ವಿಶ್ವಕಪ್‌ಗೂ ಮುನ್ನ ಗುಡ್‌ ನ್ಯೂಸ್: ಕೊನೆಗೂ ಕೋಚ್ ದ್ರಾವಿಡ್ ಪ್ರಯೋಗಕ್ಕೆ ಸಿಕ್ಕಿತು ಫಲ..!

By Suvarna NewsFirst Published Aug 10, 2023, 5:35 PM IST
Highlights

ಶ್ರೇಯಸ್ ಫಿಟ್ ಆಗದಿದ್ದರೆ ಒನ್​ಡೇ ಕ್ರಿಕೆಟ್​ಗೆ ನಂಬರ್ 4 ಸ್ಲಾಟ್​ಗೆ ಒಬ್ಬ ಬ್ಯಾಟರ್ ಬೇಕಿತ್ತು. ಅದರಲ್ಲೂ ಎಡಗೈ ಬ್ಯಾಟರ್ ಆಗಿದ್ದರೆ ಉತ್ತಮ ಅನ್ನೋದು ದ್ರಾವಿಡ್ ಅನಿಸಿಕೆಯಾಗಿತ್ತು. ಹೀಗಾಗಿ ಟಿ20ಯಲ್ಲಿ ನಂಬರ್ 4 ಸ್ಲಾಟ್​​​ನಲ್ಲಿ ತಿಲಕ್ ವರ್ಮಾಗೆ ಚಾನ್ಸ್ ಕೊಟ್ಟರು. ಕೊಟ್ಟ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ತಿಲಕ್​, ಮೂರು ಮ್ಯಾಚ್​​ನಲ್ಲೂ ಮಿಂಚಿದ್ರು.

ಬೆಂಗಳೂರು(ಆ.10) ಏಕದಿನ ವಿಶ್ವಕಪ್​ಗೆ ಇನ್ನೆರಡು ತಿಂಗಳು ಬಾಕಿ ಇದೆ. ಆದ್ರೂ ಟೀಂ ಇಂಡಿಯಾ ಇನ್ನೂ ರೆಡಿಯಾಗಿಲ್ಲ. ಏಷ್ಯಾಕಪ್​ನಲ್ಲೂ ಕೋರ್ ಟೀಂ​ ಆಡುವ ನಿರೀಕ್ಷೆಗಳಿಲ್ಲ. ಯಾಕಂದ್ರೆ ಕೆಎಲ್ ರಾಹುಲ್ ಫಿಟ್ ಆಗಿದ್ದು ಏಷ್ಯಾಕಪ್ ಆಡಲಿದ್ದಾರೆ ಅಂತ ಹೇಳಿದ್ರೆ, ಶ್ರೇಯಸ್ ಅಯ್ಯರ್ ಡೌಟ್ ಅನ್ನೋ ಸುದ್ದಿಗಳು ಬಂದಿವೆ. ಈಗ ಶ್ರೇಯಸ್ ಫಿಟ್ ಆಗದಿದ್ದರೆ ಏಷ್ಯಾಕಪ್​ನಲ್ಲಿ ನಂಬರ್ 4 ಸ್ಲಾಟ್​ನಲ್ಲಿ ಯಾರು ಆಡ್ತಾರೆ. ವಿಶ್ವಕಪ್ ವೇಳೆಗೂ ಅಯ್ಯರ್​ ಫಿಟ್ ಆಗಲಿಲ್ಲ ಅಂದ್ರೆ ಅಲ್ಲೂ 4ನೇ ಕ್ರಮಾಂಕಕ್ಕೆ ಖಾಲಿ ಇರಲಿದೆ. ಆ ಪ್ಲೇಸ್​​ನಲ್ಲಿ ಆಡೋರು ಯಾರು..? ಈ ಎಲ್ಲಾ ಪ್ರಶ್ನೆಗಳಿಗೆ ಕೋಚ್ ರಾಹುಲ್ ದ್ರಾವಿಡ್ ಉತ್ತರ ಕಂಡು ಹಿಡಿದಿದ್ದಾರೆ. ಆ ಉತ್ತರವೇ ತಿಲಕ್ ವರ್ಮಾ.

