ಪಿಚ್ ಕ್ಯುರೇಟರ್‌ಗಳಿಗೆ ತಂಡದ ಆಡಳಿತ ಬೇಡಿಕೆ ಪಿಚ್ ಹೀಗೇ ಇರಬೇಕು ಎಂದು ಒತ್ತಾಯಿಸಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೋಹಿತ್, ‘ಯಾವುದೇ ಕ್ರೀಡಾಂಗಣದ ಕ್ಯುರೇಟರ್‌ಗಳ ಬಳಿ ನಾವು ಪಿಚ್ ಬಗ್ಗೆ ಚರ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ರಾಜ್‌ಕೋಟ್(ಫೆ.19): ಪಿಚ್ ಯಾವುದೇ ಆಗಿರಲಿ, ನಮ್ಮ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಜಯಭೇರಿ ಬಾರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ‘ಸ್ಪಿನ್ ಸ್ನೇಹಿ ಪಿಚ್ ಸೇರಿ ಯಾವುದೇ ಪಿಚ್‌ಗಳಲ್ಲೂ ನಾವು ಗೆಲ್ಲಬಲ್ಲೆವು. ಹಲವು ವರ್ಷಗಳಿಂದ ನಾವು ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆದ್ದಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ’ ಎಂದರು.
ಪಿಚ್ ಕ್ಯುರೇಟರ್‌ಗಳಿಗೆ ತಂಡದ ಆಡಳಿತ ಬೇಡಿಕೆ ಪಿಚ್ ಹೀಗೇ ಇರಬೇಕು ಎಂದು ಒತ್ತಾಯಿಸಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೋಹಿತ್, ‘ಯಾವುದೇ ಕ್ರೀಡಾಂಗಣದ ಕ್ಯುರೇಟರ್‌ಗಳ ಬಳಿ ನಾವು ಪಿಚ್ ಬಗ್ಗೆ ಚರ್ಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
undefined
Breaking: 122 ರನ್‌ಗೆ ಇಂಗ್ಲೆಂಡ್ ಆಲೌಟ್, ಟೆಸ್ಟ್ ಇತಿಹಾಸದ ಅತಿದೊಡ್ಡ ಗೆಲುವು ಕಂಡ ಭಾರತ!
ಚೆನ್ನೈಗೆ ತೆರಳಿದ್ದ ಅಶ್ವಿನ್ 4ನೇ ದಿನದಾಟಕ್ಕೆ ಹಾಜರ್
ರಾಜ್‌ಕೋಟ್: ತಾಯಿಯ ಅನಾರೋಗ್ಯದ ಹಿನ್ನೆಲೆ ಶನಿವಾರ ಆಟಕ್ಕೆ ಗೈರಾಗಿ ಚೆನೈಗೆ ತೆರಳಿದ್ದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಭಾನುವಾರ ಚಹಾ ವಿರಾಮದ ನಂತರ ಮತ್ತೆ ಮೈದಾನಕ್ಕಿಳಿದರು. ಇದಕ್ಕೂ ಮುನ್ನ ನಾಲ್ಕನೇ ದಿನದಾಟದಲ್ಲಿ ಅಶ್ವಿನ್ ಹಾಜರಿಯನ್ನು ಬಿಸಿಸಿಐ ಖಾತರಿಪಡಿಸಿತ್ತು. ಅಶ್ವಿನ್ ಪ್ರಯಾಣಕ್ಕೆ ಬೇಕಿದ್ದ ಎಲ್ಲಾ ವ್ಯವಸ್ಥೆಯನ್ನು ಬಿಸಿಸಿಐ ಕಲ್ಪಿಸಿತ್ತು ಎಂದು ತಿಳಿದುಬಂದಿದೆ.
ಡಬ್ಲ್ಯುಟಿಸಿ ರ್‍ಯಾಂಕಿಂಗ್ : 2ನೇ ಸ್ಥಾನದಲ್ಲೇ ಭಾರತ
ದುಬೈ: 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಕಾಯ್ದುಕೊಂಡಿದೆ. ಈ ವರೆಗೂ ಆಡಿರುವ ಒಟ್ಟು 7 ಪಂದ್ಯಗಳಲ್ಲಿ 4 ಜಯ, 2 ಸೋಲು, 1 ಡ್ರಾ ಸಾಧಿಸಿ 59.52% ಗೆಲುವಿನ ಪ್ರತಿಶತ ಹೊಂದಿದೆ. 75.00 ಗೆಲುವಿನ ಪ್ರತಿಶತ ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.
Ranji Trophy: ರಾಜ್ಯಕ್ಕೆ ಇನ್ನಿಂಗ್ಸ್ ಜಯದ ಗುರಿ!
ಭಾರತದ ವಿರುದ್ಧ ಸತತ 2 ಟೆಸ್ಟ್‌ಗಳಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್ 8ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿದ್ದು, 6ನೇ ಸ್ಥಾನದಲ್ಲಿ ವೆಸ್ಟ್‌ಇಂಡೀಸ್, 7ರಲ್ಲಿ ದ.ಆಫ್ರಿಕಾ, 9ನೇ ಸ್ಥಾನದಲ್ಲಿ ಶ್ರೀಲಂಕಾ ತಂಡ ಇದೆ.
ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಮೈಕ್ ಪ್ರೊಕ್ಟರ್ ನಿಧನ
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಮೈಕ್ ಪ್ರೊಕ್ಟರ್ (77) ಭಾನುವಾರ ನಿಧನರಾಗಿದ್ದಾರೆ. ಹೃದಯ ಸ್ಥಂಭನದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಮರಿಯಾನಾ ಖಚಿತಪಡಿಸಿದ್ದಾರೆ.ಚತುರ ನಾಯಕತ್ವದಿಂದ ಹೆಸರಾಗಿದ್ದ ಅವರು, ಆಫ್ರಿಕಾ ತಂಡದಲ್ಲಿ ಸ್ಪಿನ್ನರ್ ಹಾಗೂ ಸ್ಫೋಟಕ ಬ್ಯಾಟರ್ ಆಗಿ ಮಿಂಚಿದ್ದರು.
401 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, ದಕ್ಷಿಣ ಆಫ್ರಿಕಾ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ 1970-80ರ ಅವಧಿಯಲ್ಲಿ ಕೇವಲ 7 ಟೆಸ್ಟ್‌ಗಳನ್ನಾಡಲು ಮಾತ್ರ ಸಾಧ್ಯವಾಗಿತ್ತು. ಪ್ರೊಕ್ಟರ್ ಹಲವು ವರ್ಷಗಳ ಕಾಲ ಐಸಿಸಿ ಮ್ಯಾಚ್ ರೆಫ್ರಿಯಾಗಿ ಸಹ ಕಾರ್ಯನಿರ್ವಹಿಸಿದ್ದರು. ದಿಗ್ಗಜ ಆಲ್ರೌಂಡರ್ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸಿದೆ.