
ಬೆಂಗಳೂರು(ಫೆ.14): WPL ಮತ್ತು IPLಗೆ ಎಲ್ಲಾ ತಂಡಗಳು ಸಿದ್ದತೆ ಆರಂಭಿಸಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಮುಂಬೈ ಇಂಡಿಯನ್ಸ್ ತನ್ನ ಜೆರ್ಸಿಯನ್ನೇ ಬದಲಿಸಿದೆ. ಅಯ್ಯೋ, ಐದು ಸಲ ಚಾಂಪಿಯನ್ ಆದ ಜೆರ್ಸಿ ಬದಲಿಸಿದ್ದೇಕೆ ಅಂತ ಗಾಬರಿಯಾಗಬೇಡಿ. ಸದ್ಯ ಬದಲಾಗಿರೋದು ಹೆಣ್ಮಕ್ಕಳದ್ದು. ಹುಡುಗರ ಜೆರ್ಸಿ ಬದಲಾಗುತ್ತೆ ಅಂತ ಹೇಳಲಾಗ್ತಿದೆ.
ಹೊಸ ಜೆರ್ಸಿಯಲ್ಲಿ ಹೇಗೆ ಕಾಣಿಸ್ತಾರೆ ಗೊತ್ತಾ ಹೆಣ್ಮಕ್ಕಳು..?
2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23ರಿಂದ WPL ಸ್ಟಾರ್ಟ್ ಆಗಲಿದ್ದು, ಆಗ್ಲೇ ಎಲ್ಲಾ ತಂಡಗಳು ಸಿದ್ದತೆ ಆರಂಭಿಸಿವೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೈನಲ್‌ಗೆ ರಾಷ್ಟ್ರ ರಾಜಧಾನಿ ಡೆಲ್ಲಿ ಆತಿಥ್ಯ ವಹಿಸಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕಠಿಣ ಅಭ್ಯಾಸ ನಡೆಸುತ್ತಿದೆ. ಈ ನಡುವೆ ಮುಂಬೈ ಆಟಗಾರ್ತಿಯ ಹೊಸ ಜೆರ್ಸಿ ಎಲ್ಲರ ಗಮನ ಸೆಳೆದಿದೆ.
ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಮುಂಬೈ ಇಂಡಿಯನ್ಸ್, ಈ ಸಲದ WPLಗೆ ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಪೋಸ್ಟರ್ ಹಾಕಿದ್ದಾರೆ. ಆಕರ್ಷಕವಾಗಿ ಕಾಣುವ ಕಡು ನೀಲಿ ಜೆರ್ಸಿಯನ್ನು ಖ್ಯಾತ ವಿನ್ಯಾಸಕಿ ಮೋನಿಶಾ ಜೈಸಿಂಗ್ ವಿನ್ಯಾಸಗೊಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಧರಿಸಲು ಒಗ್ಗಿಕೊಂಡಿರುವ ಸಾಂಪ್ರದಾಯಿಕ ನೀಲಿ ಮತ್ತು ಚಿನ್ನದ ಅಸ್ತಿತ್ವವನ್ನು ಜೆರ್ಸಿ ಉಳಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್‌ನ ಜರ್ಸಿಯ ಮುದ್ರಣವು ನವಿಲಿನ ಕುತ್ತಿಗೆ ಮತ್ತು ಎದೆಯ ಮೇಲಿನ ನವಿಲಿನ ಗರಿಗಳ ನೀಲಿ ಛಾಯೆಗಳಿಂದ ಪ್ರೇರಿತವಾಗಿದೆ. ಇದು ವಿಶಿಷ್ಟವಾದ ಬಣ್ಣ ಮತ್ತು ಗಾತ್ರದ ಗ್ರೇಡಿಯಂಟ್ ಅನ್ನು ತೋರಿಸುತ್ತದೆ. ಹವಳ-ಪೀಚ್ ಬಣ್ಣವು ಕಾಂಡ ಎಂದು ಕರೆಯಲ್ಪಡುವ ಗರಿಗಳ ಕೇಂದ್ರ ಭಾಗದಿಂದ ಸ್ಫೂರ್ತಿ ಪಡೆದಿದೆ. ಇದು ಹವಳ-ಕಂದು ಪ್ಯಾಲೆಟ್‌ಗೆ ಸೇರಿದೆ. ಗ್ರೇಡಿಯಂಟ್ ಮಾದರಿಯು ನವಿಲಿನ ಕುತ್ತಿಗೆ ಮತ್ತು ಎದೆಯ ಗರಿಗಳ ಮೇಲೆ ಕಂಡುಬರುವ ನೈಸರ್ಗಿಕ ಜ್ಯಾಮಿತೀಯ ಮತ್ತು ಬಣ್ಣದ ಗ್ರೇಡಿಯಂಟ್‌ನಿಂದ ಸ್ಫೂರ್ತಿ ಪಡೆಯುತ್ತದೆ ಎಂದು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಬಾರಿಗೆ ಹೋಲಿಸಿದ್ರೆ ಮುಂಬೈ ಇಂಡಿಯನ್ಸ್ ಜೆರ್ಸಿ ತುಂಬಾ ಬದಲಾವಣೆಯಾಗಿದೆ. ಹಳೆಯದ್ದೇ ಚೆನ್ನಾಗಿತ್ತು ಅನಿಸಿದ್ರೂ ಅನಿಸಬಹುದು. ಈಗ ಅದಲ್ಲ ಪ್ರಶ್ನೆ. ಹೆಣ್ಮಕ್ಕಳ ಜೆರ್ಸಿ ಬದಲಾಗಿದೆ. ಇದೇ ಜೆರ್ಸಿಯಲ್ಲಿ ಐದೈದು ಐಪಿಎಲ್ ಟ್ರೋಫಿ ಗೆದ್ದಿದ್ದ ಹುಡುಗರ ಜೆರ್ಸಿ ಬದಲಾಗುತ್ತಾ ಅನ್ನೋದು.
ಹೌದು, ಹುಡುಗರಿಯರಂತೆ ಹುಡುಗರ ಜೆರ್ಸಿಯನ್ನ ಬದಲಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಚಿಂತನೆ ನಡೆಸಿದ್ದಾರೆ. ದಶಕಗಳಿಂದ ಒಂದೇ ಜೆರ್ಸಿ ನೋಡಿ ನೋಡಿ ಬೇಸರವಾಗಿದೆ. ಹಾಗಾಗಿ ಆಟಗಾರರನ್ನ ಹೊಸ ಲುಕ್ನಲ್ಲಿ ನೋಡಲು ಫ್ರಾಂಚೈಸಿ ಬಯಿಸಿದೆ. ಅದರಂತೆ ಮೊದಲು ಹುಡುಗಿಯರ ಜೆರ್ಸಿ ಬದಲಿಸಿದೆ. ಬಳಿಕ ಹುಡುಗರ ಜೆರ್ಸಿ ಬದಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಮೂಲಗಳು ತಿಳಿಸಿವೆ. ಹೊಸ ನಾಯಕ, ಹೊಸ ಜೆರ್ಸಿ, ಒಟ್ನಲ್ಲಿ ಮುಂಬೈ ಇಂಡಿಯನ್ಸ್ ಹೊಸ ಅವತಾರದಲ್ಲಿ ಈ ಸಲ ಲೀಗ್ ಆಡಲಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.