ಒನ್​ಡೇ ಕ್ರಿಕೆಟ್​ನಲ್ಲಿ ನಂ. 4 ಸ್ಲಾಟ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಸಾಕಷ್ಟು ಆಟಗಾರರು ವಿಫಲರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav)​​ನನ್ನ ಒನ್​ಡೇಯಲ್ಲೂ 4ನೇ ಕ್ರಮಾಂಕದಲ್ಲಿ ಆಡಿಸಿ ಪ್ರಯೋಗ ಮಾಡಲಾಯ್ತು. ಆದ್ರೆ ಆಸ್ಟ್ರೇಲಿಯಾ ವಿರುದ್ಧ ಮೂರು ಗೋಲ್ಡನ್ ಡಕೌಟ್ ಆದ ಸೂರ್ಯ, ವೆಸ್ಟ್ ಇಂಡೀಸ್​​​ ಒನ್​ಡೇಯಲ್ಲೂ ವಿಫಲರಾದ್ರು. ಆಗ ಕೋಚ್ ರಾಹುಲ್ ದ್ರಾವಿಡ್ (Rahul Dravid) ತಲೆಯಲ್ಲಿ ಹೊಳೆದಿದ್ದೇ ಎಡಗೈ ಬ್ಯಾಟರ್ ತಿಲಕ್ ವರ್ಮಾ ಹೆಸರು.

Latest Videos

Asia Cup 2023: ಏಷ್ಯಾಕಪ್ ಟೂರ್ನಿಗೆ ಆತಿಥೇಯ ಪಾಕಿಸ್ತಾನ ತಂಡ ಪ್ರಕಟ..! ಸ್ಟಾರ್ ಕ್ರಿಕೆಟಿಗರಿಗೆ ಸ್ಥಾನ

ನಂ.4 ಸ್ಲಾಟ್​ನಲ್ಲಿ ತಿಲಕ್ ವರ್ಮಾರನ್ನು ಆಡಿಸಿದ ರಾಹುಲ್ ದ್ರಾವಿಡ್

ಟಿ20 ಕ್ರಿಕೆಟ್​ನಲ್ಲಿ ನಂಬರ್ 4 ಸ್ಲಾಟ್​ನಲ್ಲಿ ರನ್ ಹೊಳೆಯನ್ನೇ ಹರಿಸಿ ಎರಡು ಶತಕ ಹೊಡೆದಿರುವ ಸೂರ್ಯಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ ಆ ಸ್ಲಾಟ್​ನಲ್ಲಿ ತಿಲಕ್ ವರ್ಮಾರನ್ನ ಆಡಿಸಿದ್ರು ದ್ರಾವಿಡ್. ಕಾರಣ ಶ್ರೇಯಸ್ ಫಿಟ್ ಆಗದಿದ್ದರೆ ಒನ್​ಡೇ ಕ್ರಿಕೆಟ್​ಗೆ ನಂಬರ್ 4 ಸ್ಲಾಟ್​ಗೆ ಒಬ್ಬ ಬ್ಯಾಟರ್ ಬೇಕಿತ್ತು. ಅದರಲ್ಲೂ ಎಡಗೈ ಬ್ಯಾಟರ್ ಆಗಿದ್ದರೆ ಉತ್ತಮ ಅನ್ನೋದು ದ್ರಾವಿಡ್ ಅನಿಸಿಕೆಯಾಗಿತ್ತು. ಹೀಗಾಗಿ ಟಿ20ಯಲ್ಲಿ ನಂಬರ್ 4 ಸ್ಲಾಟ್​​​ನಲ್ಲಿ ತಿಲಕ್ ವರ್ಮಾಗೆ ಚಾನ್ಸ್ ಕೊಟ್ಟರು. ಕೊಟ್ಟ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ತಿಲಕ್​, ಮೂರು ಮ್ಯಾಚ್​​ನಲ್ಲೂ ಮಿಂಚಿದ್ರು.

