ನವದೆಹಲಿ(ಅ.28): T20 World Cup 2021 ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾದ(Team India) ಸೋಲು ಭಾರತೀಯ ಅಭಿಮಾನಿಗಳಿಗೆ ಹೆಚ್ಚು ನೋವು ತಂದಿದೆ. ಆದರೆ ಟೀಂ ಇಂಡಿಯಾ ಅಭಿಮಾನಿಗಳು ಕೊಹ್ಲಿ ಸೈನ್ಯದ ವಿರುದ್ಧ ತಿರುಗಿಬಿದ್ದಿಲ್ಲ. ಸೋಲು ಅನುಭವಿಸಿದರೂ ಟೀಂ ಇಂಡಿಯಾವನ್ನು ಬೆಂಬಲಿಸಿದ್ದಾರೆ. ಇದರ ನಡುವೆ ದಿಢೀರ್ ಆಗಿ ವೇಗಿ ಮೊಹಮ್ಮದ್ ಶಮಿ(Mohammad Shami) ವಿರುದ್ಧ ನಿಂದನೆ ಬಾರಿ ಸಂಚಲನ ಸೃಷ್ಟಿಸಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳು(Fans) ಶಮಿಯನ್ನು ನಿಂದಿಸುತ್ತಿದ್ದಾರೆ ಅನ್ನೋ ರೀತೀ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗೂ ಅಭಿಯಾನ ಶುರುವಾಗಿತ್ತು. ಇದೀಗ ಇದರ ಅಸಲಿಯತ್ತು ಬಹಿರಂಗೊಂಡಿದೆ. ಇದರ ಹಿಂದೆ ಪಾಕಿಸ್ತಾನ(Pakistan) ವಿಕೃತ ಮನಸ್ಥಿತಿಯವರು ಇದ್ದಾರೆ ಅನ್ನೋದು ದಾಖಲೆ ಸಮೇತ ಬಹಿರಂಗವಾಗಿದೆ. ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಟೀಕೆ ಹಾಗೂ ಖಾತೆ ಕುರಿತ ವಿವರನ್ನು ಬಹಿರಂಗಪಡಿಸಿದೆ.
T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!
undefined
ಪಾಕಿಸ್ತಾನ(India vs Pakistan) ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ದುಬಾರಿ ಬೌಲಿಂಗ್ ಮಾಡಿದ್ದಾರೆ. ಶಮಿ ಪಾಕಿಸ್ತಾನ ಪ್ರೇಮಿ. ಪಾಕಿಸ್ತಾನ ಎಜೆಂಟ್. ಹೀಗಾಗಿ ಪಾಕಿಸ್ತಾನ ತಂಡಕ್ಕೆ ನೆರವಾಗಿದ್ದಾರೆ ಎಂದು ನಿಂದಿಸಲಾಗಿತ್ತು. ಶಮಿ ನಿಂದನೆ ಹೆಚ್ಚಾಗುತ್ತಿದ್ದಂತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್(Sachin Tendulkar), ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಭಾರತೀಯ ಕ್ರಿಕೆಟಿಗರು ಅಭಿಮಾನಿಗಳು ಶಮಿ ಬೆಂಬಲಕ್ಕೆ ನಿಂತಿದ್ದಾರೆ. ಇತ್ತ ಬಿಸಿಸಿಐ ಕೂಡ ಶಮಿಗೆ ಬೆಂಬಲ ಸೂಚಿಸಿತ್ತು.
ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಸೇರಿ ಪಾಕಿಸ್ತಾನ ಮಾಜಿ ಕ್ರಿಕಟಿಗರೂ ಶಮಿಗೆ ಬೆಂಬಲ ಸೂಚಿಸಿದ್ದರು. ಆದರೆ ಶಮಿ ವಿರುದ್ಧ ನಿಂದನೆ ಮಾತ್ರ ಕಡಿಮೆಯಾಗರಲಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದ ವಿಕೃತ ಮನಸ್ಥಿತಿ ಅಭಿಮಾನಿಗಳು ಶಮಿ ನಿಂದಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ.
Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್ ದೇವರು!
ಪಾಕಿಸ್ತಾನ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆ, ನಕಲಿ ಖಾತೆಗಳ(Fake Account) ಮೂಲಕ ಶಮಿಯನ್ನು ನಿಂದಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೈಝಿಗ್ರಾಮ್ ಅನ್ನೋ ಖಾತೆಯಿಂದ ಶಮಿ ಪಾಕಿಸ್ತಾನದ ಐಎಸ್ಐ ಎಜೆಂಟ್ ಎಂದು ನಿಂದಿಸಿದ್ದರು. ಈ ಖಾತೆ ಸಾಮಾಜಿಕ ಜಾಲತಾಣ ಖಾತೆ ಪಾಕಿಸ್ತಾನದ ಫೈಜ್ ರಸೂಲ್ ಸೈಲ್ ಅನ್ನೋ ವ್ಯಕ್ತಿಯದ್ದು. ಈತ ಸಾಮಾಜಿಕ ಜಾಲತಾಣದಲ್ಲಿ ತಾನು ವಕೀಲ ಎಂದು ಹಾಕಿಕೊಂಡಿದ್ದಾನೆ.
ಶಮಿ ವಿರುದ್ಧ ಟೀಕೆ ಹಾಗೂ ನಿಂದಿಸಿದ ವ್ಯಕ್ತಿಗಳಲ್ಲಿ ಬಹುತೇಕರು ಪಾಕಿಸ್ತಾನದವರು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಪಾಕಿಸ್ತಾನ ವಿರುದ್ಧ ಸೋಲಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ಪಾಕ್ ಅಭಿಮಾನಿಗಳ ರೀತಿ ಟಿವಿ ಒಡೆದು, ತಂಡದ ವಿರುದ್ದ ನಿಂದನೆ ಮಾಡಿರಲಿಲ್ಲ. ಸೋಲು ಅನುಭವಿಸಿದರೂ, ಟೀಂ ಇಂಡಿಯಾವನ್ನು ಬೆಂಬಲಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ಟಾಂಡ್ ವಿಥ್ ಟೀಂ ಇಂಡಿಯಾ ಅಭಿಯಾನ ಆರಂಭಿಸಿದ್ದರು. ಗೆಲುವಿನ ಸಂಭ್ರಮದಲ್ಲಿದ್ದ ಪಾಕಿಸ್ತಾನದ ಕೆಲ ಅಭಿಮಾನಿಗಳಿಗೆ ಇದು ಸಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಮಿಯನ್ನು ನಿಂದಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಪಾಕಿಸ್ತಾನ 10 ವಿಕೆಟ್ ಭರ್ಜರಿ ಗೆಲುವು ಕಂಡಿತ್ತು. ಇದರೊಂದಿಗೆ ಭಾರತ ವಿಶ್ವಕಪ್ ಟೂರ್ನಿಯನ್ನು(T20 World Cup 2021) ಸೋಲಿನೊಂದಿಗೆ ಆರಂಭಿಸಿತ್ತು.