
ಕೋಲ್ಕತಾ: ಪಂಜಾಬ್ ಕಿಂಗ್ಸ್‌ನ ಹ್ಯಾಟ್ರಿಕ್ ಗೆಲುವಿನ ಆಸೆಗೆ ಮಳೆ ತಣ್ಣೀರೆರೆಚಬಹುದು. ಅದೇ ರೀತಿ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಹ್ಯಾಟ್ರಿಕ್ ಸೋಲಿನಿಂದ ಪಾರು ಮಾಡಬಹುದು ಕೂಡ. ಸೋಮವಾರ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರಸ್ಪರ ಎದುರಾಗಬೇಕಿದೆ. ಆದರೆ, ಕೋಲ್ಕತಾದಲ್ಲಿ ಭಾನುವಾರ ಮಳೆ ಸುರಿದ ಕಾರಣ, ಇಡೀ ಕ್ರೀಡಾಂಗಣಕ್ಕೆ ಹೊದಿಕೆ ಹೊದಿಸಲಾಗಿತ್ತು. ಸೋಮವಾರವೂ ಮಳೆ ಮುನ್ಸೂಚನೆ ಇದ್ದು ಪಂದ್ಯಕ್ಕೆ ಅಡ್ಡಿಯಾಗಬಹುದು.
ಎರಡೂ ತಂಡಗಳ ಬಲಾಬಲ ನೋಡಿದಾಗ, ಪಂಜಾಬ್ ಅತ್ಯಂತ ಸಮತೋಲನದಿಂದ ಕೂಡಿದೆ. ಆಡಿರುವ ಎರಡು ಪಂದ್ಯಗಳಲ್ಲೂ ಸಂಘಟಿತ ಪ್ರದರ್ಶನ ತೋರಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಮತ್ತೊಂದೆಡೆ ಕೆಕೆಆರ್, ಬ್ಯಾಟಿಂಗ್‌ನಲ್ಲಿ ತಕ್ಕಮಟ್ಟಿಗೆ ಮಿಂಚಿದರೂ ಬೌಲಿಂಗ್ ದುರ್ಬಲವಾಗಿದೆ. ಪ್ರಮುಖವಾಗಿ ಸುನಿಲ್ ನರೇನ್ ಹಾಗೂ ವರುಣ್ ಚಕ್ರವರ್ತಿ ದುಬಾರಿ ಆಗುತ್ತಿರುವುದು ತಂಡಕ್ಕೆ ಬಹುದೊಡ್ಡ ತಲೆನೋವು ತಂದೊಡ್ಡಿದೆ. ಜೊತೆಗೆ ಗುಣಮಟ್ಟದ ವೇಗಿಗಳ ಕೊರತೆಯೂ ತಂಡಕ್ಕಿದ್ದು, ಇದು ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿಸುತ್ತಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕವೇ ಫೈನಲ್ ಪ್ರವೇಶಿಸಿದ್ದ ಪಂಜಾಬ್ ಕಿಂಗ್ಸ್, ಅದೇ ಲಯವನ್ನು 19ನೇ ಸೀಸನ್‌ನ ಐಪಿಎಲ್‌ನಲ್ಲೂ ಮುಂದುವರೆಸಿದೆ. ಪಂದ್ಯಕ್ಕೆ ಮಳೆ ಅನುವು ಮಾಡಿಕೊಟ್ಟು, ಪಂದ್ಯ ನಡೆದರೆ ಪಂಜಾಬ್ ಗೆಲ್ಲುವ ಫೇವರಿಟ್ ಎನಿಸಿಕೊಂಡು ಕಣಕ್ಕಿಳಿಯಲಿದೆ.
ಪಂಜಾಬ್ ತಂಡದಲ್ಲಿ ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾನ್ಶ್ ಆರ್ಯ, ಕೂಪರ್ ಕಾನೊಲಿ ನಾಯಕ ಶ್ರೇಯಸ್ ಅಯ್ಯರ್ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಕನ್ನಡದ ವೇಗಿ ವೈಶಾಕ್ ವಿಜಯ್‌ಕುಮಾರ್, ಅರ್ಶದೀಪ್ ಸಿಂಗ್ ಒಳ್ಳೆಯ ಲಯದಲ್ಲಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್: ಫಿನ್ ಅಲೆನ್, ಅಜಿಂಕ್ಯ ರಹಾನೆ, ಅಂಗ್‌ಕ್ರಿಷ್ ರಘುವಂಶಿ(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ರಿಂಕು ಸಿಂಗ್, ರಮಣ್‌ದೀಪ್ ಸಿಂಗ್, ಅಂಕುಲ್ ರಾಯ್, ಸುನಿಲ್ ನರೈನ್, ಕಾರ್ತಿಕ್ ತ್ಯಾಗಿ, ವೈಭವ್ ಅರೋರ, ವರಣ್ ಚಕ್ರವರ್ತಿ.
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಪ್ರಿಯಾನ್ಶ್ ಆರ್ಯ, ಕೂಪರ್ ಕಾನೊಲಿ, ಶ್ರೇಯಸ್ ಅಯ್ಯರ್(ನಾಯಕ), ನೆಹಾಲ್ ವದೇರಾ, ಮಾರ್ಕಸ್ ಸ್ಟೋನಿಸ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸನ್, ಅರ್ಶದೀಪ್ ಸಿಂಗ್, ವೈಶಾಕ್ ವಿಜಯ್‌ಕುಮಾರ್, ಕ್ಸೇವಿಯರ್ ಬಾರ್ಟ್ಲೆಟ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.