್ ಸರಣಿ ಬಗ್ಗೆ ಮೋದಿ, ಇಮ್ರಾನ್ ಕೇಳಿ; ದಾದಾ ಖಡಕ್ ಮಾತು

ಇನ್ನು ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ ಸಹಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಮುಂದುವರೆದು, ಭಾರತ-ಪಾಕಿಸ್ತಾನ ನಡುವಿನ ಸರಣಿ ನಡೆದರೆ ಅದು ಆಷಸ್‌ಗಿಂತ ದೊಡ್ಡ ಸರಣಿ ಆಗಲಿದೆ ಎಂದು ಅಫ್ರಿದಿ ನುಡಿದಿದ್ದಾರೆ.

ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ-ಪಾಕಿಸ್ತಾನ ನಡುವೆ 2012ರಿಂದೀಚೆಗೆ ದ್ವಿಪಕ್ಷೀಯ ಸರಣಿಗಳೇ ನಡೆದಿಲ್ಲ. ಇನ್ನು ಕೊನೆಯ ಬಾರಿಗೆ ಭಾರತ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯ ನಡೆದಿದ್ದು 2007ರಲ್ಲಿ.
 

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!