ಐಶಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ಸಚಿನ್ ತೆಂಡುಲ್ಕರ್..! ಕ್ರಿಕೆಟ್ ದೇವರ ಮನೆಗೆ ಹೊಸ ಅತಿಥಿ

Published : Jun 03, 2023, 02:08 PM IST
ಐಶಾರಾಮಿ ಲ್ಯಾಂಬೋರ್ಗಿನಿ ಖರೀದಿಸಿದ ಸಚಿನ್ ತೆಂಡುಲ್ಕರ್..! ಕ್ರಿಕೆಟ್ ದೇವರ ಮನೆಗೆ ಹೊಸ ಅತಿಥಿ

ಸಾರಾಂಶ

ಹೊಸದಾಗಿ ಐಶಾರಾಮಿ ಕಾರು ಖರೀದಿಸಿದ ಸಚಿನ್ ತೆಂಡುಲ್ಕರ್ ಲ್ಯಾಂಬೊರ್ಗಿನಿ Urus S ಮಾಡೆಲ್‌ನ ಹೈಎಂಡ್ ಕಾರು ಖರೀದಿಸಿದ ತೆಂಡುಲ್ಕರ್ 4.18 ಕೋಟಿ ರುಪಾಯಿ ಬೆಲೆಯ ಲ್ಯಾಂಬೊರ್ಗಿನಿ Urus S ಕಾರು

ಮುಂಬೈ(ಜೂ.03): ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಿಗೆ ಹೊಸ ಹೊಸ ಐಶಾರಾಮಿ ಕಾರು ಖರೀದಿಸುವ ಖಯಾಲಿ ಇದೆ. ಇದೀಗ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಮನೆಗೆ ಹೊಸದಾಗಿ ಐಶಾರಾಮಿ ಕಾರು ಬಂದಿಳಿದಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಇದೀಗ ಲ್ಯಾಂಬೊರ್ಗಿನಿ Urus S ಮಾಡೆಲ್‌ನ ಹೈಎಂಡ್ ಕಾರು ಖರೀದಿಸಿದ್ದಾರೆ.  

ಬರೋಬ್ಬರಿ 4.18 ಕೋಟಿ ರುಪಾಯಿ ಬೆಲೆಯ ಲ್ಯಾಂಬೊರ್ಗಿನಿ Urus S ಕಾರು ಇದಾಗಿದ್ದು, ಅತ್ಯದ್ಭುತವಾದ ಡ್ರೈವಿಂಗ್‌ ಅನುಭವವನ್ನು ಇದು ನೀಡಲಿದೆ. ಸಚಿನ್ ತೆಂಡುಲ್ಕರ್ ನಿವಾಸದಲ್ಲಿ ಈಗಾಗಲೇ ಹಲವಾರು ಐಶಾರಾಮಿ ಕಾರುಗಳಿದ್ದು, ಲ್ಯಾಂಬೊರ್ಗಿನಿ Urus S ಕಾರು, ಇದಕ್ಕೆ ಹೊಸ ಸೇರ್ಪಡೆ ಎನಿಸಿಕೊಂಡಿದೆ. 

ಇತ್ತೀಚೆಗಷ್ಟೇ CS12 ವ್ಲಾಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್, ಮುಂಬೈನಲ್ಲಿ ಬಿಳಿ ಬಣ್ಣದ ಪೋರ್ಸೆ 911 ಟರ್ಬೊ ಎಸ್‌ ಎದುರು ನಿಂತು ಪೋಸ್ ಕೊಟ್ಟಿದ್ದರು. ಸಚಿನ್ ತೆಂಡುಲ್ಕರ್ ಐತಿಹಾಸಿಕ ಸಿ ಲಿಂಕ್‌ ಎದುರು ಪೋಸ್‌ ಕೊಟ್ಟಿದ್ದರು. ಈ ಕಾರನ್ನು ಸಚಿನ್‌ ತೆಂಡುಲ್ಕರ್ ಪತ್ನಿ ಅರ್ಜುನ್ ತೆಂಡುಲ್ಕರ್ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ ಎಂದು ಸಚಿನ್ ರಮೇಶ್ ತೆಂಡುಲ್ಕರ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಕಂಪನಿಯು ತಿಳಿಸಿದೆ.

