500-501 ವಿಕೆಟ್‌ ನಡುವೆ ನಡೆದಿದ್ದು ಅನೇಕ: ಅಶ್ವಿನ್ ಪತ್ನಿ ಪ್ರೀತಿ ಭಾವನಾತ್ಮಕ ಪೋಸ್ಟ್

Published : Feb 19, 2024, 04:43 PM ISTUpdated : Feb 19, 2024, 04:59 PM IST
500-501 ವಿಕೆಟ್‌ ನಡುವೆ ನಡೆದಿದ್ದು ಅನೇಕ: ಅಶ್ವಿನ್ ಪತ್ನಿ ಪ್ರೀತಿ ಭಾವನಾತ್ಮಕ ಪೋಸ್ಟ್

ಸಾರಾಂಶ

ಅಶ್ವಿನ್ ಕುಟುಂಬದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ಇದುವರೆಗೂ ಯಾರಿಗೂ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಆದರೆ 48 ಗಂಟೆಯಲ್ಲಿ ಏನು ನಡೆಯಿತು ಎನ್ನುವುದರ ಸಾರಾಂಶವನ್ನು ಬಿಚ್ಚಿಟ್ಟಿದ್ದಾರೆ.

ರಾಜ್‌ಕೋಟ್(ಫೆ.19): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕ್ರೀಡೆ ಮೇಲಿನ ಬದ್ಧತೆಯನ್ನು ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಫ್ಯಾಮಿಲಿ ಎಮರ್ಜೆನ್ಸಿ ಕಾರಣದಿಂದ ತಂಡ ತೊರೆದು ಮರುದಿನ ಮತ್ತೆ ತಂಡ ಕೂಡಿಕೊಂಡಿದ್ದರು. ರಾಜ್‌ಕೋಟ್ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲೇ ರವಿಚಂದ್ರನ್ ಅಶ್ವಿನ್ 500 ವಿಕೆಟ್ ಕ್ಲಬ್ ಸೇರಿದ್ದರು. ಇದಾದ ಬಳಿಕ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಕೂಡಾ ಪಾಲ್ಗೊಂಡಿದ್ದರು. ಆ ಬಳಿಕ ತುರ್ತಾಗಿ ತಮ್ಮ ತವರಿಗೆ ವಾಪಾಸ್ಸಾಗಿದ್ದರು. ಮತ್ತೆ ಒಂದೇ ದಿನದ ಬಳಿಕ ತಂಡ ಕೂಡಿಕೊಂಡು 501ನೇ ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅಶ್ವಿನ್ ಪತ್ನಿ ಪ್ರೀತಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಅಶ್ವಿನ್ ಕುಟುಂಬದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ಇದುವರೆಗೂ ಯಾರಿಗೂ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಆದರೆ 48 ಗಂಟೆಯಲ್ಲಿ ಏನು ನಡೆಯಿತು ಎನ್ನುವುದರ ಸಾರಾಂಶವನ್ನು ಬಿಚ್ಚಿಟ್ಟಿದ್ದಾರೆ.

ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ: ಧೋನಿ ನಾಯಕ, ಹಿಟ್‌ಮ್ಯಾನ್‌ಗಿಲ್ಲ ಸ್ಥಾನ..!

