ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿ ಒಂದೂ ಪಂದ್ಯವಾಡದೆ ವಾಪಾಸ್ ಆಗಿರೋ ಎಷ್ಟೋ ಆಟಗಾರರಿದ್ದಾರೆ. ಅದಕ್ಕೆ ಇತ್ತೀಚಿನ ಬೆಸ್ಟ್ ಎಕ್ಸಾಂಪಲ್ ಅಂದ್ರೆ ತಂಡಕ್ಕೆ ಸೆಲೆಕ್ಟ್ ಆಗಿ 2ನೇ ಟೆಸ್ಟ್ ಆಡದೆಯೇ ರಣಜಿ ಆಡಲು ವಾಪಾಸ್ ಆದ ಅವೇಶ್ ಖಾನ್ ಮತ್ತು ಸೌರಭ್ ಕುಮಾರ್.
ಬೆಂಗಳೂರು(ಫೆ.14): ಚೀಫ್ ಸೆಲೆಕ್ಟರ್ ಮನಸ್ಸು ಗೆದ್ದು ಟೆಸ್ಟ್ ತಂಡಕ್ಕೇನು ದೇವದತ್ ಪಡಿಕ್ಕಲ್ ಆಯ್ಕೆಯಾಗಿದ್ದಾರೆ. ಆದ್ರೆ 3ನೇ ಟೆಸ್ಟ್ನಲ್ಲಿ ಆಡ್ತಾರಾ..? ಇಲ್ಲವಾ ಅನ್ನೋದು ಮಾತ್ರ ನಿಗೂಢ. ಯಾಕಂದ್ರೆ ಪಡಿಕ್ಕಲ್ಗೂ ಮುಂಚೆಯೇ ತಂಡಕ್ಕೆ ಸೆಲೆಕ್ಟ್ ಆಗಿದ್ದ ಆಟಗಾರನೊಬ್ಬ ಟೆಸ್ಟ್ಗೆ ಡೆಬ್ಯು ಮಾಡಲು ಕಾಯ್ತಿದ್ದಾನೆ. ಈ ಇಬ್ಬರ ನಡ್ವೆ 3ನೇ ಟೆಸ್ಟ್ ಆಡಲು ಬಿಗ್ ಫೈಟ್ ಬಿದ್ದಿದೆ.
ಮುಂಬೈಕರ್ VS ಕನ್ನಡಿಗ
undefined
ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿ ಒಂದೂ ಪಂದ್ಯವಾಡದೆ ವಾಪಾಸ್ ಆಗಿರೋ ಎಷ್ಟೋ ಆಟಗಾರರಿದ್ದಾರೆ. ಅದಕ್ಕೆ ಇತ್ತೀಚಿನ ಬೆಸ್ಟ್ ಎಕ್ಸಾಂಪಲ್ ಅಂದ್ರೆ ತಂಡಕ್ಕೆ ಸೆಲೆಕ್ಟ್ ಆಗಿ 2ನೇ ಟೆಸ್ಟ್ ಆಡದೆಯೇ ರಣಜಿ ಆಡಲು ವಾಪಾಸ್ ಆದ ಅವೇಶ್ ಖಾನ್ ಮತ್ತು ಸೌರಭ್ ಕುಮಾರ್. ಇಬ್ಬರು ಬೆಂಚ್ ಕಾಯ್ದು ವಾಪಾಸ್ ಆದ್ರು. ವಿಕೆಟ್ ಕೀಪರ್ ಧೃವ್ ತಂಡದಲ್ಲಿದ್ದರೂ ಮೊದಲೆರಡು ಟೆಸ್ಟ್ ಆಡಿಲ್ಲ. ಈಗ ಅದೇ ಭಯದಲ್ಲಿದ್ದಾರೆ ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್.
ರಾಹುಲ್ ಬದಲಿಗೆ ಬಂದವರ ನಡ್ವೆ ಬಿಗ್ ಫೈಟ್
ಗಾಯಾಳು ಕೆಎಲ್ ರಾಹುಲ್ ಬದಲಿಗೆ ಈ ಇಬ್ಬರು ಟೆಸ್ಟ್ ತಂಡ ಸೇರಿಕೊಂಡವರು. ಹೌದು, 2ನೇ ಟೆಸ್ಟ್ನಿಂದ ರಾಹುಲ್ ಹೊರಬಿದ್ದ ಮೇಲೆ ಸರ್ಫರಾಜ್ ಎಂಟ್ರಿಯಾದ್ರು. ಶ್ರೇಯಸ್ ಅಯ್ಯರ್ ಡ್ರಾಪ್ ಮಾಡಿ ಉಳಿದ ಮೂರು ಟೆಸ್ಟ್ಗಳಿಗೂ ಸರ್ಫರಾಜ್ನನ್ನ ಟೀಮ್ನಲ್ಲಿ ಉಳಿಸಿಕೊಳ್ಳಲಾಯ್ತು. 3ನೇ ಟೆಸ್ಟ್ನಿಂದ ರಾಹುಲ್ ಹೊರಬಿದ್ದಿದ್ದರಿಂದ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾದ್ರು. ಈಗ ಒಂದು ಸ್ಥಾನದಲ್ಲಿ ಆಡಲು ಈ ಇಬ್ಬರ ನಡ್ವೆ ಫೈಟ್ ಬಿದ್ದಿದೆ. ಈ ಇಬ್ಬರಲ್ಲಿ ನಂಬರ್ 4 ಸ್ಲಾಟ್ನಲ್ಲಿ ಆಡೋಱರು ಅನ್ನೋ ಕುತೂಹಲ ಹುಟ್ಟಿಕೊಂಡಿದೆ.
