Asia Cup 2022 ರಾಹುಲ್ ದ್ರಾವಿಡ್ ಕೋಚ್ ಹನಿಮೂನ್‌ ಅವಧಿ ಮುಗಿದಿದೆ: ಸಾಬಾ ಕರೀಮ್‌

By Naveen KodaseFirst Published Sep 10, 2022, 1:27 PM IST
Highlights

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲೇ ಹೊರಬಿದ್ದ ಟೀಂ ಇಂಡಿಯಾ 
ಇದರ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಮೇಲೆ ಹೆಚ್ಚುತ್ತಿದೆ ಒತ್ತಡ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ

ನವದೆಹಲಿ(ಸೆ.10): ಮುಂಬರುವ ಅಕ್ಟೋಬರ್ ಮಧ್ಯಭಾಗದಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಟೂರ್ನಿಯಲ್ಲಿಯೇ ಭಾರತ ಕ್ರಿಕೆಟ್ ತಂಡದ ಪಾಲಿಗೆ ಎಚ್ಚರಿಕೆಯ ಕರೆಘಂಟೆ ಮೊಳಗಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯಲ್ಲಿನ ಸೂಪರ್‌ 4 ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಎದುರು ಸತತ ಸೋಲು ಅನುಭವಿಸುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿದೆ. ಇದೀಗ ರಾಹುಲ್ ದ್ರಾವಿಡ್‌ ಕೋಚ್‌ ಮೇಲೆ ಪ್ರಶ್ನೆಗಳು ಏಳಲಾರಂಭಿಸಿವೆ.

2021ರಲ್ಲಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದ ಬಳಿಕ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಇದೀಗ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ರಾಹುಲ್‌ ದ್ರಾವಿಡ್‌, ನಿರೀಕ್ಷೆಯ ಭಾರಕ್ಕೆ ಒತ್ತಡಕ್ಕೆ ಸಿಲುಕಿದಂತೆ ಕಂಡು ಬರುತ್ತಿದೆ.  ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸಾಬಾ ಕರೀಮ್, ಇದೀಗ ರಾಹುಲ್ ದ್ರಾವಿಡ್ ಅವರ ಕೋಚ್ ಹನಿಮೂನ್ ಅವಧಿ ಮುಗಿದಿದೆ ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರಿಗೂ ತಮ್ಮ ಕೋಚ್ ಹನಿಮೂನ್ ಅವಧಿ ಮುಗಿದಿದೆ ಎಂದು ತಿಳಿದಿದೆ. ಹೀಗಾಗಿ ತಂಡದಿಂದ ಅತ್ಯುತ್ತಮ ಫಲಿತಾಂಶ ಹೊರತರಲು ಶ್ರಮಿಸುತ್ತಿದ್ದಾರೆ. ಇದು ರಾಹುಲ್ ದ್ರಾವಿಡ್ ಪಾಲಿಗೆ ಅತ್ಯಂತ ನಿರ್ಣಾಯಕ ಘಟ್ಟ. ಮುಂದೆ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹೀಗೆ ಎರಡು ಮಹತ್ವದ ಐಸಿಸಿ ಟೂರ್ನಿಗಳನ್ನು ಆಡುವುದಿದೆ. ಒಂದು ವೇಳೆ ಈ ಎರಡು ಟೂರ್ನಿಗಳನ್ನು ಜಯಿಸಿದರಷ್ಟೇ ರಾಹುಲ್ ದ್ರಾವಿಡ್ ಅವರು ತೃಪ್ತರಾಗಲಿದ್ದಾರೆ ಎಂದು ಸಾಬಾ ಕರೀಂ ಸ್ಪೋರ್ಟ್ಸ್‌ 18 ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್ ಅವರೊಬ್ಬ ಕ್ರಿಯಾಶೀಲ ಹಾಗೂ ಬುದ್ದಿವಂತ ವ್ಯಕ್ತಿಯಾಗಿದ್ದು, ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವನ್ನು ಜಯಿಸಿದಾಗ, ಸೆನಾ ರಾಷ್ಟ್ರಗಳ ಎದುರು ಟೆಸ್ಟ್ ಸರಣಿಯನ್ನು ಗೆಲ್ಲುವುದಾಗಿದೆ. ಆಗ ಮಾತ್ರ ರಾಹುಲ್ ದ್ರಾವಿಡ್ ಅವರನ್ನು ಭಾರತದ ಯಶಸ್ವಿ ಕೋಚ್ ಎನ್ನಬಹುದು. ನಾನು ಟೆಸ್ಟ್ ಗೆಲುವುಗಳ ಬಗ್ಗೆ ಅಷ್ಟೇನು ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ರಾಹುಲ್ ದ್ರಾವಿಡ್‌ ಆಡುತ್ತಿದ್ದಾಗಲೂ ಟೆಸ್ಟ್ ಗೆಲುವುಗಳನ್ನು ವಿದೇಶಿ ನೆಲದಲ್ಲಿ ಕಂಡಿದೆ.  ಆದರೆ ಸೆನಾ ರಾಷ್ಟ್ರಗಳಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಸರಣಿಗಳನ್ನು ಗೆಲ್ಲಬೇಕಿದೆ ಎಂದು ಸಾಬಾ ಕರೀಮ್ ಹೇಳಿದ್ದಾರೆ.

Asia Cup 2022 ಶತಕ ಸಿಡಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಖಡಕ್ ವಾರ್ನಿಂಗ್ ನೀಡಿದ ವಿರಾಟ್ ಕೊಹ್ಲಿ..!

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿಯೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇನ್ನು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಹಲವು ದ್ವಿಪಕ್ಷೀಯ ಸರಣಿಗಳನ್ನು ಜಯಿಸಿದೆ. ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಟೂರ್ನಿಯು ಭಾರತದ ಪಾಲಿಗೆ ಒಂದು ರೀತಿ ರಿಹರ್ಸಲ್‌ ಸರಣಿ ಎನಿಸಿತ್ತು. ಆದರೆ ಭಾರತ ತಂಡವು ಏಷ್ಯಾಕಪ್ ಫೈನಲ್ ಪ್ರವೇಶಿಸಲು ಯಶಸ್ವಿಯಾಗದೇ ನಿರಾಸೆ ಅನುಭವಿಸಿದೆ.

click me!