ಸದ್ಯ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿವೆ. ಇಡೀ ಭಾರತೀಯ ಯುವ ಆಟಗಾರರ ಚಿತ್ತ ರಣಜಿ ಮೇಲೆ ಬಿದ್ದಿದೆ. ಇನ್ನೊಂದು ಕಡೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯೂ ನಡೆಯುತ್ತಿದೆ. ಇಂಜುರಿಯಾಗಿ ಸೀನಿಯರ್ ಪ್ಲೇಯರ್ಸ್ ಒಬ್ಬೊಬ್ಬರಾಗಿ ಟೀಮ್ನಿಂದ ಹೊರಬೀಳುತ್ತಿದ್ದಾರೆ.
ಬೆಂಗಳೂರು(ಫೆ.14): ಈತನಿಗೆ ಸ್ಟ್ಯಾಮಿನಾ ಇಲ್ಲ ಅಂತ ಆರ್‌ಸಿಬಿ ಡ್ರಾಪ್ ಮಾಡಿತ್ತು. ಫೀಲ್ಡ್ನಲ್ಲಿ ಲೇಸಿಯಾಗಿರ್ತಾನೆ ಅನ್ನೋ ಆರೋಪ ಸಹ ಇತ್ತು. ಆದ್ರೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟು ಎರಡು ವರ್ಷದ ಬಳಿಕ ಆತನ ಲಕ್ ಚೇಂಜ್ ಆಗಿ ಹೋಗಿದೆ. ಭಾರತ ಟೆಸ್ಟ್ ತಂಡಕ್ಕೆ ಸೆಲೆಕ್ಟ್ ಆಗಿದ್ದಾನೆ. ಜಸ್ಟ್ ಒಂದು ಇನ್ನಿಂಗ್ಸ್ ಆತನ ನಸೀಬನ್ನೇ ಬದಲಿಸ್ತು.
ಸೆಂಚುರಿ ಹೊಡೆಯೋದು ಮುಖ್ಯವಲ್ಲ, ಯಾವಾಗ ಹೊಡಿತಿವಿ ಅನ್ನೋದು ಮುಖ್ಯ..!
undefined
ಸದ್ಯ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿವೆ. ಇಡೀ ಭಾರತೀಯ ಯುವ ಆಟಗಾರರ ಚಿತ್ತ ರಣಜಿ ಮೇಲೆ ಬಿದ್ದಿದೆ. ಇನ್ನೊಂದು ಕಡೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯೂ ನಡೆಯುತ್ತಿದೆ. ಇಂಜುರಿಯಾಗಿ ಸೀನಿಯರ್ ಪ್ಲೇಯರ್ಸ್ ಒಬ್ಬೊಬ್ಬರಾಗಿ ಟೀಮ್ನಿಂದ ಹೊರಬೀಳುತ್ತಿದ್ದಾರೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರು ಟೀಂ ಇಂಡಿಯಾ ಸೇರಿಕೊಳ್ತಿದ್ದಾರೆ. ಆದ್ರೆ ಕೆಲವರು ಎಷ್ಟೇ ರನ್ ಹೊಡೆದ್ರೂ, ಎಷ್ಟೇ ವಿಕೆಟ್ ಪಡೆದ್ರೂ, ಎಷ್ಟೇ ಚೆನ್ನಾಗಿ ಕೀಪಿಂಗ್ ಮಾಡಿದ್ರೂ ಸೆಲೆಕ್ಟ್ ಆಗಿಲ್ಲ.
WPLನಲ್ಲಿ ಬದಲಾಯ್ತು ಮುಂಬೈ ಇಂಡಿಯನ್ಸ್ ಜೆರ್ಸಿ..! ಐಪಿಎಲ್‌ನಲ್ಲೂ ಬದಲಾಗುತ್ತಾ ಜೆರ್ಸಿ?
ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡೋದು ಮುಖ್ಯವಾಗಲ್ಲ. ಆದ್ರೆ ಆತ ಯಾವ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡ್ತಾನೆ ಅನ್ನೋದೇ ಮುಖ್ಯ. ಏಕದಿನ ವಿಶ್ವಕಪ್ ಮತ್ತು ಅಂಡರ್-19 ವಿಶ್ವಕಪ್ನಲ್ಲಿ ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತೀಯ ಬ್ಯಾಟರ್ಗಳು, ಫೈನಲ್ನಲ್ಲಿ ಮುಗ್ಗರಿಸಿದ್ರು. ಪರಿಣಾಮ ಎರಡು ವಿಶ್ವಕಪ್‌ಗಳು ಮಿಸ್ ಆದವು. ಹಾಗೆ ರಣಜಿಯಲ್ಲೂ ಅಷ್ಟೇ, ಮಹತ್ವದ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ರೆ ಆತ ಈಸಿಯಾಗಿ ಟೀಂ ಇಂಡಿಯಾಗೆ ಸೆಲೆಕ್ಟ್ ಆಗ್ತಾನೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಕರ್ನಾಟಕದ ದೇವ್ದತ್ ಪಡಿಕ್ಕಲ್.
ಕರ್ನಾಟಕ-ತಮಿಳುನಾಡು ಪಂದ್ಯ ವೀಕ್ಷಿಸಿದ ಚೀಫ್ ಸೆಲೆಕ್ಟರ್
ರೋಚಕ ಡ್ರಾನಲ್ಲಿ ಅಂತ್ಯಗೊಂಡ ಕರ್ನಾಟಕ-ತಮಿಳುನಾಡು ಪಂದ್ಯವನ್ನ ಚೀಫ್ ಸೆಲೆಕ್ಟರ್ ಅಜಿತ್ ಅಗರ್‌ಕರ್ ವೀಕ್ಷಿಸಿದ್ದಾರೆ. ಆ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್, ಭರ್ಜರಿ ಶತಕ ಸಿಡಿಸಿದ್ರು. ಹೌದು, ಮೊದಲ ಇನ್ನಿಂಗ್ಸ್ನಲ್ಲಿ ಪಡಿಕ್ಕಲ್, 151 ರನ್ ಬಾರಿಸಿದ್ರೆ, 2ನೇ ಇನ್ನಿಂಗ್ಸ್ನಲ್ಲಿ 36 ರನ್ ಹೊಡೆದ್ರು. ಪಡಿಕ್ಕಲ್ ಬ್ಯಾಟಿಂಗ್ ಅನ್ನ ಖುದ್ದು ಸ್ಟೇಡಿಯಂನಲ್ಲೇ ವೀಕ್ಷಿಸಿದ ಅಗರ್ಕರ್, ಫಿದಾ ಆಗಿದ್ದಾರೆ. ಪರಿಣಾಮ ಕೆಎಲ್ ರಾಹುಲ್ ಇಂಜುರಿಯಿಂದ 3ನೇ ಟೆಸ್ಟ್ ಆಡಲ್ಲ ಅಂತ ಗೊತ್ತಾದ ತಕ್ಷಣ ಪಡಿಕ್ಕಲ್ ಅವರನ್ನ ಸೆಲೆಕ್ಟ್ ಮಾಡಿದ್ದಾರೆ. ಇದೇ ಅಲ್ವಾ ಅದೃಷ್ಟ ಅಂದ್ರೆ.
ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಶುರುವಾಗಿ ಇಂಗ್ಲೆಂಡ್ ಸ್ಪಿನ್ನರ್‌ಗಳ ಭೀತಿ..!
ರಣಜಿಯಲ್ಲೂ ಆರ್ಭಟ, ಇಂಗ್ಲೆಂಡ್ ಲಯನ್ಸ್ ವಿರುದ್ಧವೂ ಅಬ್ಬರ..!