ತ್ರಿಶತಕ ವೀರನಿಗೆ ಎಡಗೈ ಬ್ಯಾಟರ್ ಪೈಪೋಟಿ
ಸರ್ಫರಾಜ್ ಖಾನ್, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. 2014ರಲ್ಲೇ ಮುಂಬೈ ಪರ ರಣಜಿ ಆಡಿದ್ದ ಸರ್ಫರಾಜ್, 45 ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 14 ಶತಕ, 11 ಅರ್ಧಶತಕ ಸಹಿತ 3912 ರನ್ ಹೊಡೆದಿದ್ದಾರೆ. ತ್ರಿಶತಕವನ್ನೂ ಬಾರಿಸಿದ್ದಾರೆ. 301 ಅವರ ಬೆಸ್ಟ್ ಸ್ಕೋರ್. ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ್ದ ಸರ್ಫರಾಜ್, ಅಲ್ಲೊಂದು ಸೆಂಚುರಿ ಸಿಡಿಸಿ, ಎರಡು ಹಾಫ್ ಸೆಂಚುರಿ ದಾಖಲಿಸಿ ಬಂದಿದ್ದಾರೆ.
ಪಡಿಕ್ಕಲ್ 31 ಪ್ರಥಮ ದರ್ಜೆ ಪಂದ್ಯಗಳಿಂದ 2227 ರನ್ ಹೊಡೆದಿದ್ದಾರೆ. 6 ಸೆಂಚುರಿ, 12 ಹಾಫ್ ಸೆಂಚುರಿ ಅವರ ಖಾತೆಯಲ್ಲಿವೆ. ಎಡಗೈ ಬ್ಯಾಟರ್ ಆಗಿರೋದು ಅವರಿಗೆ ಪ್ಲಸ್ ಪಾಯಿಂಟ್. ಮಧ್ಯಮ ಕ್ರಮಾಂಕದಲ್ಲಿ ಲೆಫ್ಟಿ ಬ್ಯಾಟರ್ ಇದ್ದರೆ, ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚುತ್ತೆ. ಸ್ಪಿನ್ನರ್ಗಳನ್ನ ಆಟ್ಯಾಕ್ ಮಾಡಬಹುದು.
ಪಡಿಕ್ಕಲ್‌ಗೆ ಹೋಲಿಸಿದ್ರೆ ಸರ್ಫರಾಜ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಜೊತೆಗೆ ಅನುಭವವೂ ಇದೆ. ಕಳೆದೊಂದು ದಶಕದಿಂದ ಟೀಂ ಇಂಡಿಯಾಗೆ ಎಂಟ್ರಿ ಆಗಲು ಕಾಯ್ತಿದ್ದರು. ಈಗ ಅವಕಾಶ ಸಿಕ್ಕಿದೆ. ಹಾಗಾಗಿ ರಾಜ್ಕೋಟ್ನಲ್ಲಿ ಸರ್ಫರಾಜ್ ಟೆಸ್ಟ್‌ಗೆ ಡೆಬ್ಯು ಮಾಡೋದು ಬಹುತೇಕ ಖಚಿತವಾಗಿದೆ. ಆದ್ರೆ ಎಡಗೈ ಬ್ಯಾಟರ್ ಅನ್ನೋ ಕಾರಣಕ್ಕೆ ಪಡಿಕ್ಕಲ್ಗೆ ಅವಕಾಶ ಕೊಟ್ರೂ ಆಶ್ಚರ್ಯವಿಲ್ಲ. ಒಟ್ನಲ್ಲಿ ಒಂದು ಸ್ಥಾನಕ್ಕೆ ಕರ್ನಾಟಕ ಮತ್ತು ಮುಂಬೈ ಆಟಗಾರರ ನಡ್ವೆ ಬಿಗ್ ಫೈಟ್ ಬಿದ್ದಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್