ರಾತ್ರಿ 10 ಪೆಗ್ ಏರಿಸಿ ಮರುದಿನ ಶತಕ ಸಿಡಿಸಿದ್ದ ವಿನೋದ್ ಕಾಂಬ್ಳಿ

By Roopa Hegde  |  First Published Dec 24, 2024, 1:22 PM IST

ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕುಡಿದು ಕುಡಿದು ಈಗ ಆಸ್ಪತ್ರೆ ಸೇರಿದ್ದಾರೆ. ಅವರ ಅತಿಯಾದ ಕುಡಿತವೇ ಬ್ರೇನ್ ನಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣ ಎಂದು ವೈದ್ಯರು ಹೇಳಿದ್ದಾರೆ. ಈ ಮಧ್ಯೆ ಅವರ ಹಳೆ ಸುದ್ದಿಯೊಂದು ವೈರಲ್ ಆಗಿದೆ. 
 


ಟೀಂ ಇಂಡಿಯಾ (Team India)ದ ಮಾಜಿ ಆಟಗಾರ ವಿನೋದ್ ಕಾಂಬ್ಳಿ (Vinod Kambli)  ಆಸ್ಪತ್ರೆ ಸೇರಿದ್ದು ಎಲ್ಲರಿಗೂ ತಿಳಿದಿರೋ ವಿಷ್ಯ. ವಿನೋದ್ ಕಾಂಬ್ಳಿ ಬ್ರೇನ್ ನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಚಿಕಿತ್ಸೆ ನಡೆಯುತ್ತಿದೆ. ಆರಂಭದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲಿದ್ದ ವಿನೋದ್ ಕಾಂಬ್ಳಿ, ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಅವರನ್ನು ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರಿಗೆ ಚಿಕಿತ್ಸೆ ನಡೆಯುತ್ತಿದ್ದು, ಕೆಲ ದಿನಗಳಿಂದ ವಿನೋದ್ ಕಾಂಬ್ಳಿ ಸುದ್ದಿಯಲ್ಲಿದ್ದಾರೆ.

ವಿನೋದ್ ಕಾಂಬ್ಳಿ ಕುಡಿತದ ಚಟಕ್ಕೆ ದಾಸರಾಗಿದ್ದಾರೆ ಎಂಬ ಸುದ್ದಿ ಇದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಸ್ನೇಹಿತರಾಗಿದ್ದ ವಿನೋದ್ ಕಾಂಬ್ಳಿಯನ್ನು ಎರಡನೇ ಸಚಿನ್ ಎಂದೇ ಕರೆಯಲಾಗ್ತಿತ್ತು. ಆದ್ರೆ ಸಚಿನ್ ರಂತೆ ಎತ್ತರಕ್ಕೆ ಏರಿದ್ದ ಕಾಂಬ್ಳೆ ಅಲ್ಲಿ ಬಹುಕಾಲ ನಿಲ್ಲಲಿಲ್ಲ. ಪಾತಾಳಕ್ಕೆ ಕುಸಿದ ಅವರು ತಮ್ಮ ಕುಟುಂಬವನ್ನು ಮಾತ್ರವಲ್ಲ ಎಲ್ಲವನ್ನೂ ಕಳೆದುಕೊಂಡು ಬರಿಗೈನಲ್ಲಿ ನಿಂತಿದ್ದಾರೆ. ಬರೀ ಪಿಂಚಣಿಯಿಂದ ಜೀವನ ನಡೆಸುವ ಸ್ಥಿತಿ ಅವರದ್ದಾಗಿದೆ. ಕೆಲ ದಿನಗಳ ಹಿಂದೆ ಸಚಿನ್ ತೆಂಡೂಲ್ಕರ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದ ಕಾಂಬ್ಳಿಯನ್ನು ಗುರುತಿಸೋದು ಕಷ್ಟವಾಗಿತ್ತು. ಎಷ್ಟೋ ವರ್ಷಗಳ ನಂತ್ರ ಕಾಂಬ್ಳಿ ಮಾಧ್ಯಮದ ಮುಂದೆ ಬಂದಿದ್ದಲ್ಲದೆ, ಸಚಿನ್ ಗುರುತಿಸಲು ಹೆಣಗಾಡಿ, ನಂತ್ರ ತಮ್ಮ ಬಳಿಯೇ ಸಚಿನ್ ಕುಳಿತುಕೊಳ್ಳಬೇಕೆಂದು ಪಟ್ಟು ಹಿಡಿದಿದ್ದರು. ಈ ವಿಡಿಯೋ ವೈರಲ್ ಆದ್ಮೇಲೆ ಕಾಂಬ್ಳಿ ಬಗ್ಗೆ ಅನೇಕ ವಿಷ್ಯಗಳು ಮತ್ತೆ ಚರ್ಚೆಗೆ ಬಂದಿವೆ. 

Tap to resize

Latest Videos

undefined

ಮೆಲ್ಬರ್ನ್‌ನಲ್ಲೇ ಏಕೆ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜಿಸುತ್ತಾರೆ? ಏನಿದರ ಸ್ಪೆಷಾಲಿಟಿ?