ಈ ಮೊದಲೇ ವಿವರಿಸಿದಂತೆ ಈಗಾಗಲೇ ಸಚಿನ್ ತೆಂಡುಲ್ಕರ್ ಅವರ ಮನೆಯಲ್ಲಿ ಸಾಕಷ್ಟು ಐಶಾರಾಮಿ ಕಾರು ಕಲೆಕ್ಷನ್‌ ಇದೆ. ಲಿಟ್ಲ್ ಮಾಸ್ಟರ್ ತೆಂಡುಲ್ಕರ್ ಬಳಿಕ ಬಿಎಂಡಬ್ಲ್ಯೂ ಸಂಸ್ಥೆಯ ಹಲವು ಕಾರುಗಳು ಇವೆ. ಸಚಿನ್ ತೆಂಡುಲ್ಕರ್ ಬಳಿಕ BMF ಮಾಡೆಲ್‌ನ ನೂತನ ಸೀರಿಸ್ ಎನಿಸಿಕೊಂಡಿರುವ BMF 7 ಸೀರಿಸ್‌ನ ಲೀ, BMW X5M, BMW i8, ಹಾಗೂ BMW 5-ಸೀರಿಸ್ ಕಾರು ಸಂಗ್ರಹವಿದೆ. ಸಚಿನ್ ತೆಂಡುಲ್ಕರ್ BMW ಸಂಸ್ಥೆಯ ರಾಯಭಾರಿ ಆಗುವ ಮುನ್ನವೇ ಈ ಐಶಾರಾಮಿ ಸಂಸ್ಥೆಯ ಕಾರು ಹೊಂದಿದ್ದರು. ತೆಂಡುಲ್ಕರ್ ಈ ಮೊದಲು BMW X5M ಕಾರನ್ನು ಖಾಸಗಿಯಾಗಿ ಆಮದು ಮಾಡಿಕೊಂಡಿದ್ದರು.

WTC Final ಭಾರತ ಗೆಲ್ಲಬೇಕಿದ್ದರೇ...? ಅಚ್ಚರಿಯ ಹೇಳಿಕೆ ನೀಡಿದ ರಿಕಿ ಪಾಂಟಿಂಗ್‌..!
 
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಲ್ಯಾಂಬೊರ್ಗಿನಿ Urus ಕಾರಿನ ಮಾಲೀಕರಾಗಿದ್ದಾರೆ. ಕೇವಲ 3.5 ಸೆಕೆಂಡ್‌ಗಳಲ್ಲಿ ಈ ಕಾರು ಸೊನ್ನೆಯಿಂದ 60 ಕಿಲೋ ಮೀಟರ್ ವೇಗವನ್ನು ಪಡೆಯುವ ಸಾಮರ್ಥ್ಯವಿದೆ. ಈ ಐಶಾರಾಮಿ ಕಾರಿನಲ್ಲಿ ಗಂಟೆಗೆ 190 ಕಿಲೋಮೀಟರ್ ವೇಗದಲ್ಲಿ ಗರಿಷ್ಠವಾಗಿ ಕಾರು ಓಡಿಸಬಹುದು. 

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಮೊದಲು 2018ರಲ್ಲಿ ಐಶಾರಾಮಿ ಕಾರಾದ ಬೆಂಟ್ಲೆ ಕಾಂಟಿನೆಂಟಲ್‌ ಜಿಟಿ ಖರೀದಿಸಿದ್ದಾರೆ. ಈ ಅತ್ಯದ್ಭುತ ಸ್ಪೋರ್ಟ್ಸ್‌ ಕಾರು ದೇಶದ ದುಬಾರಿ ಕಾರುಗಳ ಪೈಕಿ ಒಂದು ಎನಿಸಿದೆ. ಈ ಕಾರಿನ ಬೆಲೆ 3.29 ಕೋಟಿ ರುಪಾಯಿಗಳಿಂದ 4.04 ಕೋಟಿ ರುಪಾಯಿಗಳವರೆಗೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