ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳ ಪ್ರೋಫೈಲ್ ಪಿಕ್ಟರ್ ಡಿಲೀಟ್ ಆಗಿದೆ. ಇದು ಹ್ಯಾಕರ್ಸ್ ಕೆಲಸವೇ ಅಥವಾ RCB ತಂಡವೇ ಮಾಡಿತಾ ಅನ್ನೋ ಪ್ರಶ್ನೆಗೆ ಮೂಡಿದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ
ಬೆಂಗಳೂರು(ಫೆ.12): IPL 2020 ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹಲವು ಬದಲಾವಣೆ ಮಾಡಿದೆ. ಈಗಾಗಲೇ ಹರಾಜಿಗೂ ಮೊದಲು ತಂಡದ ಸಪೋರ್ಟ್ ಸ್ಟಾಫ್, ಕೋಚ್ , ನಿರ್ದೇಶಕರ ಸ್ಥಾನಕ್ಕೆ ಘಟಾನುಘಟಿಗಳನ್ನು ಆಯ್ಕೆ ಮಾಡಿತು. ಬಳಿಕ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಇದೀಗ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳಲ್ಲಿನ ಪ್ರೋಫೈಲ್ ಪಿಕ್ಟರ್ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಶಾಕ್ ನೀಡಿದೆ.
ಇದನ್ನೂ ಓದಿ: IPL 2020: RCBಗೆ ಹೊಸ ಟೈಟಲ್ ಪ್ರಾಯೋಜಕತ್ವ
undefined
ಟ್ವಿಟರ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿನ ಪ್ರೊಫೈಲ್ ಪಿಕ್ಟರ್ ಮಾಯವಾಗಿದೆ. ಇಷ್ಟೇ ಅಲ್ಲ ಇಷ್ಟು ದಿನ ಮಾಡಿದ ಪೋಸ್ಟ್‌ಗಳೆಲ್ಲವನ್ನು ಡಿಲೀಟ್ ಮಾಡಲಾಗಿದೆ. ಆರ್‌ಸಿಬಿ ತಂಡವೇ ಇದನ್ನು ಡಿಲೀಟ್ ಮಾಡಿತಾ? ಇಲ್ಲಾ ಖಾತೆ ಹ್ಯಾಕ್ ಆಗಿದೆಯಾ ಅನ್ನೋ ಆತಂಕವನ್ನು ಅಭಿಮಾನಿಗಳು ವ್ಯಕ್ತಪಡಡಿಸಿದ್ದಾರೆ.
ಇದನ್ನೂ ಓದಿ: ಈ ಐವರು RCB ತಂಡದಲ್ಲಿದ್ದರು ಎಂದರೆ ನೀವು ನಂಬಲೇಬೇಕು..!
ಇತ್ತೀಚೆಗೆ RCB ತಂಡದ ಟೈಟಲ್ ಪ್ರಾಯೋಜಕತ್ವ ಬದಲಾಗಿದೆ. ಮುತ್ತೂಟ್ ಫಿನ‌್‌ಕಾರ್ಪ್ ಜೊತೆ 3 ವರ್ಷದ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ತಂಡದ ಲೋಗೋ, ಕಲರ್ ಸೇರಿದಂತೆ ಎಲ್ಲವೂ ಬದಲಾಗುತ್ತಿದೆ ಅನ್ನೋ ಮಾಹಿತಿಗಳು ಕೇಳಿ ಬಂದಿದೆ. ಆದರೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಾಲ್ ಅಚ್ಚರಿ ವ್ಯಕ್ತಡಿಸಿದ್ದಾರೆ. ಇದು ಯಾವ ರೀತಿ ಗೂಗ್ಲಿ? ಪ್ರೊಫೈಲ್ ಪಿಕ್ಟರ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
Hey guys, any idea what's on with ? All posts deleted on Instagram, no profile pictures on Twitter and Facebook.....
— Harsha Bhogle (@bhogleharsha)Arey , what googly is this? 🤔 Where did your profile pic and Instagram posts go? 😳
— Yuzvendra Chahal (@yuzi_chahal)Hey , everything ok? 🤔 pic.twitter.com/XmcgcsP0GZ
— SunRisers Hyderabad (@SunRisers)ಮಾರ್ಚ್ 29 ರಿಂದ ಮೇ.24ರ ವರೆಗೆ 13ನೇ ಆವೃತ್ತಿ ಐಪಿಎಲ್ ಟೂರ್ನಿ ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ 8 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.