ಕಾಂಬ್ಳಿ ಮದ್ಯಪಾನಿ ಎಂಬುದನ್ನು ಆರಂಭದಿಂದಲೂ ಒಪ್ಪಿಕೊಂಡಿಲ್ಲ. ನಾನು ಆಲ್ಕೋಹಾಲ್ ಚಟಕ್ಕೆ ದಾಸನಾಗಿಲ್ಲ, ಸೋಶಿಯಲ್ ಡ್ರಿಂಕರ್ ಎಂದಿದ್ದರು. ಸಂದರ್ಶನವೊಂದರಲ್ಲಿ ಕಾಂಬ್ಳಿ, 10 ಪೆಗ್ ಹಾಕಿದ ಮೇಲೂ ಮರುದಿನ ಕ್ರಿಕೆಟ್ ಮೈದಾನದಲ್ಲಿ ಸೆಂಚೂರಿ ಬಾರಿಸಿದ ವಿಷ್ಯವನ್ನು ಹಂಚಿಕೊಂಡಿದ್ದರು.

ರಾತ್ರಿ ಹತ್ತು ಪೆಗ್ ಏರಿಸಿದ್ದ ಕಾಂಬ್ಳಿ : ರಣಜಿ ಪಂದ್ಯ ನಡೆಯುತ್ತಿದ್ದ ಸಮಯ.  ರಾತ್ರಿ ಕಾಂಬ್ಳಿ ಹತ್ತು ಪೆಗ್ ಮದ್ಯ ಸೇವನೆ ಮಾಡಿದ್ದರಂತೆ. ಇದನ್ನು ನೋಡಿದ ಕೋಚ್ ಬಲ್ವಿಂದರ್ ಸಿಂಗ್ ಟೆನ್ಷನ್ ಗೆ ಒಳಗಾಗಿದ್ದರಂತೆ. ಇಷ್ಟೊಂದು ಸೇವನೆ ಮಾಡಿದ್ಮೇಲೆ ವಿನೋದ್ ಕಾಂಬ್ಳಿ ಬೆಳಿಗ್ಗೆ ಬೇಗ ಏಳೋದು ಅನುಮಾನ ಅಂದ್ಕೊಂಡಿದ್ದರಂತೆ. ಆದ್ರೆ ಬೆಳಿಗ್ಗೆ ಬೇಗ ಎದ್ದು ಮೈದಾನಕ್ಕೆ ಬಂದಿದ್ದ ವಿನೋದ್ ಕಾಂಬ್ಳಿ ಉತ್ತಮ ಪ್ರದರ್ಶನ ತೋರಿದ್ದರಂತೆ. ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದನ್ನು ನೋಡಿದ ಕೋಚ್ ದಂಗಾಗಿದ್ದರು. ಇದೆಲ್ಲ ಹೇಗೆ ಸಾಧ್ಯ ಎಂದು ವಿನೋದ್ ಅವರನ್ನು ಕೇಳಿದ್ದರು. ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದ್ದ ಕಾಂಬ್ಳಿ, ಸಚಿನ್ ಜೊತೆ ಕ್ರಿಕೆಟ್ ತರಬೇತಿ ಪಡೆದಿದ್ದರು. ಸಚಿನ್ ಮೊದಲು ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಆದ್ರೆ ಕೆಲ ವರ್ಷದ ನಂತ್ರ ವಿನೋದ್ ಕಾಂಬ್ಳಿ ಟೀಂ ಇಂಡಿಯಾದಲ್ಲಿ ಜಾಗ ಪಡೆದಿದ್ದರು.

ಐಪಿಎಲ್ ನೃತ್ಯಕ್ಕೆ 10 ನಿಮಿಷಕ್ಕೆ ತಮನ್ನಾ ₹50 ಲಕ್ಷ ಡಿಮ್ಯಾಂಡ್‌!

1991ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ವಿನೋದ್ ಕಾಂಬ್ಳಿ, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಎರಡು ವರ್ಷದ ನಂತ್ರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಧುಮುಕಿದ್ದರು. ಆದ್ರೆ ನಾಲ್ಕು ವರ್ಷದ ನಂತ್ರ ಟೆಸ್ಟ್ ಗೆ ವಿದಾಯ ಹೇಳಿದ್ದ ವಿನೋದ್ ಕಾಂಬ್ಳಿ 2000ರವರೆಗೆ ಏಕದಿನ ಕ್ರಿಕೆಟ್ ನಲ್ಲಿ ಸಕ್ರಿಯವಾಗಿದ್ದರು. ಕಾಂಬ್ಳೆ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು  ನಾಲ್ಕು ಶತಕ  ಸಿಡಿಸಿದ್ದಾರೆ. 104 ಏಕದಿನ ಪಂದ್ಯವನ್ನು ಆಡಿದ ಕಾಂಬ್ಳಿ 3443 ರನ್ ಗಳಿಸಿದ್ದಾರೆ. ಅತಿಯಾದ ಕುಡಿತದಿಂದಾಗಿ ಕಾಂಬ್ಳಿ ಈಗ ಆಸ್ಪತ್ರೆ ಸೇರುವಂತಾಗಿದೆ. ಒಂದೇ ಬಾರಿ ಒಂದೇ ವೃತ್ತಿಯನ್ನು ಆಯ್ದುಕೊಂಡ್ರೂ ಸಚಿನ್ ಹಾಗೂ ಕಾಂಬ್ಳಿ ಮಧ್ಯೆ ಈಗ ಅಜಗಜಾಂತರ ವ್ಯತ್ಯಾಸವಿದೆ. 

click me!