"ನಾವು ಹೈದರಾಬಾದ್‌ನಲ್ಲಿಯೇ 500 ವಿಕೆಟ್ ಬೆನ್ನತ್ತಿದ್ದೆವು. ಆದರೆ ಅಲ್ಲಿ ಸಾಧ್ಯವಾಗಲಿಲ್ಲ. ವೈಜಾಗ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು 499 ವಿಕೆಟ್ ಆಗಿದ್ದಾಗಲೇ ಒಂದು ಟನ್ ಸಿಹಿ ತಿಂಡಿಗಳನ್ನು ಖರೀದಿಸಿ ಮನೆಯಲ್ಲಿ ಎಲ್ಲರಿಗೂ ಹಂಚಿದೆವು. ಇನ್ನು 500ನೇ ವಿಕೆಟ್‌ ತುಂಬ ಸುಲಭವಾಗಿ ಬಂತು. ಆದರೆ 500 ಹಾಗೂ 501 ವಿಕೆಟ್‌ ನಡುವೆ ಸಾಕಷ್ಟು ನಡೆಯಿತು. ಆ 48 ಗಂಟೆಗಳ ನಡುವೆ ಸಾಕಷ್ಟು ನಡೆಯಿತು ಎಂದು ಅಶ್ವಿನ್‌ ಪತ್ನಿ ಪ್ರೀತಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಆದರೆ ಇದು 500, ಅದು 499. ಎಂತಹ ಅದ್ಭುತ ಸಾಧನೆ. ಎಂತಹ ಅದ್ಭುತ ವ್ಯಕ್ತಿ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ರವಿಚಂದ್ರನ್ ಅಶ್ವಿನ್ ನಿಮ್ಮ ಬಗ್ಗೆ ಹೆಮ್ಮೆಯಿದೆ. ನಾವು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಶುಕ್ರವಾರ ಜ್ಯಾಕ್‌ ಕ್ರಾವ್ಲಿ ವಿಕೆಟ್‌ ಪಡೆಯುವ ಮೂಲಕ ಅಶ್ವಿನ್‌ ಈ ಮಹತ್ತರ ಮೈಲಿಗಲ್ಲು(500 ವಿಕೆಟ್) ಸಾಧಿಸಿದರು. ಈ ಮೂಲಕ ಅವರು ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 9ನೇ ಬೌಲರ್‌. ಇದಕ್ಕೂ ಮೊದಲು ಶ್ರೀಲಂಕಾದ ಮುರಳೀಧರನ್‌(800), ಆಸ್ಟ್ರೇಲಿಯಾದ ಶೇನ್‌ ವಾರ್ನ್‌(708), ಇಂಗ್ಲೆಂಡ್‌ನ ಆ್ಯಂಡರ್‌ಸನ್‌(696), ಭಾರತದ ಅನಿಲ್ ಕುಂಬ್ಳೆ(619), ಇಂಗ್ಲೆಂಡ್‌ನ ಬ್ರಾಡ್‌(604), ಆಸ್ಟ್ರೇಲಿಯಾದ ಮೆಗ್ರಾಥ್‌(563), ವಿಂಡೀಸ್‌ನ ವಾಲ್ಶ್‌(519), ಆಸ್ಟ್ರೇಲಿಯಾದ ನೇಥನ್‌ ಲಯನ್‌(517) ಈ ಸಾಧನೆ ಮಾಡಿದ್ದಾರೆ.

ರವಿಚಂದ್ರನ್‌ ಅಶ್ವಿನ್ 500 ಟೆಸ್ಟ್‌ ವಿಕೆಟ್..! ದಿಗ್ಗಜರ ಸಾಲಿಗೆ ಸೇರಿದ ಸ್ಪಿನ್ ಮಾಂತ್ರಿಕ

ತಮ್ಮ 98ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಅಶ್ವಿನ್‌, ಅತಿ ವೇಗವಾಗಿ 500 ವಿಕೆಟ್‌ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನಿಯಾದರು. ಪಂದ್ಯಗಳ ಅಧಾರದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌(87 ಪಂದ್ಯ), ಎಸೆತಗಳ ಆಧಾರದಲ್ಲಿ ಆಸ್ಟ್ರೇಲಿಯಾದ ವೇಗಿ ಮೆಗ್ರಾಥ್‌(25528 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ. ಅಶ್ವಿನ್‌ 500 ವಿಕೆಟ್‌ ಮೈಲಿಗಲ್ಲಿಗೆ 25714 ಎಸೆತಗಳನ್ನು ಬಳಸಿಕೊಂಡರು. ಅಶ್ವಿನ್‌ ಭಾರತದ ಪರ ವೇಗವಾಗಿ 50, 100, 150, 200, 250, 300, 350, 400, 450, 500 ವಿಕೆಟ್‌ಗಳ ದಾಖಲೆಯನ್ನೂ ಬರೆದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!