ಕೇವಲ ತಮಿಳುನಾಡು ವಿರುದ್ಧ ಶತಕ ಬಾರಿಸಿದಕ್ಕೆ ಪಡಿಕ್ಕಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಈ ಸೀಸನ್ ರಣಜಿಯಲ್ಲಿ 4 ಪಂದ್ಯಗಳಿಂದ ಮೂರು ಶತಕ ಸಹಿತ 556 ರನ್ ಹೊಡೆದಿದ್ದಾರೆ. ಇನ್ನು ಇಂಗ್ಲೆಂಡ್ ಲಯನ್ಸ್ ವಿರುದ್ಧ ಇಂಡಿಯಾ A ಪರ ಆಡಿದ್ದ ಪಡಿಕ್ಕಲ್, ಮೂರು ಇನ್ನಿಂಗ್ಸ್ನಲ್ಲಿ ಒಂದು ಶತಕ, ಒಂದು ಅರ್ಧಶತಕ ಬಾರಿಸಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದರ ಜೊತೆ ಚೀಫ್ ಸೆಲೆಕ್ಟರ್ ಮುಂದೆಯೇ ಆಕರ್ಷಕ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು. ಹಾಗಾಗಿ ಟೆಸ್ಟ್ ತಂಡಕ್ಕೆ ಬುಲಾವ್ ನೀಡಲಾಯ್ತು.
ಮಿಡಲ್ ಆರ್ಡರ್‌ಗೆ ಬಂದ್ಮೇಲೆ ಪಡಿಕ್ಕಲ್ ಲಕ್ ಚೇಂಜ್ ಆಯ್ತು
ದೇವದತ್ ಪಡಿಕ್ಕಲ್ ಆರಂಭಿಕ ಬ್ಯಾಟರ್. ಕರ್ನಾಟಕ ಮತ್ತು ಐಪಿಎಲ್‌ನಲ್ಲಿ ಆರ್ಸಿಬಿ ಪರ ಓಪನರ್ ಆಗಿದ್ದವರು. ಆದ್ರೆ ಆರ್ಸಿಬಿಯಿಂದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸೇರಿಕೊಂಡ ಮೇಲೆ ಮಿಡಲ್ ಆರ್ಡರ್ ಬ್ಯಾಟರ್ ಆದ್ರು. ಅಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ರು. ಬಳಿಕ ಕರ್ನಾಟಕ ತಂಡದಲ್ಲೂ ಓಪನಿಂಗ್ ಸ್ಲಾಟ್ ಖಾಲಿ ಇರಲಿಲ್ಲ. ಆಗ ಅನಿವಾರ್ಯವಾಗಿ ಮಿಡಲ್ ಆರ್ಡರ್‌ನಲ್ಲಿ ಆಡಬೇಕಾಯ್ತು. ಅಲ್ಲಿಂದ ಬದಲಾಯ್ತು ನೋಡಿ ಪಡಿಕ್ಕಲ್ ನಸೀಬು. ಮಧ್ಯಮ ಕ್ರಮಾಂಕದಲ್ಲಿ ಶತಕ ಮೇಲೆ ಶತಕ ಬಾರಿಸಿದ್ರು. ರನ್ ಶಿಖರವೇರಿದ್ರು. ಈಗ ಟೆಸ್ಟ್ ತಂಡಕ್ಕೆ ಸೆಲೆಕ್ಟ್ ಆಗಿರೋದು ಮಿಡಲ್ ಆರ್ಡರ್ಗೆ. ಅಲ್ಲಿಗೆ ಒಂದು ಇನ್ನಿಂಗ್ಸ್. ಮಿಡಲ್ ಆರ್ಡರ್ಗೆ ಹಿಂಬಡ್ತಿ ಪಡೆದಿದ್ದು ಪಡಿಕಲ್ ನಸೀಬನ್ನೇ ಬದಲಿಸ್ತು.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್