ಗ್ಯಾಲರಿಯಲ್ಲಿ ಕುಳಿತ ಪತ್ನಿಗೆ ಗಾಳಿಯಲ್ಲಿ ಸಿಹಿ ಮುತ್ತು ನೀಡಲ್ಲ, ಕಾರಣ ಬಿಚ್ಚಿಟ್ಟ ಆರ್ ಅಶ್ವಿನ್!

By Chethan Kumar  |  First Published Dec 24, 2024, 5:29 PM IST

ಗ್ಯಾಲರಿಯಲ್ಲಿ ಕುಳಿತಿರುವ ಪತ್ನಿಗೆ ಗಾಳಿಯಲ್ಲಿ ಸಿಹಿ ಮುತ್ತು ನೀಡುವುದಿಲ್ಲ ಎಂದು ಇತ್ತೀಚೆಗೆ ನಿವೃತ್ತಿಯಾದ ಕ್ರಿಕೆಟಿಗ ಆರ್ ಅಶ್ವಿನ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
 


ಚೆನ್ನೈ(ಡಿ.24) ಟೀಂ ಇಂಡಿಯಾ ಕ್ರಿಕೆಟಿಗ ಆರ್ ಅಶ್ವಿನ್ ವಿದಾಯ ಹೇಳಿದ ಬಳಿಕ ಡ್ರೆಸ್ಸಿಂಗ್ ರೂಂ, ವೈಯುಕ್ತಿಕ ಬದಕು ಸೇರಿದಂತೆ ಹಲವು ಕುತೂಹಲ ಘಟನೆಗಳು ಹೊರಬರುತ್ತಿದೆ. ಇದೀಗ ಆರ್ ಅಶ್ವಿನ್ ಸಂದರ್ಶನ ಒಂದರಲ್ಲಿ ಮೈದಾನದಲ್ಲಿನ ಸಂಭ್ರಮಾಚರಣೆ, ಪತ್ನಿಗೆ ಗಾಳಿಯಲ್ಲಿ ಸಿಹಿ ಮುತ್ತು ನೀಡುವ ಪದ್ಧತಿ ಸೇರಿದಂತೆ ಹಲಲವು ವಿಚಾರಗಳ ಕುರಿತು ಮಾತಾಡಿದ್ದಾರೆ. ಈ ಪೈಕಿ ಪತ್ನಿ ಗ್ಯಾಲರಿಯಲ್ಲಿ ಅಥವಾ ಹಾಸ್ಪಿಟಾಲಿಟಿ ಬಾಕ್ಸ್‌ನಲ್ಲಿ ಕುಳಿತಿದ್ದರೆ ಆಕೆಗೆ  ಮೈದಾನದಿಂದ ಗಾಳಿಯಲ್ಲಿ ಸಿಹಿ ಮುತ್ತು ನಾನು ನೀಡುವುದಿಲ್ಲ ಎಂದಿದ್ದಾರೆ. ಹಲವು ಕ್ರಿಕಿಟಗರು ತಮ್ಮ ಸಂಗಾತಿಗೆ ಮೈದಾನದಿಂದಲೇ ಕಿಸ್ ನೀಡುತ್ತಾರೆ. ಆದರೆ ನಾನು ಹಾಗೇ ಮಾಡುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.

ಪ್ರಮುಖವಾಗಿ ಆರ್ ಅಶ್ವಿನ್ ತಮ್ಮ ಮೈಲಿಗಲ್ಲುಗಳ ಸಂಭ್ರಮಾಚರಣೆ ವಿಚಾರದಲ್ಲಿ ಈ ಮಾತು ಹೇಳಿದ್ದಾರೆ. ನಾನು ಅತೀಯಾಗಿ ಸಂಭ್ರಮಿಸುವುದಿಲ್ಲ. ಹಾಗಂತ ನಾನು ಗಂಭೀರ ವ್ಯಕ್ತಿಯಲ್ಲ ಎಂದಿದ್ದಾರೆ. ಹಲವು ಬಾರಿ ಅಶ್ವಿನ್ ವಿಕೆಟ್ ಪಡೆದಾಗ, ಅಶ್ವಿನ್‌ಗಿಂತ ವಿರಾಟ್ ಕೊಹ್ಲಿ ಹೆಚ್ಚು ಸಂಭ್ರಮಿಸುವುದನ್ನು ಎಲ್ಲರು ನೋಡಿರುತ್ತಾರೆ. ಕೊಹ್ಲಿಯಂತ ಆರ್ ಅಶ್ವಿನ್ ಸಂಭ್ರಮಾಚರಣೆ ಮಾಡುವುದಿಲ್ಲ ಅನ್ನೋ ಮಾತುಗಳಿಗೆ ಅಶ್ವಿನ್ ಉತ್ತರಿಸಿದ್ದಾರೆ. 

Tap to resize

Latest Videos

undefined

 ಅಶ್ವಿನ್ ನಿವೃತ್ತಿ ಬೆನ್ನಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಕನ್ನಡಿಗ!

