
ಬೆಂಗಳೂರು(ಅ.25): ಕರ್ನಾಟಕ ಹಾಗೂ ತಮಿಳುನಾಡು ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಮಿಳುನಾಡು 252 ರನ್ ಸಿಡಿಸಿದೆ. ಆದರೆ ಈ ಪಂದ್ಯದಲ್ಲಿ ಸ್ಪಿನ್ನರ್ ಬಿಸಿಸಿಐ ಲೋಗೋ ಬಳಸೋ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಇದೀಗ ದಂಡ ಭೀತಿ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ದೇವಧರ್ ಟೂರ್ನಿ: ಮಯಾಂಕ್ ಸೇರಿ 3 ಕನ್ನಡಿಗರಿಗೆ ಸ್ಥಾನ
ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ತಮಿಳುನಾಡು ಆರಂಭದಲ್ಲೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿತು. ವಿಜಯ್ ಶೂನ್ಯಕ್ಕೆ ಔಟಾದರು. 3ನೇ ಕ್ರಮಾಂಕದಲ್ಲಿ ಸಾಮಾನ್ಯವಾಗಿ ಬಾಬಾ ಅಪರಾಜಿತ್ ಕಣಕ್ಕಿಳಿಯುತ್ತಾರೆ. ಆದರೆ ಫೈನಲ್ ಪಂದ್ಯದಲ್ಲಿ ಅಚ್ಚರಿ ಕಾದಿತ್ತು. ಆರ್ ಅಶ್ವಿನ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದರು. ಈ ವೇಳೆ ಆರ್ ಅಶ್ವಿನ್ ಟೀಂ ಇಂಡಿಯಾದಲ್ಲಿ ಬಳಸೋ ಹೆಲ್ಮೆಟ್ ಬಳಸಿದ್ದಾರೆ. ಈ ಹೆಲ್ಮೆಟ್ ಮೇಲೆ ಬಿಸಿಸಿಐ ಲಾಂಛನವಿದೆ. ಇದೇ ಹೆಲ್ಮೆಟನ್ನು ವಿಜಯ್ ಹಜಾರೆ ಟೂರ್ನಿಗೆ ಬಳಸಿ ನಿಯಮ ಉಲ್ಲಂಘಿಸಿದರು.
ಇದನ್ನೂ ಓದಿ: ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಅಶ್ವಿನ್ ಸ್ಥಾನ; ಮೌನ ಮುರಿದ ಮಾಲೀಕ!
ನಿಯಮದ ಪ್ರಕಾರ ಬಿಸಿಸಿಐ ಲೋಗೋ ಇರುವ ಯಾವುದೇ ವಸ್ತುವನ್ನು ದೇಸಿ ಟೂರ್ನಿಯಲ್ಲಿ ಬಳಸುವಂತಿಲ್ಲ. ಹೆಲ್ಮೆಟ್, ಜರ್ಸಿ ಸೇರಿದಂತೆ ಯಾವುದೇ ವಸ್ತು ಬಳಸುವಂತಿಲ್ಲ. ಒಂದು ವೇಳೆ ಅನಿವಾರ್ಯವಾಗಿದ್ದರೆ, ಲೋಗೋ ಸ್ಥಳಕ್ಕೆ ಟೇಪ್‌ನಿಂದ ಮುಚ್ಚಬೇಕು. ಟೀಂ ಇಂಡಿಯಾದಿಂದ ವಾಪಾಸ್ಸಾಗಿ ನೇರವಾಗಿ ಫೈನಲ್ ಪಂದ್ಯ ಆಡಿದ ಮಯಾಂಕ್ ಅಗರ್ವಾಲ್, ತಮ್ಮ ಹೆಲ್ಮೆಟ್‌ಗೆ ಟೇಪ್ ಅಂಟಿಸಿದ್ದರು. ಕೆಎಲ್ ರಾಹುಲ್ ಲೋಗೋ ಇಲ್ಲದ ಹೆಲ್ಮೆಟ್ ಬಳಸಿದ್ದರು. ಆದರೆ ಅಶ್ವಿನ್ ಟೇಪ್ ಅಂಟಿಸಲು ಮರೆತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿಯಮದ ಕುರಿತು ಆಟಗಾರರಿಗೆ ವಿವರಿಸಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿದರೆ ಶಿಕ್ಷೆ ತಪ್ಪಿದ್ದಲ್ಲ. ಮ್ಯಾಚ್ ರೆಫ್ರಿ ಮುಂದಿನಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.