ಮೂರು ಪಂದ್ಯದಲ್ಲೂ ತಿಲಕ್ ಆರ್ಭಟ..!

ಮೊದಲ ಪಂದ್ಯದಲ್ಲಿ 39 ರನ್ ಗಳಿಸಿದ್ದ ತಿಲಕ್ ವರ್ಮಾ (Tilak Verma), 2ನೇ ಪಂದ್ಯದಲ್ಲಿ ಹಾಫ್ ಸೆಂಚುರಿ ಹೊಡೆದು ಮಿಂಚಿದ್ರು. ಆ ಅರ್ಧಶತಕವನ್ನ ಮಾತು ಕೊಟ್ಟಂತೆ ರೋಹಿತ್ ಶರ್ಮಾ ಪುತ್ರಿಗೆ ಅರ್ಪಿಸಿದ್ರು. ಇನ್ನು 3ನೇ ಟಿ20 ಮ್ಯಾಚ್​ನಲ್ಲಿ ಅಜೇಯ 49 ರನ್ ಹೊಡೆಯುವ ಮೂಲಕ ಸತತ ಎರಡು ಸೋಲು ಕಂಡಿದ್ದ ಟೀಂ ಇಂಡಿಯಾವನ್ನ ಗೆಲುವಿನ ಹಳಿಗೆ ಮರಳಿಸಿದ್ರು. 3 ಮ್ಯಾಚ್​ನಿಂದ 139ರ ಸ್ಟ್ರೈಕ್​ರೇಟ್​​ನಲ್ಲಿ 139 ರನ್ ಹೊಡೆದ ತಿಲಕ್, ರಾಹುಲ್ ದ್ರಾವಿಡ್ ಮನಸ್ಸು ಗೆದ್ದಿದ್ದಾರೆ.

ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಏಷ್ಯಾಕಪ್​ ​ನಂ.4 ಸ್ಲಾಟ್​ನಲ್ಲಿ ಆಡ್ತಾರಾ ತಿಲಕ್​..?

ಒನ್​ಡೇಯಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ನಂಬುವ ಹಾಗಿಲ್ಲ. ಏಷ್ಯಾಕಪ್​ಗೆ ಶ್ರೇಯಸ್ ಅಯ್ಯರ್(Shreyas Iyer) ಫಿಟ್ ಆಗೋದು ಅನುಮಾನ. ಹೀಗಾಗಿ ತಿಲಕ್​​ ವರ್ಮಾಗೆ ಒನ್​ಡೇಯಲ್ಲೂ ಸ್ಥಾನ ಸಿಗುವ ಸಾಧ್ಯತೆ ಇದೆ. ಎಡಗೈ ಬ್ಯಾಟರ್​​ ಮಿಡಲ್ ಆರ್ಡರ್​​ನಲ್ಲಿ ಆಡಿದ್ರೆ ತಂಡದ ಬ್ಯಾಟಿಂಗ್​​ ಸ್ಟ್ರಾಂಗ್ ಆಗಲಿದೆ. ಹೀಗಾಗಿ ಒನ್​ಡೇಯಲ್ಲೂ ತಿಲಕ್ ಸ್ಥಾನ ಪಡೆಯಲಿದ್ದಾರೆ. ಏಷ್ಯಾಕಪ್​ನಲ್ಲಿ (Asia Cup 2023) ತಿಲಕ್ ಕ್ಲಿಕ್ ಆದ್ರೆ ಒನ್​ಡೇ ವರ್ಲ್ಡ್​ಕಪ್​ ಆಡೋದು ಪಕ್ಕಾ. ಅಲ್ಲಿಗೆ ಟೀಮ್​​ನಲ್ಲಿ ಲೆಫ್ಟಿ ಬ್ಯಾಟರ್ ಕೊರತೆಯನ್ನ ತಿಲಕ್​-ಜಡೇಜಾ ನೀಗಿಸಲಿದ್ದಾರೆ.

click me!