ಎಷ್ಟು ಬಾರಿ ನಾನು 5 ವಿಕೆಟ್ ಕಬಳಿಸಿದಾಗ ಅಥವಾ ಬ್ಯಾಟಿಂಗ್‌ನಲ್ಲಿ ಮೈಲಿಗಲ್ಲು ಸಾಧಿಸಿದಾಗ ನಾನು ಡ್ರೆಸ್ಸಿಂಗ್ ರೂಂನಲ್ಲಿ ಅಥವಾ ಹಾಸ್ಪಿಟಾಲಿಟಿ ಬಾಕ್ಸ್‌ನಲ್ಲಿ ಕುಳಿತಿರುವ ನನ್ನ ಪತ್ನಿಗೆ ಮುತ್ತಿಕ್ಕುವುದಿಲ್ಲ. ಈ ರೀತಿ ನಾನು ಸಂಭ್ರಮಿಸುವುದಿಲ್ಲ. ನನ್ನ ಕೈಯಲ್ಲಿ ಬಾಲ್ ಇರುವಾಗ ಮುಂದಿನ ವಿಕೆಟ್, ಪಂದ್ಯವನ್ನು ಗೆಲ್ಲುವುದು ಮುಖ್ಯವಾಗುತ್ತದೆ. ಆದರೆ ವಿಕೆಟ್ ಬಿದ್ದಾಗ ಸಂಭ್ರಮಾಚರಣೆ ಪ್ರಮುಖವಾಗುವುದಿಲ್ಲ. ಎಲ್ಲರ ಜೊತೆ ನಾನು ಸಂಭ್ರಮಿಸುತ್ತೇನೆ. ಆದರೆ ಅತಿಯಾಗ ಸಂಭ್ರಮ ಇರುವುದಿಲ್ಲ. ಕೊನೆಯ ವಿಕೆಟ್ ಉರುಳಿಸುವ ತನಕ ಹೆಚ್ಚಿನ ಸಂಭ್ರಮ ಇರುವುದಿಲ್ಲ ಎಂದಿದ್ದಾರೆ.

ಅಶ್ವಿನ್ ಮೇಲಿರುವ ಕೆಲ ತಪ್ಪು ಕಲ್ಪನೆ ಅನ್ನೋ ವಿಚಾರದ ಕುರಿತು ಅಶ್ವಿನ್ ಈ ಮಾತುಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೈದಾನದಲ್ಲಿ ನಾನು ಹೇಗೆ ಸಂಭ್ರಮಿಸುತ್ತೇನೆ, ಹೇಗಿರುತ್ತೇನೆ ಅನ್ನೋದರ ಮೇಲೆ ಅಭಿಮಾನಿಗಳು ನಿರ್ಧರಿಸುತ್ತಾರೆ. ಆದರೆ ಅಷ್ಟು ಗಂಭೀರ ವ್ಯಕ್ತಿ ನಾನನಲ್ಲ ಎಂದು ಅಶ್ವಿನ್ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಬಯಸಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ. ಭಾರತಕ್ಕಾಗಿ ನಾನು ಆಡುತ್ತಿದ್ದೇನೆ. ಟೆಸ್ಟ್ ಮ್ಯಾಚ್ ಗೆಲ್ಲಿಸಬೇಕು.ಅತ್ಯುತ್ತಮ ಪ್ರದರ್ಶನ ಮೂಲಕ ಎದುರಾಳಿಯನ್ನು ಮಣಿಸಬೇಕು ಅನ್ನೋದು ಮೂಲ ಮಂತ್ರವಾಗಿರುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ.

ಆರ್ ಅಶ್ವಿನ್ 106 ಟೆಸ್ಟ್ ಪಂದ್ಯವಾಡಿದ್ದಾರೆ. ಬರೋಬ್ಬರಿ 537 ವಿಕೆಟ್ ಕಬಳಿಸಿದ್ದಾರೆ. 59 ರನ್ ನೀಡಿ 7 ವಿಕೆಟ್ ಕಬಳಿಸಿರುವುದು ಟೆಸ್ಟ್‌ನಲ್ಲಿ ಆರ್ ಅಶ್ವಿನ್ ಬೆಸ್ಟ್ ಬೌಲಿಂಗ್. ಬರೋಬ್ಬರಿ 37 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.  ಬ್ಯಾಟಿಂಗ್‌ನಲ್ಲೂ ಆರ್ ಅಶ್ವಿನ್ ಕೊಡುಗೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 3503 ರನ್ ಸಿಡಿಸಿದ್ದಾರೆ. ವಿಶೇಷ ಅಂದರೆ 6 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 14 ಅರ್ಧಶತಕ ಸಿಡಿಸಿದ್ದಾರೆ. ಏಕದಿನದಲ್ಲಿ ಅಶ್ವಿನ್ 116 ಪಂದ್ಯ ಆಡಿದ್ದಾರೆ. ಈ ಮೂಲಕ 156 ವಿಕೆಟ್ ಪಡೆದಿದ್ದಾರೆ. 25 ರನ್ ನೀಡಿ 4 ವಿಕೆಟ್ ಕಬಳಿಸಿರುವುದು ಏಕದಿನದಲ್ಲಿ ಅಶ್ವಿನ್ ಬೆಸ್ಟ್ ಬೌಲಿಂಗ್.  ಟಿ20ಯಲ್ಲಿ 65 ಪಂದ್ಯ ಆಡಿರುವ ಆರ್ ಅಶ್ವಿನ್ 72 ವಿಕೆಟ್ ಕಬಳಿಸಿದ್ದಾರೆ. 8 ರನ್ ನೀಡಿ 4 ವಿಕೆಟ್ ಕಬಳಿಸಿರುವುದು ಟಿ20ಯಲ್ಲಿನ ಬೆಸ್ಟ್ ಬೌಲಿಂಗ್.  

'ಕ್ರೀಡಾ ರಾಯಭಾರಿಯಾಗಿ ನೀವು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದೀರಿ': ಅಶ್ವಿನ್ ಕೊಂಡಾಡಿದ ಪ್ರಧಾನಿ ಮೋದಿ

click me!